ETV Bharat / sports

ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಕೊಹ್ಲಿ ಫಾರ್ಮ್ ಕಂಡುಕೊಳ್ತಾರೆ: ಬಾಲ್ಯದ ಕೋಚ್​ ಸಲಹೆ - ವಿರಾಟ್​ ಕೊಹ್ಲಿ ಬ್ಯಾಟಿಂಗ್ ವೈಫಲ್ಯ

ವಿರಾಟ್​ ಕೊಹ್ಲಿ ಇತ್ತೀಚೆಗೆ ಮುಗಿದ ಟೆಸ್ಟ್​ ಸರಣಿಯ ಎರಡೂ ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಹೀಗಾಗಿ, ಅವರ 71ನೇ ಶತಕದ ಕಾಯುವಿಕೆ ಮುಂದುವರಿಯುತ್ತಲೇ ಇದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ 2019ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದು, ಅಲ್ಲಿಂದ 70ಕ್ಕೂ ಹೆಚ್ಚಿನ ಇನ್ನಿಂಗ್ಸ್ ಆಡಿಯೂ ಮೂರಂಕಿ ಮೊತ್ತ ತಲುಪಲಾಗುತ್ತಿಲ್ಲ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ
ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ
author img

By

Published : Mar 16, 2022, 6:39 PM IST

ಮುಂಬೈ:​ ಇತ್ತೀಚಿನ ಕೆಲವು ಸರಣಿಗಳಲ್ಲಿ ರನ್​ಗಳಿಸಲು ಪರದಾಡುತ್ತಿರುವ ವಿರಾಟ್​ ಕೊಹ್ಲಿ ಬಗ್ಗೆ ಮಾತನಾಡರುವ ಅವರ ಬಾಲ್ಯದ ಕೋಚ್ ರಾಜ್​ಕುಮಾರ್​ ಶರ್ಮಾ, ಮತ್ತೆ ಕೊಹ್ಲಿ ತಮ್ಮ ಅಕಾಡೆಮಿಗೆ ಮರಳಿದರೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಫಾರ್ಮ್​ಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ ಇತ್ತೀಚೆಗೆ ಮುಗಿದ ಟೆಸ್ಟ್​ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಹೀಗಾಗಿ, ಅವರ 71ನೇ ಶತಕದ ಕಾಯುವಿಕೆ ಮುಂದುವರಿಯುತ್ತಲೇ ಇದೆ. ಭಾರತದ ಮಾಜಿ ನಾಯಕ 2019ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದು, ಅಲ್ಲಿಂದ 70ಕ್ಕೂ ಹೆಚ್ಚಿನ ಇನ್ನಿಂಗ್ಸ್ ಆಡಿಯೂ ಮೂರಂಕಿ ಮೊತ್ತ ತಲುಪಲಾಗುತ್ತಿಲ್ಲ. ಹಾಗಾಗಿ ಶರ್ಮಾ ಅವರು ಕೊಹ್ಲಿ ಮತ್ತೆ ಅಕಾಡೆಮಿಗೆ ಮರಳಿ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕೆಂದು ಬಯಸಿದ್ದಾರೆ.

ವಿರಾಟ್ ತಮ್ಮ ಬೇಸಿಕ್ಸ್​ ಅನ್ನು ಮತ್ತೆ ಕಲಿಯಬೇಕಿದೆ. ಅವರು ಮತ್ತೆ ಅಕಾಡೆಮಿಗೆ ಬರಬೇಕೆಂದು ನಾನು ಬಯಸುತ್ತಿದ್ದೇನೆ. ನಿನ್ನೆಯಿಂದ ಈ ವಿಷಯದ ಬಗ್ಗೆ ಆಲೋಚಿಸುತ್ತಿದ್ದೇನೆ, ಶೀಘ್ರದಲ್ಲಿ ಅವರೊಂದಿಗೆ ಮಾತನಾಡುವೆ. ಅವರು ಅಕಾಡೆಮಿಯಲ್ಲಿ ಕ್ರಿಕೆಟ್ ಆರಂಭಿಸಿದಾಗ ಗಳಿಸಿಕೊಂಡಿದ್ದ ಆತ್ಮವಿಶ್ವಾಸವನ್ನು ಮತ್ತೆ ಪಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ರಾಜ್​ಕುಮಾರ್​ ಖೇಲ್​ನೀತಿ ಪೋಡ್​ಕಾಸ್ಟ್‌​ನಲ್ಲಿ ತಿಳಿಸಿದರು.

ಕೊಹ್ಲಿ ವೈಫಲ್ಯ ಅನುಭವಿಸುತ್ತಿರುವ ಬಗ್ಗೆ ಮಾತನಾಡಿರುವ ಅವರು, "ಅವರು ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲರು. ದುರಾದೃಷ್ಟವಶಾತ್ ತುಂಬಾ ಎಚ್ಚರಿಕೆಯಿಂದಾಡಲು ಪ್ರಯತ್ನಿಸುತ್ತಿದ್ದಾರೆ. ಬ್ಯಾಟಿಂಗ್​ಗೆ ಕಷ್ಟವಾಗುವ ಅಂತಹ ಪಿಚ್​ಗಳಲ್ಲಿ ರಿಷಭ್​ ಪಂತ್ ಮತ್ತು ಶ್ರೇಯಸ್​ ಅಯ್ಯರ್ ರೀತಿ ಅವಕಾಶ ತೆಗೆದುಕೊಂಡು ಬ್ಯಾಟಿಂಗ್ ಮಾಡಬೇಕಿತ್ತು. ಒಂದು ವೇಳೆ ತಮ್ಮ ವೃತ್ತಿ ಜೀವನದಾದ್ಯಂತ ವಿಜೃಂಭಿಸಿದ ನಿರ್ಭೀತಿಯ ಬ್ಯಾಟಿಂಗ್ ಮಾಡುವುದಕ್ಕೆ ಆರಂಭಿಸಿದರೆ, ಆತನಿಂದ ಮತ್ತೆ ಅತ್ಯುತ್ತಮ ಆಟ ಹೊರಬರಲಿದೆ ಎಂದು ರಾಜ್​ಕುಮಾರ್​ ವಿವರಿಸಿದರು.

ಇದನ್ನೂ ಓದಿ:ರೋಹಿತ್ ಶರ್ಮಾ ಕೊಹ್ಲಿಗಿಂತಲೂ ಉತ್ತಮ ನಾಯಕನಾಗಬಹುದು: ಮಾಜಿ ಕ್ರಿಕೆಟಿಗರಿಂದ ಶ್ಲಾಘನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.