ETV Bharat / state

ಶರಣಾಗತರಾದ ನಕ್ಸಲರಿಗೆ ನ್ಯಾಯಾಂಗ ಬಂಧನ : ಮುಂದಿನ ಕ್ರಮಗಳೇನು? - NAXALS SENT TO JUDICIAL CUSTODY

ಸರ್ಕಾರ ಆಹ್ವಾನಕ್ಕೆ ಒಪ್ಪಿ ಸಮಾಜದ ಮುಖ್ಯವಾಹಿನಿ ಬಂದಿರುವ ಆರು ಮಂದಿ ನಕ್ಸಲರನ್ನ ಇಂದು ಬೆಳಗ್ಗೆ ಮಡಿವಾಳದ ತಾಂತ್ರಿಕ ಕೇಂದ್ರದಲ್ಲಿರಿಸಿ ವಿಚಾರಣೆ ನಡೆಸಲಾಯಿತು. ಬಳಿಕ ಎನ್​ಐಎ ಕೋರ್ಟ್​ಗೆ ಹಾಜರುಪಡಿಸಲಾಯಿತು.

Police Produced surrender Six Naxal to be Court after formal arrest
ಸರ್ಕಾರಕ್ಕೆ ಶರಣಾದ ನಕ್ಸಲರು (ETV Bharat)
author img

By ETV Bharat Karnataka Team

Published : 10 hours ago

Updated : 9 hours ago

ಬೆಂಗಳೂರು: ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಬುಧವಾರ ಶರಣಾಗತರಾಗಿದ್ದ ಆರು ಮಂದಿ ನಕ್ಸಲೀಯರನ್ನ ರಾಜ್ಯ ಪೊಲೀಸರು ವಶಕ್ಕೆ ಪಡೆದು ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಎನ್​ಐಎ ಕೋರ್ಟ್​ಗೆ ಹಾಜರುಪಡಿಸಲಾದ ನಕ್ಸಲರಿಗೆ ಜ. 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸರ್ಕಾರ ಆಹ್ವಾನಕ್ಕೆ ಒಪ್ಪಿ ಸಮಾಜದ ಮುಖ್ಯವಾಹಿನಿಗೆ ಬಂದಿರುವ ಆರು ಮಂದಿ ಮಾಜಿ ನಕ್ಸಲರನ್ನ ಇಂದು ಬೆಳಗ್ಗೆ ಮಡಿವಾಳದ ತಾಂತ್ರಿಕ ಕೇಂದ್ರದಲ್ಲಿರಿಸಿ ವಿಚಾರಣೆ ನಡೆಸಲಾಯಿತು. ಈ ವೇಳೆ ಚಿಕ್ಕಮಗಳೂರು ಪೊಲೀಸರ ಜೊತೆಗೆ ನಕ್ಸಲ್ ನಿಗ್ರಹ ಪಡೆ ಹಾಗೂ ರಾಜ್ಯ ಗುಪ್ತಚರ ಅಧಿಕಾರಿಗಳು ನಕ್ಸಲೀಯರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡರು. ಸರ್ಕಾರದ ಶರಣಾಗತಿ ನೀತಿಯಂತೆ ಇದುವರೆಗೂ ಭಾಗಿಯಾಗಿರುವ ಅಪರಾಧ ಪ್ರಕರಣಗಳ ಮಾಹಿತಿ ಹಾಗೂ ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿರುವ ಬಗ್ಗೆ ಅಧಿಕೃತವಾಗಿ ಸ್ವಯಂ ಹೇಳಿಕೆಗಳನ್ನು ಪಡೆಯಲಾಯಿತು. ಆರೋಪಿಗಳ ವಿರುದ್ಧ ಬಹುತೇಕ ಪ್ರಕರಣಗಳು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವುದರಿಂದ ಅಲ್ಲಿನ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದ ತಂಡ ವಿಚಾರಣೆ ನಡೆಸಿತು.

ಎನ್​ಐಎ ನ್ಯಾಯಾಲಯ ಮುಂದೆ ಹಾಜರು : ಆರು ಮಂದಿ ವಿರುದ್ಧ ಎನ್ಐಎ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ನಗರದ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗಾಗಿ ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಶರಣಾಗತಿ ಬಳಿಕ‌ ಏನೆಲ್ಲ ಕ್ರಮ ಇರುತ್ತೆ?

ನಕ್ಸಲ್ ಶರಣಾಗತಿ ನೀತಿ ಪ್ರಕಾರ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ ನಕ್ಸಲರು ತಾವು ನಡೆಸುತ್ತಿದ್ದ ನಕ್ಸಲ್ ಚಟುವಟಿಕೆ ಪ್ರಕಾರ ಪೂರ್ಣ ಮಾಹಿತಿ ನೀಡಬೇಕು. ಭೂಗತವಾಗಿರುವ ಎಲ್ಲಾ ಸದಸ್ಯರ ಹೆಸರುಗಳನ್ನ ಬಹಿರಂಗಪಡಿಸಬೇಕಿದೆ. ಶರಣಾದವರ ಈ ಸ್ವ ಇಚ್ಛಾ ಹೇಳಿಕೆಯನ್ನು ಇನ್ ಕ್ಯಾಮರಾ ವಿಧಾನದಲ್ಲಿ ದಾಖಲಿಸಬೇಕು. ಬಳಿಕ ಶರಣಾಗತಿ ವರದಿ ತಯಾರಿಸಿ, ಜಿಲ್ಲಾ ಶರಣಾಗತಿ ಸಮಿತಿಯ ಮುಂದಿಡಬೇಕು. ರಾಜ್ಯ ಶರಣಾಗತಿ ಸಮಿತಿಗೆ ಅನುಮೋದನೆಗಾಗಿ ಕಳುಹಿಸಿಕೊಡಬೇಕು. ಅನುಮತಿ ದೊರೆತ ಬಳಿಕ ಸರ್ಕಾರ ಘೋಷಿಸಿರುವ ವಿಶೇಷ ಸೌಲಭ್ಯವನ್ನ ಜಿಲ್ಲಾ ಸಮಿತಿ ನೀಡಬೇಕೆಂದು ಸ್ಪಷ್ಟವಾಗಿ ಹೇಳಿದೆ.

ಶರಣಾಗತರಾದ ಎಲ್ಲಾ ಸದಸ್ಯರ ಮೇಲೆ ಎರಡು ವರ್ಷಗಳ ಅವಧಿಯವರೆಗೆ ನಿಗಾವಹಿಸಲಾಗುತ್ತದೆ. ರಾಜ್ಯ ಆಂತರಿಕ ಭದ್ರತಾ ಪಡೆ (ಐಎಸ್ ಡಿ) ಡಿವೈಎಸ್ಪಿ ಅಧಿಕಾರಿಯೊಬ್ಬರು ಆರು ಮಂದಿ ವ್ಯಕ್ತಿಗಳ ಚಲನವಲನದ ಬಗ್ಗೆ ನಿಗಾವಹಿಸಿ ತಿಂಗಳಿಗೊಮ್ಮೆಯಂತೆ ಎರಡು ವರ್ಷದವರೆಗೆ ವರದಿಯನ್ನ ಸರ್ಕಾರಕ್ಕೆ ನೀಡಬೇಕಿದೆ.

ಸಂಪರ್ಕದಲ್ಲಿದ್ದ ಮತ್ತೋರ್ವ ನಕ್ಸಲನ ಮನವೊಲಿಕೆಗೆ ಯತ್ನ : ರಾಜ್ಯ ನಕ್ಸಲ್ ನಿರ್ಮೂಲನೆ ಹಾದಿಯಲ್ಲಿದ್ದು ಶರಣಾಗತಿಯಾದ ಗುಂಪಿನಲ್ಲಿದ್ದ ಶೃಂಗೇರಿ ಮೂಲದ ನಕ್ಸಲ್ ರವೀಂದ್ರ ತಲೆಮರೆಸಿಕೊಂಡಿದ್ದಾರೆ. ಎರಡು ತಿಂಗಳಿಂದ ಆರು ಮಂದಿಯೊಂದಿಗೆ ಸಂಪರ್ಕ ಸಾಧಿಸಿಲ್ಲ. ರಾಜ್ಯದ ನಕ್ಸಲ್ ಪಟ್ಟಿಯಲ್ಲಿ ರವೀಂದ್ರ ಹೆಸರಿದ್ದು, ಇನ್ನೊಂದು ವಾರದಲ್ಲಿ ಈತನ ಸಂಪರ್ಕ ಸಾಧಿಸಿ ಮುಖ್ಯವಾಹಿನಿಗೆ ಬರುವಂತೆ ಮನವೊಲಿಸಲಾಗುವುದು ಎಂದು ನಕ್ಸಲ್ ನೀತಿ ಹಾಗೂ ಪುನರ್ ವಸತಿ ಸಮಿತಿ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

ಇದನ್ನೂ ಓದಿ: ನಕ್ಸಲರು ಸಿಎಂ ಕಚೇರಿಗೆ ಬಂದು ಶರಣಾಗುವುದರಲ್ಲಿ ತಪ್ಪೇನಿದೆ : ಗೃಹ ಸಚಿವ ಪರಮೇಶ್ವರ್

Last Updated : 9 hours ago
ETV Bharat Logo

Copyright © 2025 Ushodaya Enterprises Pvt. Ltd., All Rights Reserved.