ETV Bharat / sports

ಬ್ರಿಸ್ಬೇನ್​ನಲ್ಲಿ ಲಾಕ್​ಡೌನ್​ ಘೋಷಣೆ: ಗಬ್ಬಾದಲ್ಲಿ 4ನೇ ಟೆಸ್ಟ್ ನಡೆಯುವುದು ಅನುಮಾನ - ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ

ಬ್ರಿಸ್ಬೇನ್‌ನಲ್ಲಿನ ಸಂಪರ್ಕ ತಡೆಯ ನಿಯಮಗಳ ಪ್ರಕಾರ, ದಿನದ ಆಟ ಮುಗಿನ ನಂತರ ಆಟಗಾರರು ತಮ್ಮ ಹೋಟೆಲ್ ಕೋಣೆಯನ್ನು ಬಿಟ್ಟು ಹೊರಬರುವಂತಿಲ್ಲ.

lockdown in Brisbane
ಬ್ರಿಸ್ಬೇನ್​ನಲ್ಲಿ ಲಾಕ್​ಡೌನ್​ ಘೋಷಣೆ
author img

By

Published : Jan 8, 2021, 10:43 AM IST

ಸಿಡ್ನಿ: ಬ್ರಿಸ್ಬೇನ್‌ನಲ್ಲಿ ಹೊಸದಾಗಿ ಮೂರು ದಿನಗಳ ಲಾಕ್‌ಡೌನ್ ಘೋಷಣೆ ಮಾಡಲಾಗಿದ್ದು, ಜನವರಿ 15 ರಿಂದ ಕ್ವೀನ್ಸ್‌ಲ್ಯಾಂಡ್ ರಾಜ್ಯ ರಾಜಧಾನಿಯಲ್ಲಿ ಭಾರತ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ನಡೆಸಲು ಪ್ರಯತ್ನಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾವನ್ನು ತೊಂದರೆಗೆ ಸಿಲುಕಿಸಿದೆ.

ಭಾರತ ಮತ್ತು ಆಸ್ಟ್ರೇಲಿಯಾದ ಉನ್ನತ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಕಠಿಣವಾದ ಕ್ವಾರಂಟೈನ್​ ನಿಯಮಗಳನ್ನು ಸಡಿಲಿಸುವ ಕುರಿತು ಚರ್ಚೆಯಲ್ಲಿ ತೊಡಗಿರುವ 24 ಗಂಟೆಗಳ ನಂತರ ಲಾಕ್‌ಡೌನ್ ಘೋಷಿಸಲಾಗಿದೆ.

  • #BREAKING: Greater Brisbane will be entering a three-day lockdown, starting 6pm tonight til 6pm Monday. People living in council areas of Brisbane, Logan, Ipswich, Moreton Bay, and Redlands affected. Masks are mandated if you are leaving home for an essential reason.

    — Melissa Maykin (@MelissaMaykin) January 7, 2021 " class="align-text-top noRightClick twitterSection" data=" ">

"ಮುಂದಿನ ವಾರ ಗಬ್ಬಾದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ, ಬ್ರಿಸ್ಬೇನ್‌ನಲ್ಲಿ ಮೂರು ದಿನಗಳ ಲಾಕ್‌ಡೌನ್‌ ಪರಿಣಾಮ ನಿರ್ಧರಿಸಲು ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ತುರ್ತಾಗಿ ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಪಂದ್ಯ ನಡೆಯುವುದು ಅನುಮಾನವಾಗಿತ್ತು. ಏಕೆಂದರೆ ಕಠಿಣ ಜೈವಿಕ ಭದ್ರತಾ ನಿರ್ಬಂಧಗಳಿಗೆ ಭಾರತ ಹಿಂಜರಿಯುತ್ತದೆ" ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಗುರುವಾರ, ಬಿಸಿಸಿಐ ಬ್ರಿಸ್ಬೇನ್‌ನ ಕಠಿಣ ಕ್ವಾರಂಟೈನ್ ಪ್ರೋಟೋಕಾಲ್‌ನಲ್ಲಿ ವಿನಾಯಿತಿ ಕೋರಿ ಕ್ರಿಕೆಟ್ ಆಸ್ಟ್ರೇಲಿಯಾಗೆ ಪತ್ರ ಬರೆದು, ಪ್ರವಾಸದ ಆರಂಭದಲ್ಲಿ ಒಪ್ಪಿದ ಕಟ್ಟುನಿಟ್ಟಾದ ಕ್ವಾರಂಟೈನ್​ ನಿಯಮವನ್ನು ಈಗಾಗಲೇ ಆಟಗಾರರು ಪೂರೈಸಿದ್ದಾರೆ ಎಂದು ನೆನಪಿಸಿದೆ.

ಬ್ರಿಸ್ಬೇನ್‌ನಲ್ಲಿನ ಸಂಪರ್ಕ ತಡೆಯ ನಿಯಮಗಳ ಪ್ರಕಾರ, ದಿನದ ಆಟ ಮುಗಿನ ನಂತರ ಆಟಗಾರರು ತಮ್ಮ ಹೋಟೆಲ್ ಕೋಣೆ ಬಿಟ್ಟು ಹೊರಬರುವಂತಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.