ನವದೆಹಲಿ: ತಮ್ಮ ತಂಡವನ್ನು ಚಾಂಪಿಯನ್ ಮಾಡಲೇ ಬೇಕೆಂದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ 2020 ರ ಐಪಿಎಲ್ಗೆ ರಾಜಸ್ಥಾನ ರಾಯಲ್ಸ್ ತಂಡದ ಅಜಿಂಕ್ಯಾ ರಹಾನೆ ಅವರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
2019 ರ ಸೀಸನ್ನಲ್ಲಿ ಜಿಂದಾಲ್ ಸ್ಟೀಲ್ ವರ್ಕ್ಸ್ (ಜೆಎಸ್‌ಡಬ್ಲ್ಯು) ಡೆಲ್ಲಿ ಫ್ರಾಂಚೈಸಿ ತಂಡದ ಮಾಲೀಕತ್ವ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ಎಂದು ಹೆಸರು ಬದಲಿಸಿಕೊಂಡು ಹಲವಾರು ಬದಲಾವಣೆ ತಂದುಕೊಂಡಿತ್ತು.
ಕಳೆದ ಬಾರಿ ಸನ್ರೈಸರ್ಸ್ನಲ್ಲಿದ್ದ ಶಿಖರ್ ಧವನ್ರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಡೆಲ್ಲಿ ಇದೀಗ, ರಹಾನೆ ಅವರನ್ನೂ ಕೂಡ ಸೆಳೆದುಕೊಳ್ಳಲು ಪ್ರಯತ್ನಿಸಿದೆ. 10 ವರ್ಷಗಳ ಬಳಿಕ ಕ್ವಾಲಿಫೈಯರ್ ಪ್ರವೇಶಿಸಿದ್ದ ಡೆಲ್ಲಿ, ಮುಂದಿನ ಬಾರಿಯೂ ಇದೇ ಪ್ರದರ್ಶನ ತೋರುವ ಉದ್ದೇಶದಿಂದ ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮೇಲೆ ಕಣ್ಣಿಟ್ಟಿದ್ದು ರಾಯಲ್ಸ್ ಫ್ರಾಂಚೈಸಿ ಜೊತೆಗೆ ಮಾತುಕತೆಯಲ್ಲಿ ತೊಡಗಿದೆ.
IANS ಮೂಲಗಳ ಪ್ರಕಾರ ರಹಾನೆ ಅವರನ್ನು ತೆಗೆದುಕೊಳ್ಳುವ ವಿಚಾರವಾಗಿ ರಾಜಸ್ಥಾನ್ ರಾಯಲ್ಸ್ ಜೊತೆಗೆ ಮಾತುಕತೆ ಚಾಲ್ತಿಯಲ್ಲಿದ್ದು ಎಲ್ಲವೂ ಸರಿಯಾದ ರೀತಿಯಲ್ಲಿ ಸಾಗಿದರೆ 2020ರ ಐಪಿಎಲ್ ಆವೃತ್ತಿಯಲ್ಲಿ ರಹಾನೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ.
ರಹಾನೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯ್ಲಲ್, ರೈಸಿಂಗ್ ಪುಣೆ ಸೂಪರ್ಜೆಂಟ್ ತಂಡಗಳನ್ನು ಪ್ರತಿನಿಧಿಸಿ 140 ಪಂದ್ಯಗಳನ್ನಾಡಿದ್ದಾರೆ. 3,820 ರನ್ಗಳಿಸಿರುವ ರಹಾನೆ 2 ಶತಕ 27 ಅರ್ಧಶತಕ ಬಾರಿಸಿದ್ದಾರೆ.