ಹೋವ್ (ಯುಕೆ): ಭಾರತ ತಂಡದ ಟೆಸ್ಟ್ ಪರಿಣತ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರಾ ಇಂಗ್ಲೆಂಡ್ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಸಸೆಕ್ಸ್ ತಂಡದ ಪರ ಆಡುತ್ತಿರುವ ಪೂಜಾರಾ ನಿನ್ನೆ ನಡೆದ ಮಿಡ್ಲ್ಸೆಕ್ಸ್ ವಿರುದ್ಧದ ಪಂದ್ಯದಲ್ಲಿ 90 ಎಸೆತಗಳಲ್ಲಿ 132 ರನ್ ಚಚ್ಚಿದ್ದಾರೆ. ಈ ಮೂಲಕ ಇಂಗ್ಲೆಂಡ್ನ ದೇಶೀಯ ಏಕದಿನ ಕ್ರಿಕೆಟ್ನಲ್ಲಿ 3ನೇ ಅಬ್ಬರದ ಶತಕ ದಾಖಲಿಸಿದ್ದಾರೆ.
ಭಾರತ ತಂಡದಲ್ಲಿ ರನ್ ಗಳಿಸಲು ಪರದಾಡುತ್ತಿರುವ ಮತ್ತು ಏಕದಿನದ ತಂಡದಲ್ಲಿ ಈವರೆಗೂ ಸ್ಥಾನ ಪಡೆಯದ ಪೂಜಾರಾ ವಿದೇಶಿ ಕೌಂಟಿ ಏಕದಿನ ಕ್ರಿಕೆಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಲಯದಲ್ಲಿದ್ದಾರೆ. ಈವರೆಗೂ ಆಡಿದ 8 ಪಂದ್ಯಗಳಲ್ಲಿ 109.40 ರ ಸರಾಸರಿಯಲ್ಲಿ 1094 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು, 2 ಅರ್ಧಶತಕಗಳಿದ್ದು, 174 ಅತ್ಯಧಿಕ ಸ್ಕೋರ್ ಆಗಿದೆ.
ಏಕದಿನ ಚಾಂಪಿಯನ್ಶಿಪ್ನಲ್ಲಿ ಪೂಜಾರಾ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ನಿನ್ನೆಯ ಪಂದ್ಯದಲ್ಲಿ 20 ಬೌಂಡರಿ, 2 ಸಿಕ್ಸರ್ಗಳು ಪೂಜಾರಾ ಬ್ಯಾಟ್ನಿಂದ ಸಿಡಿದಿವೆ.
ಓದಿ: ಹೃದಯ ಗೆದ್ದ ಶುಭಮನ್.. ಜಿಂಬಾಬ್ವೆ ಆಲ್ರೌಂಡರ್ಗೆ ಜರ್ಸಿ ಗಿಫ್ಟ್ ನೀಡಿದ ಗಿಲ್