ETV Bharat / sports

ಎಬಿಡಿ ವಿಲಿಯರ್ಸ್ ಟಿ20 ವಿಶ್ವಕಪ್​ ಆಡಲು ತಯಾರಿದ್ದರು: ಕ್ವಿಂಟನ್​ ಡಿ ಕಾಕ್​ - Quinton de Kock

ಕೋವಿಡ್​ 19 ಕಾರಣ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್​ ಮುಂದೂಡಲಾಗಿದೆ. ಆದರೆ ಈ ವಿಶ್ವಕಪ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಎಬಿಡಿ ಮರಳಲು ಸಿದ್ದರಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಕ್ವಿಂಟನ್​ ಡಿ ಕಾಕ್​
ಕ್ವಿಂಟನ್​ ಡಿ ಕಾಕ್​
author img

By

Published : Jul 21, 2020, 6:54 PM IST

ಕೇಪ್​ಟೌನ್​: ಎಬಿಡಿ ವಿಲಿಯರ್ಸ್​ ನಿವೃತ್ತಿಯಿಂದ ಹೊರಬರಲಿದ್ದಾರೆ ಎಂಬ ಊಹಾಪೋಹಗಳು ಕಳೆದ ಒಂದು ವರ್ಷದಿಂದ ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಮಾಜಿ ನಾಯಕ ಡು ಪ್ಲೆಸಿಸ್ ಕೂಡ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದರು. ಅದೇ ರೀತಿ ನೂತನ ಕೋಚ್​ ಆಗಿರುವ ಮಾರ್ಕ್​ ಬೌಷರ್​ ಕೂಡ ವಿಲಿಯರ್ಸ್​ ಸೇರಿದಂತೆ ಕೆಲವು ಹಿರಿಯ ಆಟಗಾರರ ಜೊತೆಗೆ ತಾವೂ ನಿವೃತ್ತಿಯಿಂದ ಹೊರಬರುವಂತೆ ಮಾತನಾಡಲಿದ್ದೇನೆ ಎಂದಿದ್ದರು. ಇದೀಗ ಎಬಿಡಿ ತಂಡಕ್ಕೆ ಮರಳಲು ಸಿದ್ದರಿದ್ದರೆಂದು ಹಾಲಿ ಸೀಮಿತ ಓವರ್​ಗಳ ನಾಯಕ ಕ್ವಿಂಟನ್​ ಡಿ ಕಾಕ್​ ಹೇಳಿದ್ದಾರೆ.

ಕೋವಿಡ್​ 19 ಕಾರಣ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್​ ಮುಂದೂಡಲಾಗಿದೆ. ಆದರೆ ಈ ವಿಶ್ವಕಪ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಎಬಿ ಡಿ ವಿಲಿಯರ್ಸ್​ ಮರಳಲು ಸಿದ್ದರಿದ್ದರು ಎಂದು ಬಹಿರಂಗ ಪಡಿಸಿದ್ದಾರೆ.

"ಎಬಿಡಿ ಈ ವರ್ಷ ಟಿ20 ವಿಶ್ವಕಪ್​ ನಡೆದಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳುತ್ತಿದ್ದರು. ಅವರು ಈಗಲೂ ಫಿಟ್​ ಆಗಿದ್ದಾರೆ. ಅವರು ತಂಡಕ್ಕೆ ಸೇರಿಕೊಳ್ಳುವುದನ್ನು ನಾನು ಕೂಡ ಎದುರು ನೋಡುತ್ತಿದ್ದೇನೆ. ತಂಡದಲ್ಲಿ ಆಡುವ ಅವರ ಬಯಕೆಯನ್ನು ಕೈಬಿಡದಂತೆ ಅವರಲ್ಲಿ ಕೇಳಿಕೊಂಡಿದ್ದೇವೆ" ಎಂದು ಡಿಕಾಕ್​ ತಿಳಿಸಿದ್ದಾರೆ.

ಎಬಿಡಿ ಅಂತಹ ಆಟಗಾರರನ್ನು ನಾನಷ್ಟೇ ಅಲ್ಲ, ಯಾವುದೇ ತಂಡವಾದರೂ ತಮ್ಮ ತಂಡದಲ್ಲಿ ಆಡಿಸಲು ಇಷ್ಟಪಡುತ್ತದೆ. ನಾನೂ ಕೂಡ ಅವರನ್ನು ನಮ್ಮ ತಂಡದಲ್ಲಿ ಆಡಿಸಲು ಇಷ್ಟಪಡುತ್ತೇನೆ. ನಾವು ಇದೀಗ ವಿಶ್ವಕಪ್​ ಯಾವಾಗ ಆಯೋಜನೆಯಾಗುತ್ತದೆ ಎಂಬುದರ ಕಡೆಗೆ ಗಮನ ನೀಡುತ್ತಿದ್ದೇವೆ ಎಂದಿದ್ದಾರೆ.

ಎಬಿಡಿ 2018ರಲ್ಲಿ ವಿಪರೀತವಾದ ಕೆಲಸದ ಒತ್ತಡದಿಂದ ಬೇಸತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಆದರೆ ತಮ್ಮ ನಿರ್ಧಾರವನ್ನು ವಾಪಸ್​ ತೆಗೆದುಕೊಂಡು 2019 ವಿಶ್ವಕಪ್​ ವೇಳೆ ತಂಡಕ್ಕೆ ಮರಳುವ ಇಚ್ಚೆ ವ್ಯಕ್ತಪಡಿಸಿದ್ದರು, ಆದರೆ ಕ್ರಿಕೆಟ್​ ದಕ್ಷಿಣ ಆಫ್ರಿಕಾ ಮಂಡಳಿ ಅದಕ್ಕೆ ಒಪ್ಪಿರಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.