ETV Bharat / sports

ರಾಹುಲ್​+ ಸಚಿನ್​=ರಾಚಿನ್​​​​.. ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ವೇಗದ ಶತಕ ಸಿಡಿಸಿದ ನ್ಯೂಜಿಲೆಂಡ್ ಆಟಗಾರ... ಯಾರು ಈ ಕನ್ನಡಿಗ?

ನ್ಯೂಜಿಲೆಂಡ್‌ನ ಯುವ ಆಲ್‌ರೌಂಡರ್ ರಾಚಿನ್ ರವೀಂದ್ರ ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023ರ ಮೊದಲ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ವಿಶ್ವ ಕ್ರಿಕೆಟ್‌ನ ಅತಿದೊಡ್ಡ ವೇದಿಕೆಯಲ್ಲಿ ರವೀಂದ್ರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. 123 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇಂಗ್ಲೆಂಡ್ ವಿರುದ್ಧ 9 ವಿಕೆಟ್‌ಗಳಿಂದ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

author img

By ETV Bharat Karnataka Team

Published : Oct 6, 2023, 10:55 AM IST

Updated : Oct 6, 2023, 11:03 AM IST

Etv Bharat
Etv Bharat

ಅಹಮದಾಬಾದ್ (ಗುಜರಾತ್): ನ್ಯೂಜಿಲೆಂಡ್ ಆಲ್ ರೌಂಡರ್ ರಾಚಿನ್ ರವೀಂದ್ರ ಐಸಿಸಿ ವಿಶ್ವಕಪ್ 2023 ರ ಆರಂಭಿಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ರವೀಂದ್ರ ವಿಶ್ವಕಪ್ 2023 ರ ಮೊದಲ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಇದು ಅವರ ವಿಶ್ವಕಪ್ ವೃತ್ತಿಜೀವನದ ಮೊದಲ ಪಂದ್ಯವಾಗಿದೆ. ರಾಚಿನ್ ಅವರ ಒಡಿಐ ವೃತ್ತಿಜೀವನದ ಮೊದಲ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ವಿಶ್ವಕಪ್ 2023 ರ ಮೊದಲ ಪಂದ್ಯದಲ್ಲಿ ಅಜೇಯರಾಗಿ 123 ರನ್‌ಗಳ ಗಳಿಸಿ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಡೆವೊನ್ ಕಾನ್ವೆ ಅವರೊಂದಿಗೆ ನ್ಯೂಜಿಲೆಂಡ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ ತಂದು ಕೊಟ್ಟಿದ್ದಾರೆ.

ರಾಚಿನ್ ರವೀಂದ್ರಗೆ ಆ ಹೆಸರು ಬಂದಿದ್ದು ಹೇಗೆ?: ರಾಚಿನ್ ರವೀಂದ್ರ ಎಂದು ಹೆಸರಿಡುವುದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ವಾಸ್ತವವಾಗಿ, ಅವರ ತಂದೆ ಅವರು, ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ.. ಈ ಕಾರಣದಿಂದಲೇ ಇಬ್ಬರ ಗುಣಗಳನ್ನು ರವೀಂದ್ರ ಹೊಂದಿರಬೇಕು ಎಂದು ಬಯಸಿದ್ದರು. ಇದರಿಂದ ಅವರು ಆತನಿಗೆ ರಾಚಿನ್ ಎಂದು ಹೆಸರು ಇಟ್ಟಿದ್ದಾರೆ. ರಾಚಿನ್ ಭಾರತೀಯ ಮೂಲದ ಕಿವೀಸ್​ನ ಆಟಗಾರ. ಅದರಲ್ಲೂ ರಾಚಿನ್​ ರವೀಂದ್ರ ಅವರ ತಂದೆ ಬೆಂಗಳೂರಿನವರು.

ಎಡಗೈ ಆಟಗಾರರಾಗಿರುವ ಇವರು ವೆಲ್ಲಿಂಗ್ಟನ್‌ನಲ್ಲಿ ಹುಟ್ಟಿ ಬೆಳೆದ್ದಾರೆ. ಅವರ ಪೋಷಕರು ಕರ್ನಾಟಕದ ಬೆಂಗಳೂರಿನ ನಿವಾಸಿಗಳು ಮತ್ತು ಅವರು ಸಾಫ್ಟ್‌ವೇರ್ ಎಂಜಿನಿಯರ್‌ ಆಗಿದ್ದಾರೆ. ರಾಚಿನ್ ಅವರ ಪೋಷಕರು ನ್ಯೂಜಿಲೆಂಡ್‌ಗೆ ಸ್ಥಳಾಂತರಗೊಂಡರು. ರಾಚಿನ್ ಅವರ ಪೋಷಕರು ನ್ಯೂಜಿಲೆಂಡ್‌ಗೆ ತೆರಳುವ ಮೊದಲು ಅವರ ತವರೂರು ಬೆಂಗಳೂರಿನಲ್ಲಿ ಕ್ಲಬ್ ಮಟ್ಟದ ಕ್ರಿಕೆಟ್ ಕೂಡಾ ಆಡಿದ್ದರು.

13 ಒಡಿಐ ಪಂದ್ಯಗಳನ್ನು ಆಡಿರುವ ರಾಚಿನ್​: ರಾಚಿನ್ ನ್ಯೂಜಿಲೆಂಡ್‌ನ ಯುವ ಆಟಗಾರನಾಗಿ ಹೊರ ಹೊಮ್ಮುತ್ತಿದ್ದಾರೆ. ಈ ಗುಂಗುರು ಕೂದಲಿನ ಆಟಗಾರ ನ್ಯೂಜಿಲೆಂಡ್ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ 23 ವರ್ಷದ ಆಲ್‌ರೌಂಡರ್ ಕೇವಲ 2 ವರ್ಷಗಳ ಹಿಂದೆ ನ್ಯೂಜಿಲೆಂಡ್‌ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದರು. ಅವರು ಇಲ್ಲಿಯವರೆಗೆ 13 ಒಡಿಐ ಪಂದ್ಯಗಳನ್ನು ಆಡಿದ್ದಾರೆ. ಅವರು ಕಾನ್ಪುರದಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ವಿಶ್ವಕಪ್‌ನಲ್ಲಿ ವೇಗವಾಗಿ ಶತಕ ಸಿಡಿದ ನ್ಯೂಜಿಲೆಂಡ್ ಆಟಗಾರ: ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ರಾಚಿನ್ ಅವರು ಕಾನ್ವೆಯೊಂದಿಗೆ 273 ರನ್‌ಗಳ ಅಭೂತಪೂರ್ವ ಜೊತೆಯಾಟವಾಡಿದರು. ರಾಚಿನ್ 82 ಎಸೆತಗಳಲ್ಲಿ ಶತಕ ಗಳಿಸಿದರು. ಅವರು 96 ಎಸೆತಗಳಲ್ಲಿ 11 ಅತ್ಯುತ್ತಮ ಬೌಂಡರಿ ಮತ್ತು 5 ಅತ್ಯುತ್ತಮ ಸಿಕ್ಸರ್‌ಗಳ ಸಹಾಯದಿಂದ 123 ರನ್ ಕಲೆಹಾಕಿದರು. ಈ ಇನ್ನಿಂಗ್ಸ್‌ನಲ್ಲಿ ಅವರ ಅತ್ಯುತ್ತಮ ಸ್ಟ್ರೈಕ್ ರೇಟ್ 128.1 ಆಗಿತ್ತು. ನ್ಯೂಜಿಲೆಂಡ್ ಪರ ಆಡುವಾಗ ವಿಶ್ವಕಪ್ ಇತಿಹಾಸದಲ್ಲಿ ಅತಿ ವೇಗದ ಶತಕವನ್ನೂ ಗಳಿಸಿದ್ದಾರೆ. 82 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು. ವಿಶ್ವಕಪ್‌ನಲ್ಲಿ ವೇಗವಾಗಿ ಶತಕ ಗಳಿಸಿದ ನ್ಯೂಜಿಲೆಂಡ್ ಆಟಗಾರ ರಾಚಿನ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Asian Games: ಬಾಂಗ್ಲಾ ಬಗ್ಗುಬಡಿದು ಫೈನಲ್​ಗೆ ಟೀಂ ಇಂಡಿಯಾ ಲಗ್ಗೆ.. ಭಾರತಕ್ಕೆ ಮತ್ತೊಂದು ಪದಕ ಖಚಿತ

Last Updated : Oct 6, 2023, 11:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.