ಕಾಬುಲ್: ಅಫ್ಘಾನಿಸ್ತಾನ ತಂಡ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಮೊಹಮ್ಮದ್ ಶಹ್ಜಾದ್ರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಶಹ್ಜಾದ್ರನ್ನು ಎಸಿಬಿಯ ನಿಯಮಾವಳಿಗಳನ್ನು ಮುರಿದಿರುವ ಆರೋಪದ ಮೇಲೆ ಅನಿರ್ಧಾಷ್ಟಾವಧಿ ಕ್ರಿಕೆಟ್ನಿಂದ ನಿಷೇಧವೇರಿದೆ. ಎಸಿಬಿ ನಿಯಮದ ಪ್ರಕಾರ ಯಾವುದೇ ಅಫ್ಘಾನಿಸ್ತಾನದ ಆಟಗಾರ ವಿದೇಶ ಪ್ರವಾಸ ಕೈಗೊಳ್ಳಬೇಕಾದರೆ ಬೋರ್ಡ್ನಿಂದ ಅನುಮತಿ ಪಡೆಯಬೇಕು. ಆದರೆ ವಿದೇಶ ಪ್ರವಾಸಕ್ಕೆ ಅನುಮತಿ ಪಡೆಯದೇ ಪ್ರಯಾಣ ಮಾಡಿರುವುದೇ ಅಮಾನತಿಗೆ ಕಾರಣವೆಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ಕಳೆದ ತಿಂಗಳು ನಡೆದ ವಿಶ್ವಕಪ್ ಟೂರ್ನಿಯ ವೇಳೆ ಮಂಡಿ ನೋವಿಗೆ ತುತ್ತಾಗಿದ್ದ ಶೆಹ್ಜಾದ್ರನ್ನು ಗಾಯದ ಕಾರಣ ನೀಡಿ ಟೂರ್ನಿಯಿಂದ ಕೈಬಿಡಲಾಗಿತ್ತು. ಆದರೆ ಶಹ್ಜಾದ್ ತಾವು ಗಾಯಗೊಂಡಿಲ್ಲ, ಬೋರ್ಡ್ ತಮ್ಮನ್ನು ಯಾವುದೇ ಕಾರಣವಿಲ್ಲದೆ ತಂಡದಿಂದ ಕೈಬಿಟ್ಟಿದೆ ಎಂದು ಆರೋಪಿಸಿ, ಕ್ರಿಕೆಟ್ ತೊರೆಯುವ ಬಗ್ಗೆ ಮಾತನಾಡಿದ್ದರು.
ಎಸಿಬಿ ಶಹ್ಜಾದ್ ಬೋರ್ಡ್ ವಿರುದ್ಧ ಹೇಳಿಕೆ ನೀಡಿ ನೀತಿ ಸಂಹಿತೆ ಉಲ್ಲಂಘಸಿದ್ದಾರೆ ಎಂದು ಶಿಸ್ತು ಸಮಿತಿ ಶೆಹ್ಜಾದ್ಗೆ ವಿಚಾರಣೆಗೆ ಹಾಜರಾಗಿ, ಪ್ರತಿಕ್ರಿಯಿಸುವಂತೆ ತಿಳಿಸಿತ್ತು. ಆದ್ರೆ ಜೂನ್ 20 ಮತ್ತು 25 ರಂದು ನಡೆದಿದ್ದ ಆ ಸಭೆಗೂ ಶೆಹ್ಜಾದ್ ಹಾಜರಾಗಿರಲಿಲ್ಲ. ಈ ವಿಚಾರ ಕೂಡ ಈದ್ ರಜೆಯ ನಂತರ ಸಭೆ ಸೇರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದಕ್ಕೂ ಶೆಹ್ಜಾದ್ ಶಿಕ್ಷೆ ಅನುಭವಿಸಬೇಕಾಗಿದೆ.