ETV Bharat / sports

ಭಾವಿ ಸಂಗಾತಿ ಜೊತೆ ಉಕ್ರೇನ್​ನಿಂದ ಭಾರತಕ್ಕೆ ಮರಳಿದ ಚೆಸ್​ ಆಟಗಾರ ಅನ್ವೇಶ್​ ಉಪಾಧ್ಯಾಯ - ಉಕ್ರೇನ್​ನಿಂದ ಭಾರತಕ್ಕೆ ಮರಳಿದ ಅನ್ವೇಶ್​ ಉಪಾಧ್ಯಾಯ

ರಷ್ಯಾ ಉಕ್ರೇನ್​ ಮೇಲೆ ಯುದ್ಧ ಆರಂಭಿಸಿದ ನಂತರ ಮಾಜಿ ರಾಷ್ಟ್ರೀಯ ರ್ಯಾಪಿಡ್​ ಚೆಸ್​ ಚಾಂಪಿಯನ್ ಆಗಿರುವ ಅನ್ವೇಶ್ ಹಲವಾರು ಭಾರತೀಯರ ಜೊತೆಗೆ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದರು. ಸಾಕಷ್ಟು ಅಡಚಣೆಗಳನ್ನು ಯಶಸ್ವಿಯಾಗಿ ಮೀರಿ ಕೊನೆಗೆ ಬುಧವಾರ ರಾತ್ರಿ ತನ್ನ ತವರಾದ ಭುವನೇಶ್ವರಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ.

Chess player Anwesh Upadhyaya safely returns home from war-torn Ukraine
ಭಾರತಕ್ಕೆ ಮರಳಿದ ಚೆಸ್​ ಆಟಗಾರ ಅನ್ವೇಶ್​ ಉಪಾಧ್ಯಾಯ
author img

By

Published : Mar 10, 2022, 9:49 PM IST

ಚೆನ್ನೈ: ರಷ್ಯಾ ಆಕ್ರಮಣದ ವೇಳೆ ಉಕ್ರೇನ್​ನಲ್ಲಿ ಸಿಲುಕಿದ್ದ ಭಾರತದ ಚೆಸ್​ ಆಟಗಾರ ಅನ್ವೇಶ್​ ಉಪಾಧ್ಯಾಯ ಕೊನೆಗೂ ತಮ್ಮ ಸಂಗಾತಿ ವಿಕ್ಟೋರಿಯಾ ಇವನೋವ ಜೊತೆಗೆ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.

ರಷ್ಯಾ ಉಕ್ರೇನ್​ ಮೇಲೆ ಯುದ್ಧ ಆರಂಭಿಸಿದ ನಂತರ ಮಾಜಿ ರಾಷ್ಟ್ರೀಯ ರ್ಯಾಪಿಡ್​ ಚೆಸ್​ ಚಾಂಪಿಯನ್ ಆಗಿರುವ ಅನ್ವೇಶ್ ಹಲವಾರು ಭಾರತೀಯರ ಜೊತೆಗೆ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದರು. ಸಾಕಷ್ಟು ಅಡಚಣೆಗಳನ್ನು ಯಶಸ್ವಿಯಾಗಿ ಮೀರಿ ಕೊನೆಗೆ ಬುಧವಾರ ರಾತ್ರಿ ತನ್ನ ತವರಾದ ಭುವನೇಶ್ವರಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ.

"ಹೌದು, ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ ನಂತರ ಅಲ್ಲಿಂದ ನಾವು ಪಾರಾಗಿ ಬಂದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಆದರೆ ಉಕ್ರೇನ್​ ನನ್ನ ಮನಸ್ಸಿನಲ್ಲಿ ಆಳವಾಗಿ ಸದಾ ಉಳಿದುಕೊಳ್ಳಲಿದೆ" ಎಂದು ಭಾರತದಲ್ಲಿ ತಮ್ಮ ಹೊಸ ಜೀವನವನ್ನು ಆರಂಭಿಸುತ್ತಿರುವ ಅನ್ವೇಶ್​ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾಸ್ಟರ್ ಆಗಿರುವ ಅನ್ವೇಶ್​ ಎರಡು ವಾರಗಳ ಕಾಯುವಿಕೆಯ ನಂತರ, ಕೀವ್​ನಿಂದ ರೈಲು ಪ್ರಯಾಣದ ಮೂಲಕ​ ಗಡಿಯಲ್ಲಿರುವ ಲಿವೀವ್ ತಲುಪಿ ನಂತರ ಪೋಲೆಂಡ್ ಮಾರ್ಗದ ಮೂಲಕ ಭಾರತವನ್ನು ತಲುಪಿದ್ದಾರೆ. ಮಗ ಸುರಕ್ಷಿತವಾಗಿ ಮನೆಗೆ ಬಂದಿರುವುದಕ್ಕೆ ಪೋಷಕರಾದ ನೇತಾಜಿ ಮತ್ತು ಜಯಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ.

ಅನ್ವೇಶ್ ಸುರಕ್ಷಿತವಾಗಿ ಮನೆಗೆ ಮರಳಿರುವುದು ನಮಗೆ ಅತೀವ ಸಂತಸವನ್ನುಂಟು ಮಾಡಿದೆ. ಅವನು ಬುಧವಾರ ತಡರಾತ್ರಿ ಆಗಮಿಸಿದ. ಇದು ನಮಗೆ ಆತಂಕದ ಕಾಯುವಿಕೆಯಾಗಿತ್ತು ಮತ್ತು ಇದು ಅತ್ಯಂತ ಕಠಿಣ ವಾಗಿತ್ತು. ಹೇಗೋ ಮಗ ಸುರಕ್ಷಿತವಾಗಿ ಮರಳಿದ್ದಾನೆ ಎಂದು ಪಿಟಿಐಗೆ ಅನ್ವೇಶ್​ ಪೋಷಕರು ತಿಳಿಸಿದ್ದಾರೆ.

ಅನ್ವೇಶ್ ಭಾವಿಪತ್ನಿ ವಿಕ್ಟೋರಿಯಾ ಮೊದಲು ಚೆಫ್​ ಆಗಿದ್ದರು, ಆದರೆ ಕೋವಿಡ್ 19 ಸಾಂಕ್ರಾಮಿಕದ ನಂತರ ಉದ್ಯೋಗ ಕಳೆದುಕೊಂಡು ಈ-ಕಾಮರ್ಸ್​ ಕಂಪನಿಯಲ್ಲಿ ಲಾಜಿಸ್ಟಿಕ್ಸ್ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದ್ದರು.

ಉಕ್ರೇನ್​ನಲ್ಲಿ ಯುದ್ದ ಆರಂಭವಾಗುತ್ತಿದ್ದಂತೆ ಅವರ ಪೋಷಕರು ಆಕೆಯನ್ನು ಉಕ್ರೇನ್​ನಲ್ಲಿಯೇ ಉಳಿಯಲು ತಿಳಿಸಿದ್ದರಾದರೂ, ವಿಕ್ಟೋರಿಯಾ ಮಾತ್ರ ತಮ್ಮ ಬಾಳ ಸಂಗಾತಿಯ ಜೊತೆಗೆ ಇರಲು ಬಯಸಿ, ಯುದ್ದದ ಹೊಡೆತಕ್ಕೆ ಸಿಲುಕಿರುವ ದೇಶದಿಂದ ಹೊರಬರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಅನ್ವೇಶ್​ 2012ರಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೆಲವು ಟೂರ್ನಮೆಂಟ್​ಗಳಲ್ಲಿ ಭಾಗವಹಿಸಲು ಉಕ್ರೇನ್​ಗೆ ತೆರಳಿದ್ದರು. ಅವರು ಮಾರ್ಚ್​ ನಲ್ಲಿ ಭಾರತಕ್ಕೆ ಮರಳು ಯೋಜಿಸಿಕೊಂಡಿದ್ದರು. ಆದರೆ ರಷ್ಯಾ ಫೆಬ್ರವರಿ 24ರಂದೇ ಸೈನಿಕ ಕಾರ್ಯಾಚರಣೆ ನಡೆಸಿದ್ದರಿಂದ ಉಕ್ರೇನ್​ನಿಂದ ವಿಮಾನಯಾನ ರದ್ದುಗೊಂಡು, ಅಲ್ಲೆ ಸಿಲುಕುವಂತಾಗಿತ್ತು.

ಇದನ್ನೂ ಓದಿ:ಐಪಿಎಲ್ ಅನ್​ಸೋಲ್ಡ್​ ಪೂಜಾರಾಗೆ ಡಬಲ್ ಧಮಾಕ: ಇಂಗ್ಲೆಂಡ್ ದೇಶಿ ಟೂರ್ನಿಗಳಲ್ಲಿ ಆಡುವ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.