ಮೆಲ್ಬೋರ್ನ್(ಆಸ್ಟ್ರೇಲಿಯಾ): ಹೆಂಡರ್ಸನ್ ಅವರು ಇತ್ತೀಚೆಗೆ ಪರ್ತ್ ಮೂಲದ ಆರೋಗ್ಯ ವಿಮಾ ಪೂರೈಕೆದಾರ ಎಚ್‌ಬಿಎಫ್‌ಸಿಇಒ ಸ್ಥಾನವನ್ನು ವಹಿಸಿಕೊಂಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
"ಇತ್ತೀಚೆಗೆ ನನ್ನ ತವರೂರು ಪರ್ತ್‌ನಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದಲ್ಲಿ ಉನ್ನತ ಹುದ್ದೆಗೆ ಸಾಕಷ್ಟು ಸಮಯ ನೀಡಲು ನನಗೆ ಕಷ್ಟಕರವಾಗಿದೆ, ಆದ್ದರಿಂದ ನಾನು ಆ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸಲು ನಿರ್ಧರಿಸಿದೆ" ಎಂದು ಹೆಂಡರ್ಸನ್ ತಿಳಿಸಿದರು.
ನೂತನ ಅಧ್ಯಕ್ಷ: ಪ್ರಸ್ತುತ ಮಂಡಳಿಯ ಸದಸ್ಯರಾಗಿರುವ ಮೈಕ್ ಬೈರ್ಡ್ ಅವರು ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ದೇಶಕರು ಮತ್ತು ಪ್ರಾಂತೀಯ ಮುಖ್ಯಸ್ಥರ ಬೆಂಬಲವನ್ನು ಪಡೆದಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.
-
He will be replaced by current board member and former NSW Premier Mike Baird.https://t.co/Ov8xAUdIul
— cricket.com.au (@cricketcomau) December 11, 2022 " class="align-text-top noRightClick twitterSection" data="
">He will be replaced by current board member and former NSW Premier Mike Baird.https://t.co/Ov8xAUdIul
— cricket.com.au (@cricketcomau) December 11, 2022He will be replaced by current board member and former NSW Premier Mike Baird.https://t.co/Ov8xAUdIul
— cricket.com.au (@cricketcomau) December 11, 2022
ಬೈರ್ಡ್ 18 ತಿಂಗಳಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಾಲ್ಕನೇ ವ್ಯಕ್ತಿಯಾಗಲಿದ್ದಾರೆ. 54ವರ್ಷದ ಬೇರ್ಡ್, 2014 ರಿಂದ 2017ರವರೆಗೆ ನ್ಯೂ ಸೌತ್ ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: ಸೆಮೀಸ್ನಲ್ಲಿ ಅರ್ಜೆಂಟೀನಾ-ಕ್ರೊವೇಷಿಯಾ, ಮೊರಾಕ್ಕೊ-ಫ್ರಾನ್ಸ್ ಫೈಟ್: ಯಾರಿಗೆ ಫೈನಲ್ ಟಿಕೆಟ್?