ಹೈದರಾಬಾದ್: ಕೊರೊನಾ ಅಬ್ಬರದ ನಡುವೆ ಕ್ರಿಕೆಟ್ ಪುನಾರಂಭಗೊಂಡಿದೆ. ಹೊಸ ಮಾದರಿಯ ಕ್ರಿಕೆಟ್ ಎಂದು ಗುರುತಿಸಿಕೊಂಡಿರುವ 3TC ಸಾಲಿಡಾರಿಟ್ ಕಪ್ನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿವಿಲಿಯರ್ಸ್ ಅಬ್ಬರಿಸಿದ್ದಾರೆ.
ನೆಲ್ಸನ್ ಮಂಡೇಲಾ ಅವರ ಜನ್ಮದಿನದ ಅಂಗವಾಗಿ ಇಂದು ಮೂರು ತಂಡಗಳ ನಡುವೆ ನಡೆದ ಈ ಕ್ರಿಕೆಟ್ ಟೂರ್ನಿಯಲ್ಲಿ ಈಗಲ್ಸ್ ತಂಡದ ಕ್ಯಾಪ್ಟನ್ ಕೂಡ ಆಗಿರುವ ಡಿವಿಲಿಯರ್ಸ್ ಕೇವಲ 24 ಎಸೆತಗಳಲ್ಲಿ ಬರೋಬ್ಬರಿ 61ರನ್ ಚಚ್ಚಿದ್ದಾರೆ. ಇದರ ಸಹಾಯದಿಂದ ತಂಡ 12 ಓವರ್ಗಳಲ್ಲಿ ಬರೋಬ್ಬರಿ 160ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿದೆ.
ಯಾವ ರೀತಿಯಲ್ಲಿ ಪಂದ್ಯ?
ಈ ಟೂರ್ನಿಯಲ್ಲಿ ಪ್ರತಿವೊಂದು ತಂಡದಲ್ಲಿ 8 ಮಂದಿ ಪ್ಲೇಯರ್ಸ್. ಒಟ್ಟು 36 ಓವರ್ಗಳ ಕ್ರಿಕೆಟ್ ಟೂರ್ನಿ ಇದಾಗಿದ್ದು, 18 ಓವರ್ಗಳಾಗಿ ವಿಂಗಡಿಸಲಾಗಿತ್ತು.
ಆರಂಭದಲ್ಲಿ ಪ್ರತಿ ತಂಡ ತಲಾ 6ಓವರ್ ಬ್ಯಾಟಿಂಗ್. ಮೊದಲು ಬ್ಯಾಟಿಂಗ್ ಮಾಡುವ ತಂಡ ಯಾವುದು ಎಂಬುದನ್ನ ಡ್ರಾ ಮೂಲಕ ಆಯ್ಕೆ. ಈ ವೇಳೆ ಒಂದು ತಂಡಕ್ಕೆ ವಿಶ್ರಾಂತಿ ನೀಡುವುದು. ಆರಂಭದಲ್ಲಿ ಆಡುವ ಎರಡು ತಂಡಗಳ ಪೈಕಿ ಯಾವ ತಂಡ ಅತಿ ಹೆಚ್ಚು ಸ್ಕೋರ್ ಮಾಡುವುದೋ ತದನಂತರ ಮತ್ತೊಂದು ತಂಡದ ಜತೆ ಉಳಿದ ಓವರ್ಗಳಲ್ಲಿ ಆಡಲು ಅವಕಾಶ ನೀಡಲಾಗುತ್ತದೆ.