ಕೊಲಂಬೊ: ಶ್ರೀಲಂಕಾದ ಕೇರಮ್ ಬಾಲ್ ಸ್ಪೆಷಲಿಸ್ಟ್ ಅಜಂತಾ ಮೆಂಡಿಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಏಕದಿನ, ಟಿ-20 ಹಾಗೂ ಟೆಸ್ಟ್ ಮೂರು ವಿಭಾಗದದಲ್ಲೂ 6 ವಿಕೆಟ್ ಗೊಂಚಲು ಪಡೆದಿದ್ದ ವಿಶ್ವದ ಏಕೈಕ ಬೌಲರ್ ಎಂಬ ಖ್ಯಾತಿಗಳಿಸಿರುವ ಮೆಂಡಿಸ್ ಕಳೆದ 4 ವರ್ಷಗಳಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಎಲ್ಲ ಮಾದರಿ ಕ್ರಿಕೆಟ್ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
-
🚨 JUST IN 🚨
— ICC (@ICC) August 28, 2019 " class="align-text-top noRightClick twitterSection" data="
Ajantha Mendis has retired from all forms of cricket!
The Sri Lankan spinner took 288 wickets for his country across the three formats. pic.twitter.com/ZwABGqvRWf
">🚨 JUST IN 🚨
— ICC (@ICC) August 28, 2019
Ajantha Mendis has retired from all forms of cricket!
The Sri Lankan spinner took 288 wickets for his country across the three formats. pic.twitter.com/ZwABGqvRWf🚨 JUST IN 🚨
— ICC (@ICC) August 28, 2019
Ajantha Mendis has retired from all forms of cricket!
The Sri Lankan spinner took 288 wickets for his country across the three formats. pic.twitter.com/ZwABGqvRWf
2008ರಲ್ಲಿ ಭಾರತದ ವಿರುದ್ಧ ಪದಾರ್ಪಣೆ ಮಾಡಿದ್ದ ಮೆಂಡಿಸ್ ತಮ್ಮ ಕೇರಮ್ ಬಾಲ್ ಮೂಲಕ 13 ರನ್ ನೀಡಿ 6 ವಿಕೆಟ್ ಪಡೆದು ಭಾರತ ತಂಡಕ್ಕೆ ಆಘಾತ ನೀಡಿದ್ದರು. ನಂತರ ಅದೇ ವರ್ಷ ಭಾರತದ ವಿರುದ್ಧ ಟೆಸ್ಟ್ಗೆ ಪದಾರ್ಪಣೆ ಮಾಡಿ ಆ ಸರಣಿಯಲ್ಲಿ 26 ವಿಕೆಟ್ ಪಡೆದಿದ್ದರಲ್ಲದೇ ಡೆಬ್ಯು ಪಂದ್ಯದಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದರು.
ಮೆಂಡಿಸ್ ಟಿ-20 ಕ್ರಿಕೆಟ್ನಲ್ಲಿ 2 ಬಾರಿ 6 ವಿಕೆಟ್ ಪಡೆದ ಬೌಲರ್ ಹಾಗೂ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ 6 ವಿಕೆಟ್ ಪಡೆದ ಬೌಲರ್ ಎಂಬ ವಿಶ್ವದಾಖಲೆ ಹೊಂದಿದ್ದಾರೆ. ಇವರು ಲಂಕಾ ಪರ 19 ಟೆಸ್ಟ್ ಪಂದ್ಯದಿಂದ 70 ವಿಕೆಟ್, 87 ಏಕದಿನ ಪಂದ್ಯಗಳಿಂದ 152 ವಿಕೆಟ್ ಹಾಗೂ 39 ಟಿ-20 ಪಂದ್ಯಗಳಿಂದ 66 ವಿಕೆಟ್ ಪಡೆದಿದ್ದಾರೆ.