ETV Bharat / sports

ಡ್ರೀಮ್​ ಫಾರ್ಮ್​ ಚೇತೇಶ್ವರ್​.. ಕೌಂಟಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಪೂಜಾರ - ಸಸೆಕ್ಸ್ ತಂಡದ ಪರ ಪೂಜಾರ ಶತಕ ಹ್ಯಾಟ್ರಿಕ್ ಶತಕ

ಫಾರ್ಮ್​ ಸಮಸ್ಯೆಯಿಂದ ಟೀಮ್ ಇಂಡೀಯಾದಿಂದ ಹೊರಬಿದ್ದಿರುವ ಪೂಜಾರ ಮತ್ತೆ ತಂಡ ಸೇರಿಕೊಳ್ಳುವುದಕ್ಕೆ ಶ್ರಮಿಸುತ್ತಿದ್ದಾರೆ. ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಆಡುವ ಮೂಲಕ ಕಳೆದುಕೊಂಡಿರುವ ತಮ್ಮ ಬ್ಯಾಟಿಂಗ್ ಚಾರ್ಮ್​ಅನ್ನು ಮರಳಿ ಪಡೆದಿದ್ದಾರೆ.

Cheteshwar Pujara hattrick century for Sussex in county championship
ಕೌಂಟಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಪೂಜಾರ
author img

By

Published : Apr 30, 2022, 4:35 PM IST

ಲಂಡನ್: ಟೀಮ್​ ಇಂಡಿಯಾ ಸ್ಟಾರ್ ಬ್ಯಾಟರ್​ ಚೇತೇಶ್ವರ್ ಪೂಜಾರ ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಸಸೆಕ್ಸ್​ ಪರ ಆಡಿರುವ ಮೂರು ಪಂದ್ಯಗಳಲ್ಲೂ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಫಾರ್ಮ್​ ಸಮಸ್ಯೆಯಿಂದ ಟೀಮ್ ಇಂಡೀಯಾದಿಂದ ಹೊರಬಿದ್ದಿರುವ ಪೂಜಾರ ಮತ್ತೆ ತಂಡ ಸೇರಿಕೊಳ್ಳುವುದಕ್ಕೆ ಶ್ರಮಿಸುತ್ತಿದ್ದಾರೆ. ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಆಡುವ ಮೂಲಕ ಕಳೆದುಕೊಂಡಿರುವ ತಮ್ಮ ಬ್ಯಾಟಿಂಗ್ ಚಾರ್ಮ್​ಅನ್ನು ಮರಳಿ ಪಡೆದಿದ್ದಾರೆ.

ಪ್ರಸ್ತುತ ಟೆಸ್ಟ್​ ಕ್ರಿಕೆಟ್​ನಲ್ಲಿ ದಿ ವಾಲ್ ಎಂದೇ ಖ್ಯಾತರಾಗಿರುವ ಪೂಜಾರ ಡುರಮ್​ ವಿರುದ್ಧ ನಡೆಯಿತ್ತಿರುವ ಪಂದ್ಯದಲ್ಲಿ ಶತಕ ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಶುಕ್ರವಾರ ಪೂಜಾರ 162 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಟಿದರು. ದಿನದಂತ್ಯಕ್ಕೆ 198 ಎಸೆತಗಳಲ್ಲಿ 16 ಬೌಂಡರಿ ಸಹಿತ ಅಜೇಯ 128 ರನ್​ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಭಾರತೀಯ ಬ್ಯಾಟರ್​​ ತಮ್ಮ ಅದ್ಭುತ ಶತಕ ಸಿಡಿಸುವ ಮೂಲಕ ಡುರಮ್ ವಿರುದ್ಧ ಸಸೆಕ್ಸ್ 100 + ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾಗಿದ್ದಾರೆ.

ಪೂಜಾರ ಸಸೆಕ್ಸ್ ಪರ ಪದಾಪರ್ಣೆ ಪಂದ್ಯದಲ್ಲಿ 6 ಮತ್ತ ಅಜೇಯ 201 ರನ್​, 2ನೇ ಪಂದ್ಯದಲ್ಲಿ 109 ಮತ್ತು 12, ಇದೀಗ ಅಜೇಯ ಶತಕ ಸಿಡಿಸಿ ಬ್ಯಾಟಿಂಗ್ ಮುಂದುವರಿಸುತ್ತಿದ್ದಾರೆ.

ಜುಲೈ​​ನಲ್ಲಿ ಟೀಮ್ ಇಂಡಿಯಾ ಏಕೈಕ ಟೆಸ್ಟ್ ಪಂದ್ಯ ಮತ್ತು ಸೀಮಿತ ಓವರ್​ಗಳ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಭಾರತ ತಂಡಕ್ಕೆ ಕಮ್​ಬ್ಯಾಕ್ ಮಾಡುವುದಕ್ಕೆ ನಾನು ಸಿದ್ಧವಾಗಿದ್ದೇನೆ ಎಂಬ ಸಂದೇಶವನ್ನು ಪೂಜಾರ ಆಯ್ಕೆ ಸಮಿತಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:ರೋಹಿತ್​, ಸಚಿನ್ ದಾಖಲೆ ಸರಿಗಟ್ಟಿದ ಕುಲ್ದೀಪ್; ಡೆಲ್ಲಿಯ ನಾಲ್ಕು ಗೆಲುವಿನಲ್ಲೂ ಪಂದ್ಯಶ್ರೇಷ್ಠ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.