ETV Bharat / sports

450 ಆಕ್ಸಿಜನ್ ಕಾನ್ಸೆನ್ಟ್ರೇಟರ್ಸ್​ ದೇಣಿಗೆ ನೀಡಿದ ಚೆನ್ನೈ ಸೂಪರ್ ಕಿಂಗ್ಸ್​ - ತಮಿಳು ನಾಡು ಕ್ರಿಕೆಟ್

ತಮಿಳು ನಾಡು ಕ್ರಿಕೆಟ್​ ಅಸೋಸಿಯೇಷನ್ ಅಧ್ಯಕ್ಷೆ ರೂಪ ಗುರನಾಥ್ ಸಮ್ಮುಖದಲ್ಲಿ ಸಿಎಸ್​ಕೆ ಡೈರೆಕ್ಟರ್ ಆರ್ ಶ್ರೀನಿವಾಸನ್​ ಆಕ್ಸಿಜನ್​ ಕಾನ್ಸೆನ್​​ ಟ್ರೇಟರ್ ಅನ್ನು ದೇಣಿಗೆಯಾಗಿ ನೀಡಿದರು.

ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್
author img

By

Published : May 8, 2021, 9:35 PM IST

Updated : May 8, 2021, 10:06 PM IST

ಚೆನ್ನೈ(ತಮಿಳುನಾಡು): 3 ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ ಶನಿವಾರ 450 ಆಕ್ಸಿನ್​ ಕಾನ್ಸೆಂಟ್ರೇಟರ್ಸ್​ಗಳನ್ನು ತಮಿಳುನಾಡು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ.

ಭಾರತದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕರ್ನಾಟಕ , ಮಹಾರಾಷ್ಟ್ರ , ನವದೆಹಲಿ, ಆಂದ್ರ ಪ್ರದೇಶಗಳಲ್ಲಿ ಕೊರೊನಾ ಆಕ್ರಮಣ ತೀವ್ರವಾಗಿದೆ. ಇನ್ನು ತಮಿಳುನಾಡಿನಲ್ಲೂ ಸಾಂಕ್ರಾಮಿಕ ಮಿತಿ ಮೀರುತ್ತಿದ್ದು, ಲಾಕ್​ಡೌನ್ ಮಾಡುವ ಆಲೋಚನೆಯಲ್ಲಿ ಸರ್ಕಾರವಿದೆ.

ತಮಿಳುನಾಡು ಸಿಎಂಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ದೇಣಿಗೆ ನೀಡಿದ ಸಿಎಸ್​ಕೆ

ಇದೇ ಸಂದರ್ಭದಲ್ಲಿ ಐಪಿಎಲ್​ನ ಅಂತ್ಯಂತ ಯಶಸ್ವಿ ಫ್ರಾಂಚೈಸಿಯಾದ ಚೆನ್ನೈ ಸೂಪರ್ ಕಿಂಗ್ಸ್ ಸರ್ಕಾರಕ್ಕೆ 450 ಆಕ್ಸಿಜನ್ ಕಾನ್ಸೆಂಟ್ರೇಟರ್​ಗಳನ್ನು ದೇಣಿಗೆ ನೀಡಲು ನಿರ್ಧರಿಸಿದ್ದು, ಇಂದು ನೂತನ ಸಿಎಂ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಸಾಂಕೇತಿಕವಾಗಿ ಒಂದು ಆಕ್ಸಿಜನ್​ ಕಾನ್ಸೆಂಟ್ರೇಟರ್​ಅನ್ನು ನೀಡಿದೆ.

ತಮಿಳು ನಾಡು ಕ್ರಿಕೆಟ್​ ಅಸೋಸಿಯೇಷನ್ ಅಧ್ಯಕ್ಷೆ ರೂಪ ಗುರುನಾಥ್ ಸಮ್ಮುಖದಲ್ಲಿ ಸಿಎಸ್​ಕೆ ಡೈರೆಕ್ಟರ್ ಆರ್ ಶ್ರೀನಿವಾಸನ್​ ಆಕ್ಸಿಜನ್​ ಕಾನ್ಸೆಂಟ್ರೇಟರ್ ಅನ್ನು ದೇಣಿಗೆಯಾಗಿ ನೀಡಿದರು.

ಇದನ್ನು ಓದಿ:ಆಕ್ಸಿಜನ್ ಸಿಲಿಂಡರ್​ ,ಕೋವಿಡ್​ ರಿಲೀಫ್ ಕಿಟ್​ ಖರೀದಿಗಾಗಿ ದೇಣಿಗೆ ನೀಡಿದ ರಿಷಭ್ ಪಂತ್

Last Updated : May 8, 2021, 10:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.