ದುಬೈ: ಆರ್ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಟಿ20 ಕ್ರಿಕೆಟ್ನಲ್ಲಿ 400 ಸಿಕ್ಸರ್ ಸಿಡಿಸಿದ 6ನೇ ಬ್ಯಾಟ್ಸ್ಮನ್ ಎಂದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಶೆಲ್ಡಾನ್ ಕಾಟ್ರೆಲ್ಗೆ ಸಿಕ್ಸರ್ ಸಿಡಿಸುವ ಮೂಲಕ ವಿಲಿಯರ್ಸ್ 400 ಸಿಕ್ಸರ್ ಕ್ಲಬ್ಗೆ ಎಂಟ್ರಿ ಕೊಟ್ಟರು. ಎಬಿಡಿ ಈ ಸಾಧನೆಗಾಗಿ 312 ಪಂದ್ಯಗಳನ್ನಾಡಿದ್ದಾರೆ.
ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಚುಟುಕು ಕ್ರಿಕೆಟ್ನಲ್ಲಿ 978 ಸಿಕ್ಸರ್ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್(673), ನ್ಯೂಜಿಲ್ಯಾಂಡ್ ಬ್ರೆಂಡನ್ ಮೆಕ್ಕಲಮ್(485) ಹಾಗೂ ಆಸ್ಟ್ರೇಲಿಯಾದ ಶೇನ್ ವಾಟ್ಸನ್(458) 400 ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿರುವ ಬ್ಯಾಟ್ಸ್ಮನ್ ಆಗಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿರುವ ಬ್ಯಾಟ್ಸ್ಮನ್ಗಳು
- ಕ್ರಿಸ್ ಗೇಲ್- 978(404 ಪಂದ್ಯ)
- ಕೀರನ್ ಪೊಲಾರ್ಡ್- 673(514)
- ಬ್ರೆಂಡನ್ ಮೆಕ್ಕಲಮ್- 485(370)
- ಶೇನ್ ವಾಟ್ಸನ್ - 458(334)
- ಆಂಡ್ರೆ ರಸೆಲ್- 441(331)
- ಎಬಿ ಡಿ ವಿಲಿಯರ್ಸ್ 400(312)
- ಅ್ಯರೋನ್ ಫಿಂಚ್-379(288)
- ಡ್ವೇನ್ ಸ್ಮಿತ್ - 375(337)
- ರೋಹಿತ್ ಶರ್ಮಾ- 330(367)
- ಡೇವಿಡ್ ವಾರ್ನರ್-283(359)