ETV Bharat / sports

ಚೆನ್ನೈನಲ್ಲಿ RCB ಕ್ಯಾಂಪ್​ ಸೇರಿಕೊಂಡ ಎಬಿಡಿ - ಆರ್​ಸಿಬಿ ಸೇರಿದ ಎಬಿ ಡಿ ವಿಲಿಯರ್ಸ್​

ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಸಾಮಾಜಿಕ ಜಾಲತಾಣದ ಮೂಲಕ ಎಬಿಡಿ ವಿಲಿಯರ್ಸ್ ಚೆನ್ನೈಗೆ ಬಂದಿಳಿದಿರುವ ಮಾಹಿತಿಯನ್ನು ತಿಳಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಎಬಿ ಡಿ ವಿಲಿಯರ್ಸ್
author img

By

Published : Apr 1, 2021, 5:21 PM IST

ಚೆನ್ನೈ: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್​ಮನ್ ಎಬಿಡಿ ವಿಲಿಯರ್ಸ್​ 14ನೇ ಆವೃತ್ತಿಯ ಐಪಿಎಲ್​ಗಾಗಿ ಚೆನ್ನೈಗೆ ಬಂದಿಳಿದಿದ್ದು, ಆರ್​ಸಿಬಿಯ ಬಯೋಬಬಲ್​ ಸೇರಿಕೊಂಡಿದ್ದಾರೆ.

"ಬ್ರೇಕಿಂಗ್​ ದ ಇಂಟರ್​ನೆಟ್​, ಆಕಾಶ ನೌಕೆ ಲ್ಯಾಂಡ್ ಆಗಿದೆ. ಎಬಿಡಿ ವಿಲಿಯರ್ಸ್​ ಚೆನ್ನೈನಲ್ಲಿರುವ ಆರ್​ಸಿಬಿ ಬಬಲ್ ಸೇರಿಕೊಂಡಿದ್ದಾರೆ" ಎಂದು ಆರ್‌ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದೆ.

ಬೆಂಗಳೂರು ಮೂಲದ ಫ್ರಾಂಚೈಸಿ ಕಳೆದ ಐಪಿಎಲ್​ನಲ್ಲಿ ಪ್ಲೇ ಆಫ್​ ತಲುಪಿತ್ತಾದರೂ, ನಾಕೌಟ್​ ಗೆಮ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಸೋಲು ಕಂಡಿತ್ತು. ಈ ಬಾರಿ ಮ್ಯಾಕ್ಸ್​ವೆಲ್, ಫಿನ್ ಅಲೆನ್, ಕೈಲ್ ಜೆಮೀಸನ್​ ಮತ್ತು ಡೇನಿಯಲ್ ಕ್ರಿಸ್ಚಿಯನ್​ ಅಂತಹ ಸ್ಟಾರ್​ ಆಟಗಾರರು ಆರ್​ಸಿಬಿ ಸೇರಿದ್ದು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ಕನಸಿನಲ್ಲಿದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಮತ್ತೆ ಮರಳಲು ತುಂಬಾ ಸಂತೋಷವಾಗುತ್ತಿದೆ. ಕಳೆದ ಆವೃತ್ತಿಯ ಆವೇಗವನ್ನು ಮುಂದುವರಿಸಿಕೊಂಡು ಹೋಗಲು ಉತ್ಸುಕನಾಗಿದ್ದೇನೆ. ನಮ್ಮ ಹುಡುಗರನ್ನು ನೋಡಲು ಕಾಯುತ್ತಿದ್ದೇನೆ ಎಂದು ಆರ್​ಸಿಬಿ ವೆಬ್​ಸೈಟ್​ಗೆ ವಿಲಿಯರ್ಸ್​ ತಿಳಿಸಿದ್ದಾರೆ.

ಇದನ್ನೂ ಓದಿ:ಹೆಜಲ್​ವುಡ್​ ಹೋದ್ರೆ ತೊಂದ್ರೆಯಿಲ್ಲ, ಈ ವೇಗಿ ಅವರ ಸ್ಥಾನ ತುಂಬ್ತಾರೆ: ಬ್ರಾಡ್​ ಹಾಗ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.