ETV Bharat / sports

ಕ್ರಿಕೆಟ್​ನಿಂದ ಭಾರತ-ಪಾಕಿಸ್ತಾನದ ನಡುವೆ ಸಂಬಂಧ ಸುಧಾರಣೆ ಸಾಧ್ಯ: ಶಾಹಿದ್ ಅಫ್ರಿದಿ

ಪಾಕಿಸ್ತಾನ ಮತ್ತು ಭಾರತ ನಡುವಿನ ಕ್ರಿಕೆಟ್​ ಮಹತ್ವದ್ದಾಗಿದೆ. ಕ್ರೀಡೆ ರಾಜಕೀಯವನ್ನು ದೂರಮಾಡುವ ಶಕ್ತಿ ಹೊಂದಿದೆ. ಕ್ರಿಕೆಟ್​ನಿಂದ ಎರಡು ದೇಶಗಳ ನಡುವಿನ ಸಂಬಂಧ ಸುಧಾರಿಸಬಹುದು ಎಂದು ಅಫ್ರಿದಿ ಹೇಳಿದ್ದಾರೆ.

ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್​
ಶಾಹೀದ್ ಅಫ್ರಿದಿ
author img

By

Published : Mar 25, 2021, 6:43 PM IST

ಲಾಹೋರ್​: ಕ್ರಿಕೆಟ್‌ನಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಸುಧಾರಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2012-13 ರ ನಂತರ ಭಾರತ - ಪಾಕಿಸ್ತಾನದ ನಡುವೆ ಈ ವರ್ಷದಲ್ಲಿ ದ್ವಿಪಕ್ಷೀಯ ಸರಣಿ ನಡೆಯುತ್ತದೆ ಎಂಬ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿರುವ ವಿಡಿಯೋವನ್ನು ಅಫ್ರಿದಿ ಪೌಂಡೇಶನ್​ ಶೇರ್​ ಮಾಡಿದೆ.

ಉಭಯ ದೇಶಗಳ ನಡುವಿನ ಕ್ರಿಕೆಟ್​ ಮಹತ್ವದ್ದಾಗಿದೆ. ಕ್ರೀಡೆ ರಾಜಕೀಯವನ್ನು ದೂರಮಾಡುವ ಶಕ್ತಿ ಹೊಂದಿದೆ. ಕ್ರಿಕೆಟ್​ನಿಂದ ಎರಡು ದೇಶಗಳ ನಡುವಿನ ಸಂಬಂಧ ಸುಧಾರಿಸಬಹುದು ಎಂದಿದ್ದಾರೆ.

  • Shahid Afridi 'Cricket's played a big role in relations between India & Pakistan & should be kept away from politics.Indian & Pakistani players always enjoyed themsleves in each other's countries. Relations can improve if they want to - if there's a will, there's a way" #Cricket pic.twitter.com/iEa9AdYASB

    — TEAM AFRIDI (@TEAM_AFRIDI) March 23, 2021 " class="align-text-top noRightClick twitterSection" data=" ">

ಭಾರತೀಯ ಕ್ರಿಕೆಟಿಗರು ಪಾಕಿಸ್ತಾನಕ್ಕೆ ಬರುವುದನ್ನು ಆನಂದಿಸುತ್ತಾರೆ ಎಂದು ನಾನು ಮೊದಲೇ ಹೇಳಿದ್ದೇನೆ. ನೀವು ಕ್ರೀಡೆಗಳ ಮೂಲಕ ಸಂಬಂಧವನ್ನು ಸುಧಾರಿಸಬಹುದು. ಆದರೆ ನೀವು ಅದನ್ನು ಸುಧಾರಿಸಲು ಬಯಸದಿದ್ದರೆ ಈಗಿನ ಪರಿಸ್ಥಿತಿ ಹಾಗೆಯೇ ಉಳಿಯುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಾಂಪ್ರದಾಯಿಕ ಎದುರಾಳಿಗಳ ನಡುವೆ ಫೈಟ್​.. ಇದೇ ವರ್ಷ ನಡೆಯಲಿದ್ಯಾ ಕ್ರಿಕೆಟ್​​ ಸರಣಿ!?

ಪಾಕಿಸ್ತಾನದ ಪತ್ರಿಕೆಯೊಂದು, ಈ ವರ್ಷ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ-20 ಕ್ರಿಕೆಟ್​ ಸರಣಿ ನಡೆಯಲಿದೆ ಎಂದು ವರದಿ ಮಾಡಿತ್ತು. ಆದರೆ ಪಿಸಿಬಿ ಮಾತ್ರ ಇದರ ಬಗ್ಗೆ ಬಿಸಿಸಿಐನ ಯಾವೊಬ್ಬ ಅಧಿಕಾರಿಯೊಂದಿಗೆ ನೇರವಾಗಿ ಇದುವರೆಗೆ ಚರ್ಚಿಸಿಲ್ಲ. ಆದರೆ ಸೂಚನೆ ಬಂದಿದೆ, ಅಂತಹ ಸರಣಿಗಾಗಿ ಸಿದ್ಧರಾಗಿ ಎಂದು ನಮಗೆ ತಿಳಿಸಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.