ETV Bharat / sports

ನಾಳೆ ಐಪಿಎಲ್​ ಹರಾಜು: ಈ ಹಿಂದೆ ಭಾರೀ ಮೊತ್ತಕ್ಕೆ ಬಿಕರಿಯಾದ 10 ಆಟಗಾರರು​ ಇವರು!

ನಾಳೆ ಇಂಡಿಯನ್​ ಪ್ರೀಮಿಯರ್ ಲೀಗ್​ನ 14ನೇ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅನೇಕ ಸ್ಟಾರ್​ ಪ್ಲೇಯರ್ಸ್​ ಇದರಲ್ಲಿ ಭಾಗಿಯಾಗಲಿದ್ದಾರೆ. ಹಾಗಾಗಿ ಯಾರು ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.

IPL 2021 Auctions
IPL 2021 Auctions
author img

By

Published : Feb 17, 2021, 9:32 PM IST

ಹೈದರಾಬಾದ್​: 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ಗಾಗಿ ನಾಳೆ ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ 8 ಫ್ರಾಂಚೈಸಿಗಳು ಇದರಲ್ಲಿ ಭಾಗಿಯಾಗಿ ತಮಗೆ ಅಗತ್ಯವಿರುವ ಪ್ಲೇಯರ್ಸ್ ಖರೀದಿ ಮಾಡುವ ಯೋಜನೆ ಹಾಕಿಕೊಂಡಿವೆ. ಇದರ ಮಧ್ಯೆ ಈ ಹಿಂದೆ ನಡೆದ ಬಿಡ್ಡಿಂಗ್​ನಲ್ಲಿ ಈ ಕೆಳಗಿನ 10 ಪ್ಲೇಯರ್ಸ್​ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದರು.

1. ಯುವರಾಜ್​ ಸಿಂಗ್​: 16 ಕೋಟಿ ರೂ. (ಡೆಲ್ಲಿ ಡೇರ್​ಡೆವಿಲ್ಸ್​ 2015)

IPL 2021 Auctions
ಯುವರಾಜ್​ ಸಿಂಗ್​

2015ರಲ್ಲಿ ಯುವರಾಜ್​ ಸಿಂಗ್​ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿ ದಾಖಲೆ ನಿರ್ಮಿಸಿದ್ದರು. ಡೆಲ್ಲಿ ತಂಡ ಬರೋಬ್ಬರಿ 16 ಕೋಟಿ ರೂ. ನೀಡಿ ಇವರನ್ನು ಖರೀದಿ ಮಾಡಿತ್ತು. ಆದರೆ ಈ ವೇಳೆ ಯುವಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. 14 ಪಂದ್ಯಗಳಿಂದ 248 ರನ್ ​ಗಳಿಸಿದ್ದು, ಇದರಲ್ಲಿ ಎರಡು ಅರ್ಧಶತಕ ಸೇರಿಕೊಂಡಿದ್ದವು.

2. ಪ್ಯಾಟ್​ ಕುಮ್ಮಿನ್ಸ್​​​: 15.5 ಕೋಟಿ ರೂ. (ಕೋಲ್ಕತ್ತಾ ನೈಟ್ ರೈಡರ್ಸ್​​ 2020)

ಆಸ್ಟ್ರೇಲಿಯಾದ ವೇಗದ ಬೌಲರ್​ಗೆ 2020ರ ಬಿಡ್ಡಿಂಗ್​ನಲ್ಲಿ ಕೋಲ್ಕತ್ತಾ ತಂಡ 15.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಜತೆಗೆ ಇಷ್ಟೊಂದು ಹಣ ನೀಡಿ ಖರೀದಿ ಮಾಡಿದ ವಿದೇಶಿ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದರು. ಜತೆಗೆ ಬೆನ್​​ ಸ್ಟೋಕ್ಸ್​​ ದಾಖಲೆ ಬ್ರೇಕ್ ಮಾಡಿದ್ದರು.

3. ಬೆನ್​ ಸ್ಟೋಕ್ಸ್​​​: 14.5 ಕೋಟಿ ರೂ. ( ರೈಸಿಂಗ್ ಪುಣೆ ಸೂಪರ್​ಜೈಂಟ್ಸ್​​ 2017)

IPL 2021 Auctions
ಬೆನ್​ ಸ್ಟೋಕ್ಸ್​​

2017ರಲ್ಲಿ ಬರೋಬ್ಬರಿ 14.5 ಕೋಟಿ ರೂ.ಗೆ ಸೇಲ್​ ಆಗಿದ್ದ ಬೆನ್​ ಸ್ಟೋಕ್ಸ್​, ಐಪಿಎಲ್ ಹರಾಜು ಪ್ರಕ್ರಿಯೆ ಐತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಹರಾಜುಗೊಂಡ ವಿದೇಶಿ ಪ್ಲೇಯರ್​ ಆಗಿದ್ದರು.

4.ಯುವರಾಜ್​ ಸಿಂಗ್​​: 14 ಕೋಟಿ ರೂ. (ರಾಯಲ್​ ಚಾಲೆಂಜರ್ಸ್​ ಬೆಂಗಳೂರು 2014)

2007ರ ಟಿ-20 ವಿಶ್ವಕಪ್​ ಹಾಗೂ 2011ರ ಏಕದಿನ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಯುವಿ 2014ರಲ್ಲಿ ಮತ್ತೊಮ್ಮೆ ಹೆಚ್ಚಿನ ಮೊತ್ತಕ್ಕೆ ಬಿಕರಿಯಾದರು. 2014ರಲ್ಲಿ ರಾಯಲ್​ ಚಾಲೆಂಜರ್ಸ್​​ 14 ಕೋಟಿ ರೂ. ನೀಡಿ ಇವರನ್ನು ಖರೀದಿ ಮಾಡಿತ್ತು.

5. ಬೆನ್​ ಸ್ಟೋಕ್ಸ್​​​: 12.5 ಕೋಟಿ ರೂ. (ರಾಜಸ್ಥಾನ ರಾಯಲ್ಸ್​​ 2018)

ಇಂಗ್ಲೆಂಡ್ ಆಲ್​ರೌಂಡರ್ ಬೆನ್​ ಸ್ಟೋಕ್ಸ್ 2018ರಲ್ಲಿ ಮತ್ತೊಮ್ಮೆ ಹೆಚ್ಚಿನ ಮೊತ್ತಕ್ಕೆ ಬಿಕರಿಗೊಂಡಿದ್ದರು. ರಾಜಸ್ಥಾನ ರಾಯಲ್ಸ್​ 2018ರಲ್ಲಿ 12.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.

6. ದಿನೇಶ್ ಕಾರ್ತಿಕ್​: 12. 5ಕೋಟಿ ರೂ. (ಡೆಲ್ಲಿ ಡೇರ್​ ಡೆವಿಲ್ಸ್​​​ 2014)

IPL 2021 Auctions
ದಿನೇಶ್ ಕಾರ್ತಿಕ್​

2013ರ ಐಪಿಎಲ್​ನಲ್ಲಿ 19 ಪಂದ್ಯಗಳಿಂದ ಬರೋಬ್ಬರಿ 519 ರನ್​ ಗಳಿಸಿದ್ದ ದಿನೇಶ್​ ಕಾರ್ತಿಕ್​ 2014ರ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗಿದ್ದರು. ಡೆಲ್ಲಿ ಫ್ರಾಂಚೈಸಿ 12.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.

7. ಜಯದೇವ್​ ಉನ್ಕದತ್​​: 11.5 ಕೋಟಿ ರೂ. (ರಾಜಸ್ಥಾನ ರಾಯಲ್ಸ್​​ 2018)

IPL 2021 Auctions
ಜಯದೇವ್​ ಉನ್ಕದತ್​

2017ರ ಐಪಿಎಲ್​ನಲ್ಲಿ 12 ಪಂದ್ಯಗಳಿಂದ 24 ವಿಕೆಟ್​ ಕಬಳಿಸಿದ್ದ ಜಯದೇವ್​ ಉನ್ಕದತ್​ಗೆ 2018ರಲ್ಲಿ ರಾಜಸ್ಥಾನ ರಾಯಲ್ಸ್​​ 11.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.

8. ಗೌತಮ್ ಗಂಭೀರ್​: 11.4 ಕೋಟಿ ರೂ. (ಕೋಲ್ಕತ್ತಾ ನೈಟ್​ ರೈಡರ್ಸ್​​ 2011)

IPL 2021 Auctions
ಗೌತಮ್​ ಗಂಭೀರ್

ಟೀಂ ಇಂಡಿಯಾ ಆರಂಭಿಕ ಆಟಗಾರನಾಗಿದ್ದ ಗೌತಮ್​ ಗಂಭೀರ್​ 2010ರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಕೋಲ್ಕತ್ತಾ ತಂಡ 11.4 ಕೋಟಿ ರೂ. ನೀಡಿ ಇವರನ್ನು ಖರೀದಿ ಮಾಡಿತ್ತು. ಈ ಆವೃತ್ತಿಯಲ್ಲಿ ಗಂಭೀರ್ 15 ಪಂದ್ಯಗಳಿಂದ 378 ರನ್ ​ಗಳಿಸಿದ್ರು.

9. ಕೆ.ಎಲ್.ರಾಹುಲ್​: 11 ಕೋಟಿ ರೂ. (ಕಿಂಗ್ಸ್ ಇಲೆವೆಲ್​ ಪಂಜಾಬ್​ 2018)

IPL 2021 Auctions
ಕೆ.ಎಲ್.ರಾಹುಲ್​

2018ರಲ್ಲಿ ಪಂಜಾಬ್ ತಂಡದಿಂದ 11 ಕೋಟಿ ರೂ.ಗೆ ಖರೀದಿಯಾಗಿದ್ದ ರಾಹುಲ್​, 14 ಪಂದ್ಯಗಳಿಂದ 659 ರನ್ ​ಗಳಿಸಿದ್ರು. ಇದರಲ್ಲಿ 6 ಅರ್ಧಶತಕ ಸೇರಿಕೊಂಡಿದ್ದವು.

10. ಗ್ಲೆನ್​ ಮ್ಯಾಕ್ಸ್​ವೆಲ್​: 10.75 ಕೋಟಿ ರೂ. (ಕಿಂಗ್ಸ್ ಇಲೆವೆನ್​ ಪಂಜಾಬ್​ 2020)

IPL 2021 Auctions
ಗ್ಲೆನ್​ ಮ್ಯಾಕ್ಸ್​ವೆಲ್​

ಆಸ್ಟ್ರೇಲಿಯಾದ ಆಲ್​ರೌಂಡರ್ ಮ್ಯಾಕ್ಸ್​ವೆಲ್​ 2020ರಲ್ಲಿ ಪಂಜಾಬ್​ ತಂಡದಿಂದ ಖರೀದಿಯಾಗಿದ್ದರು. ಇವರಿಗೆ 10.75 ಕೋಟಿ ರೂ. ನೀಡಲಾಗಿತ್ತು. ಆದರೆ ಕಳಪೆ ಪ್ರದರ್ಶನ ನೀಡಿದ್ದ ಈ ಪ್ಲೇಯರ್​ 13 ಪಂದ್ಯಗಳಿಂದ ಕೇವಲ 108 ರನ್ ​ಗಳಿಸಿದರು. ಹೀಗಾಗಿ ತಂಡ ಇವರನ್ನ ಕೈಬಿಟ್ಟಿದೆ.

ಓದಿ: IPL ಮಿನಿ ಹರಾಜು.. ಮ್ಯಾಕ್ಸ್​ವೆಲ್​ಗಾಗಿ ಆರ್​ಸಿಬಿ, ಸಿಎಸ್​ಕೆ ಪೈಪೋಟಿ.. ಮಲನ್-ಮೋಯಿನ್​​ ಮೇಲೆ ಎಲ್ಲರ ಕಣ್ಣು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.