ETV Bharat / sports

124 ರನ್​ಗಳಿಗೆ ಟೀಂ ಇಂಡಿಯಾ ಆಲೌಟ್​... ಗೆಲುವಿನತ್ತ ಕಿವೀಸ್​ ಪಡೆ - 124 ರನ್​ಗಳಿಗೆ ಟೀಂ ಇಂಡಿಯಾ ಆಲೌಟ್

ಭಾರತದ ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದರೂ ಕೂಡ ಬಾಟ್ಸಮನ್​ಗಳ ವೈಫಲ್ಯ ಅನುಭವಿಸಿದರು. ಇದರಿಂದಾಗಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ.

2nd Test
124 ರನ್​ಗಳಿಗೆ ಟೀಂ ಇಂಡಿಯಾ ಆಲೌಟ್
author img

By

Published : Mar 2, 2020, 6:07 AM IST

ಕ್ರೈಸ್ಟ್​ಚರ್ಚ್: ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಕೇವಲ 124 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಎದುರಾಳಿ ತಂಡಕ್ಕೆ 132 ರನ್​ಗಳ ಅಲ್ಪ ಗೆಲುವಿನ ಗುರಿ ನೀಡಿದೆ.

ಹೇಗ್ಲಿ ಓವಲ್​​ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಟೀಂ ಇಂಡಿಯಾ 124 ರನ್​ಗಳಿಗೆ ಆಲೌಟ್ ಆಗಿದೆ. ಶನಿವಾರದ ದಿನದಾಂತ್ಯಕ್ಕೆ 90 ರನ್​ಗೆ ಪ್ರಮುಖ 6 ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಆಟ ಆರಂಭಿಸಿತ್ತು.

ನಿನ್ನೆ ಆಟ ಕಾಯ್ದುಕೊಂಡಿದ್ದ ​ಹನುಮವಿಹಾರಿ (9) ಮತ್ತು ರಿಷಭ್ ಪಂತ್ (4) ಇಂದು ಬಂದಷ್ಟೇ ವೇಗವಾಗಿ ಹೋದರು. ಬಳಿಕ ರವೀಂದ್ರ ಜಡೇಜಾ (16), ಮೊಹಮ್ಮದ್ ಶಮಿ (5) ರನ್ ಗಳಿಸಿ ಔಟಾದರು.

ನ್ಯೂಜಿಲ್ಯಾಂಡ್ ಪರ ಸೌಥಿ 3, ಟ್ರೆಂಟ್ ಬೋಲ್ಟ್ 4 ವಿಕೆಟ್ ಪಡೆದು ಟೀಂ ಇಂಡಿಯಾ ಕಾಡಿದರು.

ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕಿವೀಸ್ ಪಡೆ ಉತ್ತಮ ಆರಂಭ ಪಡೆದಿದ್ದು, ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದೆ. ಟಾಮ್ ಲಾಥಮ್ ಹಾಗೂ ಟಾಮ್ ಬ್ಲಂಡೆಲ್ ಆರಂಭಿಕರಾಗಿ ಆಗಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.