ನವದೆಹಲಿ: 2020ರ ಐಪಿಎಲ್ನಲ್ಲಿ ಎಂ ಎಸ್ ಧೋನಿ ಹೆಲಿಕಾಪ್ಟರ್ ಶಾಟ್ ಬಾರಿಸುವುದನ್ನು ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತು ಕಾದು ಕುಳಿತಿದೆ. ಅದಕ್ಕೂ ಮೊದಲು 7 ವರ್ಷದ ಬಾಲಕಿಯೊಬ್ಬಳು ಧೋನಿ ಹೆಲಿಕಾಪ್ಟರ್ ಶಾಟ್ ಅನುಕರಣೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾಳೆ.
ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಛೋಪ್ರಾ ಅವರು ಪರಿ ಶರ್ಮಾ ಎಂಬ ಪುಟ್ಟ ಬಾಲಕಿ ಹೆಲಕಾಪ್ಟರ್ ಶಾಟ್ ಬಾರಿಸುವ 18 ಸೆಕೆಂಡ್ ವಿಡಿಯೋವನ್ನು ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದರು. ಆ ವಿಡಿಯೋಗೆ ತಮ್ಮ ಕಾಮೆಂಟರಿಯನ್ನು ಸೇರಿಸಿ ಪೋಸ್ಟ್ ಮಾಡಿದ್ದಾರೆ. ಈ 18 ಸೆಕೆಂಡ್ನಲ್ಲಿ ಪರಿ ಶರ್ಮಾ ಅದ್ಭುತವಾಗಿ ಹಲವಾರು ಬಾರಿ ಯಶಸ್ವಿಯಾಗಿ ಹೆಲಿಕಾಪ್ಟರ್ ಶಾಟ್ ಬಾರಿಸಿದ್ದಾಳೆ.
-
Thursday Thunderbolt...our very own Pari Sharma. Isn’t she super talented? 👏👏 #AakashVani pic.twitter.com/2oGLLLAadu
— Aakash Chopra (@cricketaakash) August 13, 2020 " class="align-text-top noRightClick twitterSection" data="
">Thursday Thunderbolt...our very own Pari Sharma. Isn’t she super talented? 👏👏 #AakashVani pic.twitter.com/2oGLLLAadu
— Aakash Chopra (@cricketaakash) August 13, 2020Thursday Thunderbolt...our very own Pari Sharma. Isn’t she super talented? 👏👏 #AakashVani pic.twitter.com/2oGLLLAadu
— Aakash Chopra (@cricketaakash) August 13, 2020
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಸಂಜಯ್ ಮಂಜ್ರೇಕರ್, ಹೆಲಿಕಾಪ್ಟರ್ ಶಾಟ್ ಅನ್ನು ಅಭ್ಯಾಸ ಮಾಡುವುದನ್ನು ನಾನು ಈಗ ನೋಡುತ್ತಿದ್ದೇನೆ. ವಿಕೆಟ್ ಹಿಂದೆ ತುಂಬಾ ಹತ್ತಿರ ನಿಂತು ಚೆಂಡನ್ನು ಪಡೆಯುವ ಜೊತೆಗೆ, ಧೋನಿ ಉದಯೋನ್ಮುಖ ಕ್ರಿಕೆಟಿಗರಿಗೆ ಒಂದು ಉತ್ತಮ ಹೊಡೆತವನ್ನು ಆಯ್ಕೆಯಾಗಿ ಜನಪ್ರಿಯಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
-
I see now helicopter shot being actually practiced. Along with collecting the ball very close to the stumps as keeper, this is another cricketing technique Dhoni has popularised as great options for budding cricketers. https://t.co/vJcurZyyFh
— Sanjay Manjrekar (@sanjaymanjrekar) August 13, 2020 " class="align-text-top noRightClick twitterSection" data="
">I see now helicopter shot being actually practiced. Along with collecting the ball very close to the stumps as keeper, this is another cricketing technique Dhoni has popularised as great options for budding cricketers. https://t.co/vJcurZyyFh
— Sanjay Manjrekar (@sanjaymanjrekar) August 13, 2020I see now helicopter shot being actually practiced. Along with collecting the ball very close to the stumps as keeper, this is another cricketing technique Dhoni has popularised as great options for budding cricketers. https://t.co/vJcurZyyFh
— Sanjay Manjrekar (@sanjaymanjrekar) August 13, 2020
ಹರಿಯಾಣದ ರೋಹ್ಟಕ್ನ ಏಳು ವರ್ಷ ಬಾಲಕಿ ಪರಿ ಶರ್ಮಾ ಭವಿಷ್ಯದಲ್ಲಿ ಭಾರತೀಯ ಮಹಿಳಾ ತಂಡವನ್ನು ಪ್ರತಿನಿಧಿಸಲು ಮತ್ತು ಎಲ್ಲಾ ಬ್ಯಾಟಿಂಗ್ ದಾಖಲೆಗಳನ್ನು ಮುರಿಯುವ ಆಸೆಯನ್ನು ಹೊಂದಿದ್ದಾಳೆ. ಭಾರತದ ಮಾಜಿ ಕ್ರಿಕೆಟಿಗರಾದ ಅಜಯ್ ರಾತ್ರ ಮತ್ತು ಜೋಗಿಂದರ್ ಶರ್ಮಾ ಅವರೊಂದಿಗೆ ಆಡಿದ್ದ ಪರಿ ತಂದೆಯೇ ಅವಳಿಗೆ ಕೋಚ್ ಆಗಿದ್ದಾರೆ.
-
This is a great video !! For so many different reasons..... https://t.co/amtkFIY2Lw
— Nasser Hussain (@nassercricket) April 22, 2020 " class="align-text-top noRightClick twitterSection" data="
">This is a great video !! For so many different reasons..... https://t.co/amtkFIY2Lw
— Nasser Hussain (@nassercricket) April 22, 2020This is a great video !! For so many different reasons..... https://t.co/amtkFIY2Lw
— Nasser Hussain (@nassercricket) April 22, 2020
ಪರಿ ಹೆಲಿಕಾಪ್ಟರ್ ವಿಡಿಯೋ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ವೈರಲ್ ಆಗಿತ್ತು. ಆ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಕೂಡ, ಈ ವಿಡಿಯೋ ಹಲವು ಕಾರಣಗಳಿಂದ ಅದ್ಭುತವಾಗಿದೆ ಎಂದು ಟ್ವೀಟ್ ಮಾಡಿದ್ದರು. ಇವರಲ್ಲದೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರಾದ ಮೈಕಲ್ ವಾನ್, ಮೈಕ್ ಆಥರ್ಟನ್ ಕೂಡ ಪರಿ ಶರ್ಮಾಳ ಬ್ಯಾಟಿಂಗ್ ಕೌಶಲಕ್ಕೆ ತಲೆದೂಗಿದ್ದಾರೆ.