ಸೌತಾಂಪ್ಟನ್ : ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 3 ವಿಕೆಟ್ ಸೇರಿ ಟೂರ್ನಿಯಲ್ಲಿ 6 ವಿಕೆಟ್ ಪಡೆದ ಆದಿಲ್ ರಶೀದ್ರನ್ನು ಪ್ರಸ್ತುತ ಸೀಮಿತ ಓವರ್‌ಗಳ ಅತ್ಯುತ್ತಮ ಸ್ಪಿನ್ನರ್ ಎಂದು ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೊಯಿನ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
ಲೆಗ್ ಸ್ಪಿನ್ನರ್ ಕೊನೆಯ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್(6), ಆ್ಯರೋನ್ ಫಿಂಚ್(39) ಮತ್ತು ಸ್ಟಿವ್ ಸ್ಮಿತ್(3)ರನ್ನು ಪೆವಿಲಿಯನ್ಗಟ್ಟಿದ್ದರು. ರಶೀದ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಇಂಗ್ಲೆಂಡ್ಗೆ ಗೆಲುವು ತಂದು ಕೊಡಲಾಗಲಿಲ್ಲವಾದ್ರೂ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಆಸ್ಟ್ರೇಲಿಯಾ ಕೊನೆಯ ಓವರ್‌ವರೆಗೆ ಹೋಗುವಂತೆ ಮಾಡಿತು.
ನಿನ್ನೆಯ ಪಂದ್ಯದಲ್ಲಿ ನಾಯಕರಾಗಿದ್ದ ಮೊಯಿನ್, ರಶೀದ್ ನಮಗೆ ಸಿಕ್ಕಿರುವ ಅದ್ಭುತ ಬೌಲರ್, ಅವರ ಉತ್ತಮ ಬೌಲಿಂಗ್ ಕೌಶಲ್ಯಗಳನ್ನು ಹೊಂದಿದ್ದಾರೆ. ಅವರು ನಿಜಕ್ಕೂ ಚಾಣಕ್ಯ ಮತ್ತು ಹಾಗಾಗಿಯೇ ಅವರು ಇಂಗ್ಲೆಂಡ್ ಸೀಮಿತ ಓವರ್ಗಳಲ್ಲಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ ಬೌಲರ್ ಆಗಿದ್ದಾರೆ. ಅಷ್ಟೇ ಅಲ್ಲ, ಪ್ರಸ್ತುತ ಸೀಮಿತ ಓವರ್ಗಳಲ್ಲಿಯೇ ವಿಶ್ವದ ಶ್ರೇಷ್ಠ ಸ್ಪಿನ್ನರ್ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಜೋಸ್ ಬಟ್ಲರ್ ಕುರಿತು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ."ಅವರು ವಿಶ್ವದರ್ಜೆಯ ಆಟಗಾರ, ಒಬ್ಬ ಮಹಾನ್ ನಾಯಕ ಎಂದು ಮೊಯಿನ್ ಹೇಳಿದ್ದಾರೆ.
ಅವರು ನಮ್ಮ ಆಟದ ವಿಧಾನವನ್ನೇ ಬದಲಾಯಿಸಿದ್ದಾರೆ. ಅವರು ತಂಡಕ್ಕಾಗಿ ಸಾಕಷ್ಟನ್ನು ತಂದಿದ್ದಾರೆ. ಅಲ್ಲದೆ ಅವರೂ ರನ್ಗಳಿಸಿದ್ದರೂ ತಂಡದಲ್ಲಿದ್ದರೆ ಸಾಕು ಇಡೀ ಡ್ರೆಸ್ಸಿಂಗ್ ರೂಮ್ ಅದ್ಭುತವಾಗಿರುತ್ತದೆ. ಭವಿಷ್ಯದಲ್ಲಿ ಅವರಿಂದ ಉತ್ತಮ ಪ್ರದರ್ಶನ ಬರಲಿವೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.