ETV Bharat / sports

ಏಷ್ಯಾಕಪ್​ ಕ್ರಿಕೆಟ್ ಸೆಮಿಫೈನಲ್​​​: ರೋಚಕ ಹಂತದಲ್ಲಿ ಪಾಕ್​ ವಿರುದ್ಧ ಸೋತ ಯಂಗ್​ ಇಂಡಿಯಾ! ​

author img

By

Published : Nov 21, 2019, 4:50 AM IST

23 ವರ್ಷದೊಳಗಿನ ಎಮರ್ಜಿಂಗ್​ ಏಷ್ಯಾಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕ್​ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.

ಏಷ್ಯಾಕಪ್​ ಕ್ರಿಕೆಟ್ ಸೆಮಿಫೈನಲ್

ಢಾಕಾ: ಎಮರ್ಜಿಂಗ್ ಏಷ್ಯಾಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಸೋಲು ಕಂಡು ಸರಣಿಯಿಂದ ಹೊರಬಿದ್ದಿದೆ.

ಶೇರ್​ ಎ ಬಾಂಗ್ಲಾ ರಾಷ್ಟ್ರೀಯ ಮೈದಾನದಲ್ಲಿ ನಡೆದ 23 ವರ್ಷದೊಳಗಿನ ಏಷ್ಯಾಕಪ್​​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಪಾಕ್​ ಯುಸೂಫ್​ ಗಳಿಸಿದ 66ರನ್​​ಗಳ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 7ವಿಕೆಟ್​ ಕಳೆದುಕೊಂಡು 267ರನ್​ಗಳಿಕೆ ಮಾಡಿತು.

ACC Emerging Teams Asia Cup
ಪಾಕ್​ ವಿರುದ್ಧ ಸೋತ ಟೀಂ ಇಂಡಿಯಾ
ಇದರ ಬೆನ್ನತ್ತಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಳ್ತು. ಮೊದಲ 6 ಓವರ್​ಗಳಲ್ಲಿ 40ರನ್​ಗಳಿಕೆ ಮಾಡಿ ಸುಲಭವಾಗಿ ಗೆಲುವು ಸಾಧಿಸುವ ವಿಶ್ವಾಸದಲ್ಲಿತ್ತು. ಅದರಂತೆ 3ವಿಕೆಟ್​ ಕಳೆದುಕೊಂಡು 210ರನ್​ಗಳಿಕೆ ಮಾಡ್ತು. ಈ ವೇಳೆ ಪಾಕ್​ ಬೌಲಿಂಗ್​ ದಾಳಿಗೆ ದಿಢೀರ್ ಕುಸಿತ ಕಂಡ ಭಾರತ ಕೊನೆ ಓವರ್​​ನಲ್ಲಿ ಮೂರು ರನ್​ಗಳ ಅಂತರದಿಂದ ಸೋಲು ಕಂಡು ಪ್ರಶಸ್ತಿ ಗೆಲುವ ಆಸೆ ಕೈಚೆಲ್ಲಿತು.
ACC Emerging Teams Asia Cup
ಪಾಕ್​ ಪ್ಲೇಯರ್ಸ್ ಸಂಭ್ರಮಾಚರಣೆ

ಭಾರತಕ್ಕೆ ಕೊನೆ ಓವರ್​​ನಲ್ಲಿ ಗೆಲುವು ದಾಖಲು ಮಾಡಲು 8ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಬೌಲಿಂಗ್​ ಮಾಡಿದ ಅಮಾದ್​ ಭಟ್​ ಕೇವಲ 4ರನ್ ಬಿಟ್ಟುಕೊಟ್ಟು, ತಂಡಕ್ಕೆ ಮಾರಕವಾದರು. ಭಾರತದ ಪರ ಸನ್ವೀರ್​ ಸಿಂಗ್​ 76ರನ್​, ಜಾಫರ್​​ 46 ಹಾಗೂ ಶರತ್​ 47ರನ್​ಗಳಿಕೆ ಮಾಡಿದರು. ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ಹಾಗೂ ಆಫ್ಘಾನಿಸ್ತಾನ ತಂಡ ಮುಖಾಮುಖಿಯಾಗುತ್ತಿದ್ದು ಗೆಲುವು ಸಾಧಿಸುವ ತಂಡ ಫೈನಲ್​​ನಲ್ಲಿ ಪಾಕ್​ ವಿರುದ್ಧ ಪ್ರಶಸ್ತಿಗಾಗಿ ಫೈಟ್​ ನಡೆಸಲಿದೆ.

Intro:Body:

ಏಷ್ಯಾಕಪ್​ ಕ್ರಿಕೆಟ್ ಸೆಮಿಫೈನಲ್​​​: ರೋಚಕ ಹಂತದಲ್ಲಿ ಪಾಕ್​ ವಿರುದ್ಧ ಸೋತ ಯಂಗ್​ ಇಂಡಿಯಾ! ​​

ಢಾಕಾ: ಎಮರ್ಜಿಂಗ್ ಏಷ್ಯಾಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಸೋಲು ಕಂಡು ಸರಣಿಯಿಂದ ಹೊರಬಿದ್ದಿದೆ. 

ಶೇರ್​ ಎ ಬಾಂಗ್ಲಾ ರಾಷ್ಟ್ರೀಯ ಮೈದಾನದಲ್ಲಿ ನಡೆದ 23 ವರ್ಷದೊಳಗಿನ ಏಷ್ಯಾಕಪ್​​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಪಾಕ್​ ಯುಸೂಫ್​ ಗಳಿಸಿದ 66ರನ್​​ಗಳ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 7ವಿಕೆಟ್​ ಕಳೆದುಕೊಂಡು 267ರನ್​ಗಳಿಕೆ ಮಾಡಿತು.  

ಇದರ ಬೆನ್ನತ್ತಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಳ್ತು. ಮೊದಲ 6 ಓವರ್​ಗಳಲ್ಲಿ 40ರನ್​ಗಳಿಕೆ ಮಾಡಿ ಸುಲಭವಾಗಿ ಗೆಲುವು ಸಾಧಿಸುವ ವಿಶ್ವಾಸದಲ್ಲಿತ್ತು. ಅದರಂತೆ 3ವಿಕೆಟ್​ ಕಳೆದುಕೊಂಡು 210ರನ್​ಗಳಿಕೆ ಮಾಡ್ತು. ಈ ವೇಳೆ ಪಾಕ್​ ಬೌಲಿಂಗ್​ ದಾಳಿಗೆ ದಿಢೀರ್ ಕುಸಿತ ಕಂಡ ಭಾರತ ಕೊನೆ ಓವರ್​​ನಲ್ಲಿ ಮೂರು ರನ್​ಗಳ ಅಂತರದಿಂದ ಸೋಲು ಕಂಡು ಪ್ರಶಸ್ತಿ ಗೆಲುವ ಆಸೆ ಕೈಚೆಲ್ಲಿತು. 

ಭಾರತಕ್ಕೆ ಕೊನೆ ಓವರ್​​ನಲ್ಲಿ ಗೆಲುವು ದಾಖಲು ಮಾಡಲು 8ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಬೌಲಿಂಗ್​ ಮಾಡಿದ ಅಮಾದ್​ ಭಟ್​ ಕೇವಲ 4ರನ್ ಬಿಟ್ಟುಕೊಟ್ಟು, ತಂಡಕ್ಕೆ ಮಾರಕವಾದರು. ಭಾರತದ ಪರ ಸನ್ವೀರ್​ ಸಿಂಗ್​ 76ರನ್​, ಜಾಫರ್​​ 46 ಹಾಗೂ ಶರತ್​ 47ರನ್​ಗಳಿಕೆ ಮಾಡಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.