ಬೆಂಗಳೂರು: 2019ರ ದುಲೀಪ್ ಟ್ರೋಫಿಯಲ್ಲಿ ಪ್ರಿಯಾಂಕ್ ಪಾಂಚಾಲ್ ನೇತೃತ್ವದ ಇಂಡಿಯಾ ರೆಡ್ ತಂಡ ಇನ್ನಿಂಗ್ಸ್ ಹಾಗೂ 38 ರನ್ಗಳಿಂದ ಗ್ರೀನ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಗ್ರೀನ್ ತಂಡ 231 ರನ್ಗಳಿಗೆ ಆಲ್ಔಟ್ ಆಗಿತ್ತು. ಇದಕ್ಕುತ್ತರವಾಗಿ ರೆಡ್ ತಂಡದ ಅಭಿಮನ್ಯು ಈಶ್ವರನ್(153) ಅವರ ಶತಕದ ನೆರವಿನಿಂದ 388 ರನ್ಗಳಿಸಿ 157 ರನ್ಗಳ ಮುನ್ನಡೆ ಸಾಧಿಸಿತ್ತು.

157 ರನ್ಗಳ ಹಿನ್ನಡೆಯನುಭವಿಸಿದ ಗ್ರೀನ್ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 119 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 38 ರನ್ಗಳಿಂದ ಸೋಲನುಭವಿಸಿತು.
ರೆಡ್ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅಕ್ಷಯ್ ವಾಖರೆ 5 ವಿಕೆಟ್, ಆವೇಶ್ ಖಾನ್ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.