ದುಬೈ: ಟೂರ್ನಮೆಂಟ್ನಲ್ಲಿ 8ನೇ ತಂಡವಾಗಿ ಮುಗಿಸುವುದು ಫ್ರಾಂಚೈಸಿಗೆ ತುಂಬಾ ಕಠಿಣವಾಗಲಿದೆ. ಆದರೆ, ಈ ಬಗ್ಗೆ ಅತಿಯಾಗಿ ಪ್ರತಿಕ್ರಿಯಿಸಲು ಮತ್ತು ಸರಿದೂಗಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ ಎಂದು ಸನ್ರೈಸರ್ಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.
ಮೊದಲಾರ್ಧದಲ್ಲಿ ತಂಡ ಉತ್ತಮ ಪ್ರದರ್ಶನ ತೋರದಿದ್ದ ಕಾರಣ 2014ರಿಂದ(2018ರ ಆವೃತ್ತಿ ಬಿಟ್ಟು) ನಾಯಕನಾಗಿದ್ದ ಡೇವಿಡ್ ವಾರ್ನರ್ ಅವರನ್ನು ನಾಯಕತ್ವವನ್ನು ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ ನೀಡಲಾಗಿತ್ತು. ಆದರೂ ಸನ್ರೈಸರ್ಸ್ ಹಣೆಬರಹ ಮಾತ್ರ ಬದಲಾಗಲಿಲ್ಲ. ವಿಲಿಯಮ್ಸನ್ ನಾಯಕತ್ವದಲ್ಲೂ 6 ಪಂದ್ಯಗಳಲ್ಲಿ ಎಸ್ಆರ್ಹೆಚ್ ಕೇವಲ 1 ಗೆಲುವು ಪಡೆದಿದೆ.
"ಈ ಆವೃತ್ತಿ ನಮಗೆ ಸಾಕಷ್ಟು ಸವಾಲಿನಿಂದ ಕೂಡಿತ್ತು. ಇಲ್ಲಿನ ವೈವಿಧ್ಯಮಯ ಪರಿಸ್ಥಿತಿಗಳಿಗೆ ನಾವು ಹೊಂದಿಕೊಳ್ಳಲು ವಿಫಲರಾದೆವು. ನಾವು ವೈಫಲ್ಯ ಕಂಡಿದ್ದೇವೆ, ಇದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಕ್ಕೆ ಮತ್ತು ಅತಿಯಾಗಿ ಸರಿಪಡಿಸಿಕೊಳ್ಳುವುದಕ್ಕೆ ಮುಂದಾಗುವುದಿಲ್ಲ. ಒಟ್ಟಿನಲ್ಲಿ ಈ ಆವೃತ್ತಿ ನಮಗೆ ತುಂಬಾ ಸವಾಲಿನದ್ದಾಗಿತ್ತು ಎನ್ನುವುದು ನಿಜ" ಎಂದು ಕೆಕೆಆರ್ ವಿರುದ್ಧ ಸೋಲು ಕಂಡ ಬಳಿಕ ವಿಲಿಯಮ್ಸನ್ ಹೇಳಿದ್ದಾರೆ.
ಭಾನುವಾರ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ ಕೇವಲ 115 ರನ್ಗಳಿಸಿತ್ತು. ಈ ಮೊತ್ತವನ್ನು ಕೆಕೆಆರ್ 19.4 ಓವರ್ಗಳಲ್ಲಿ ಗುರಿ ತಲುಪಿತು.
ಇದನ್ನು ಓದಿ:ಶೀಘ್ರದಲ್ಲಿ ತಂಡಕ್ಕಾಗಿ ರನ್ ಗಳಿಸುತ್ತೇನೆಂಬ ವಿಶ್ವಾಸವಿದೆ: ಕೆಕೆಆರ್ ನಾಯಕ ಇಯಾನ್ ಮಾರ್ಗನ್