ಮುಂಬೈ: ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಶಕ್ತಿಯಾಗಿದ್ದ ಜೋಫ್ರಾ ಆರ್ಚರ್ ಗಾಯದ ಕಾರಣ 2021ರ ಆವೃತ್ತಿಯಿಂದ ಗೈರಾಗಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಆದ್ರೆ ಭಾರತದ ಯುವ ಬೌಲರ್ಗಳು ಸವಾಲನ್ನು ಎದುರಿಸಲು ಸಿದ್ಧರಿದ್ದಾರೆ ಎಂದು ಹೊಸದಾಗಿ ಆರ್ಆರ್ ಕ್ರಿಕೆಟ್ ನಿರ್ದೇಶಕರಾಗಿರುವ ಕುಮಾರ್ ಸಂಗಕ್ಕಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆರಳಿನ ಗಾಯದ ನಡುವೆಯೂ ಭಾರತದ ವಿರುದ್ಧದ ಸರಣಿಯಲ್ಲಿ ಆಡಿದ್ದ ಜೋಫ್ರಾ ಆರ್ಚರ್ ಪ್ರಸ್ತುತ ಸರ್ಜರಿಗೊಳಗಾಗಿದ್ದಾರೆ. ಐಪಿಎಲ್ನ ಮೊದಲಾರ್ಧದಿಂದ ಹೊರಗುಳಿಯಲಿದ್ದಾರೆ. ಅಲ್ಲದೆ ದ್ವಿತೀಯಾರ್ಧದಲ್ಲಿ ಭಾಗವಹಿಸುವ ಬಗ್ಗೆಯೂ ಯಾವುದೇ ಖಚಿತ ಮಾಹಿತಿಯಿಲ್ಲ.
"ಆರ್ಚರ್ ಗೈರು ನಮಗೆ ದೊಡ್ಡ ಹೊಡೆತ ಎಂದು ಸಂಜು ಮತ್ತು ನಾನು ಇಬ್ಬರೂ ಒಪ್ಪುತ್ತೇವೆ. ಜೋಫ್ರಾ ನಮ್ಮ ಸಂಯೋಜನೆಯ ಬಹುಮುಖ್ಯ ಭಾಗವಾಗಿದ್ದರು. ಅವರನ್ನು ಹೊಂದದಿರುವುದು ನಮ್ಮ ದುರದೃಷ್ಟ ಅನ್ನೋದು ವಾಸ್ತವ. ಆದ್ರೆ, ನಾವು ಅದರ ಸುತ್ತಲೂ ಕೆಲಸ ಮಾಡಬೇಕು ಮತ್ತು ಯೋಜನೆಗಳನ್ನು ರೂಪಿಸಬೇಕು" ಎಂದು ಸಂಗಕ್ಕಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡಯುವ ಪಂದ್ಯಕ್ಕೂ ಮುನ್ನ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆದರೂ ಆರ್ಚರ್ ಐಪಿಎಲ್ನ ಕೆಲವು ಪಂದ್ಯಗಳಲ್ಲಿ ತಂಡದ ಭಾಗವಾಗಲಿದ್ದಾರೆ ಎಂಬ ಭರವಸೆಯಲ್ಲಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ತಂಡದಲ್ಲಿರುವ ಭಾರತೀಯ ಬೌಲರ್ಗಳಾದ ಜಯದೇವ್ ಉನಾದ್ಕಟ್ ಜೊತೆಗೆ ಕಾರ್ತಿಕ್ ತ್ಯಾಗಿ ಮತ್ತು ಚೇತನ್ ಸಕಾರಿಯಾ ಅತ್ಯುತ್ತಮ ಪ್ರತಿಭೆಗಳು. ಬೌಲಿಂಗ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ಸಂಗಕ್ಕಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಅನಾನುಭವಿಗಳು ಕೂಡ ನಿಮಗೆ ಕೆಲಸಕ್ಕೆ ಬರಲಿದ್ದಾರೆ. ಯಾಕೆಂದರೆ, ಎದುರಾಳಿ ಆಟಗಾರರಿಗೆ ಅವರ ಸಾಮರ್ಥ್ಯದ ಬಗ್ಗೆ ತಿಳಿದಿರುವುದಿಲ್ಲ. ಐಪಿಎಲ್ನಲ್ಲಿ ವೇಗವ ಬೌಲಿಂಗ್ ಸುಲಭದ ಕೆಲಸವೇನಲ್ಲ. ಅದನ್ನು ನಾವು ನಿನ್ನೆಯ ಪಂದ್ಯದಲ್ಲಿ ನೋಡಿದ್ದೇವೆ" ಎಂದು ಸಂಗಕ್ಕಾರ ತಿಳಿಸಿದ್ದಾರೆ.
ಭಾರತದಲ್ಲಿ ಬಹುತೇಕ ಪಿಚ್ಗಳು ಬ್ಯಾಟಿಂಗ್ಗೆ ಅನುಕೂಲವಾಗಿದೆ. ಹಾಗಾಗಿ, ನೀವು ಇಲ್ಲಿ ಬೌಲಿಂಗ್ ಮಾಡಲು ಕೆಲ ಕೌಶಲ್ಯಗಳನ್ನು ಹೊಂದಿರಬೇಕು. ಕಾರ್ತಿಕ್ ತ್ಯಾಗಿ ಕಳೆದ ವರ್ಷ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಈ ವರ್ಷ ನಾವು ಕುಲದೀಪ್ ಯಾದವ್(ಜ್ಯೂನಿಯರ್) ಮತ್ತು ಚೇತನ ಸಕಾರಿಯಾರನ್ನು ಹೊಂದಿದ್ದೇವೆ. ಈ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಹೊರತರಲು ಸ್ವಲ್ಪ ತರಬೇತಿ ಮತ್ತು ಆತ್ಮವಿಶ್ವಾಸ ತುಂಬುವ ಅಗತ್ಯವಿದೆ ಎಂದು ಶ್ರೀಲಂಕಾದ ಮಾಜಿ ನಾಯಕ ತಿಳಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಸೋಮವಾರ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಇದನ್ನು ಓದಿ:ಸಾಮ್ಸನ್ ನಾಯಕತ್ವ, ಲೆಜೆಂಡರಿ ಸಂಗಕ್ಕಾರ ಮಾರ್ಗದರ್ಶನ: 2ನೇ ಕಪ್ ಮೇಲೆ ಕಣ್ಣಿಟ್ಟಿರುವ ರಾಜಸ್ಥಾನದ ಬಲಾಬಲ ಹೀಗಿದೆ