ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧ 3ನೇ ಟಿ20 ಪಂದ್ಯವನ್ನು 64 ರನ್ಗಳಿಂದ ಮಣಿಸುವ ಮೂಲಕ ಆಸ್ಟ್ರೇಲಿಯಾ ತಂಡ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
5 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ತಂಡ ಕ್ರಮವಾಗಿ 53 ಮತ್ತು 4 ರನ್ಗಳಿಂದ ಜಯ ಸಾಧಿಸಿತ್ತು. ಇಂದು 3ನೇ ಪಂದ್ಯದಲ್ಲಿ ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಲ್ರೌಂಡ್ ಪ್ರದರ್ಶನದ ಮೂಲಕ ಗೆಲುವು ಸಾಧಿಸಿತು.
ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್(69), ಗ್ಲೇನ್ ಮ್ಯಾಕ್ಸ್‌ವೆಲ್(71) ಅರ್ಧಶತಕ ಮತ್ತು ಫಿಲಿಪ್ಪೆ ಅವರ 43 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 208 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು.
-
Australia win the third #NZvAUS T20I by 64 runs!
— ICC (@ICC) March 3, 2021 " class="align-text-top noRightClick twitterSection" data="
Ashton Agar's 6/30 are the best figures by an Australian in men's T20Is as New Zealand were bowled out for 144.
📝Scorecard: https://t.co/SauGpoGf1F pic.twitter.com/dXKnn2Veu0
">Australia win the third #NZvAUS T20I by 64 runs!
— ICC (@ICC) March 3, 2021
Ashton Agar's 6/30 are the best figures by an Australian in men's T20Is as New Zealand were bowled out for 144.
📝Scorecard: https://t.co/SauGpoGf1F pic.twitter.com/dXKnn2Veu0Australia win the third #NZvAUS T20I by 64 runs!
— ICC (@ICC) March 3, 2021
Ashton Agar's 6/30 are the best figures by an Australian in men's T20Is as New Zealand were bowled out for 144.
📝Scorecard: https://t.co/SauGpoGf1F pic.twitter.com/dXKnn2Veu0
209 ರನ್ಗಳ ಗುರಿ ಬೆನ್ನತ್ತಿದ ಅತಿಥೇಯ ನ್ಯೂಜಿಲ್ಯಾಂಡ್ ತಂಡ 17.1 ಓವರ್ಗಳಲ್ಲಿ 144 ರನ್ಗಳಿಗೆ ಆಲೌಟ್ ಆಗುವ ಮೂಲಕ 64 ರನ್ಗಳ ಸೋಲು ಕಂಡಿತು. ಮಾರ್ಟಿನ್ ಗಪ್ಟಿಲ್ 43 ಮತ್ತು ಕಾನ್ವೆ 38 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಆಸ್ಟ್ರೇಲಿಯಾ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಆಶ್ಟನ್ ಅಗರ್ 30 ರನ್ ನೀಡಿ 6 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಇಂದೇ ಪಾದಾರ್ಪಣೆ ಮಾಡಿದ ಮೆರೆಡಿತ್ 2 ವಿಕೆಟ್ ಪಡೆದರೆ, ಜಂಪಾ ಮತ್ತು ಕೇನ್ ರಿಚರ್ಡ್ಸನ್ ತಲಾ ಒಂದು ವಿಕೆಟ್ ಪಡೆದರು.
ಮಾರ್ಚ್ 5ರಂದು 4 ಮತ್ತು ಮಾರ್ಚ್ 7ರಂದು 5ನೇ ಟಿ20 ಪಂದ್ಯ ನಡೆಯಲಿದೆ.
ಇದನ್ನು ಓದಿ:ಒಂದೇ ಓವರ್‌ನಲ್ಲಿ 28 ರನ್! ಕಿವೀಸ್ ವಿರುದ್ಧ ಮ್ಯಾಕ್ಸ್‌ವೆಲ್ ಆರ್ಭಟ; ಮುರಿದೇ ಹೋಯ್ತು ಸ್ಟ್ಯಾಂಡ್ ಆಸನ