ಕೋಲ್ಕತ್ತಾ: ಯುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ತಮ್ಮಲ್ಲಿನ ಕೌಶಲ್ಯದೊಂದಿಗೆ ಬೌಲಿಂಗ್ ಮಾಡುವುದನ್ನು ನೋಡಲು ಸಂತಸವಾಗಿದೆ. ಇದನ್ನೇ ಮುಂದುವರೆಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ ಎಂದು ಭಾರತ ಟಿ-20 ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದರು.
14ನೇ ಐಪಿಎಲ್ನ ಎರಡನೇ ಹಂತದಲ್ಲಿ ಗಮನಾರ್ಹ ಪ್ರದರ್ಶನದ ಮೂಲಕ ವೆಂಕಟೇಶ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದರು. ಕಿವೀಸ್ ವಿರುದ್ಧದ 3 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿದರು. ಕೋಲ್ಕತ್ತಾದಲ್ಲಿ ನಡೆದ 3ನೇ ಪಂದ್ಯದಲ್ಲೂ 73 ರನ್ಗಳಿಂದ ಗೆದ್ದ ಭಾರತ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಸರಣಿಯಲ್ಲಿನ ಧನಾತ್ಮಕ ಅಂಶಗಳ ಬಗ್ಗೆ ಮಾತನಾಡುತ್ತ, ವಿಶ್ವದ ಹಲವು ತಂಡಗಳು ನಂ. 8 ಮತ್ತು ನಂ. 9ವರೆಗೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿವೆ.
ಹರ್ಷಲ್, ಹರಿಯಾಣ ಪರ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ, ದೀಪಕ್ ಚಹರ್ ಕೂಡ ಅದಾಗಲೇ ಶ್ರೀಲಂಕಾದಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯ ತೋರ್ಪಡಿಸಿದ್ದಾರೆ ಎಂದು ಶ್ಲಾಘಿಸಿದರು.
-
That's that from the Eden Gardens as #TeamIndia win by 73 runs and clinch the series 3-0.
— BCCI (@BCCI) November 21, 2021 " class="align-text-top noRightClick twitterSection" data="
Scorecard - https://t.co/MTGHRx2llF #INDvNZ @Paytm pic.twitter.com/TwN622SPAz
">That's that from the Eden Gardens as #TeamIndia win by 73 runs and clinch the series 3-0.
— BCCI (@BCCI) November 21, 2021
Scorecard - https://t.co/MTGHRx2llF #INDvNZ @Paytm pic.twitter.com/TwN622SPAzThat's that from the Eden Gardens as #TeamIndia win by 73 runs and clinch the series 3-0.
— BCCI (@BCCI) November 21, 2021
Scorecard - https://t.co/MTGHRx2llF #INDvNZ @Paytm pic.twitter.com/TwN622SPAz
ನಿನ್ನೆಯ ಪಂದ್ಯದಲ್ಲಿ ಹರ್ಷಲ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 11 ಎಸೆತಗಳಲ್ಲಿ 18 ಹಾಗೂ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಚಹರ್ 9 ಎಸೆತಗಳಲ್ಲಿ 21 ರನ್ ಚಚ್ಚಿದ್ದರು. ಇವರ ಅಬ್ಬರದಿಂದ ಕೊನೆಯ ಐದು ಓವರ್‌ಗಳಲ್ಲಿ ತಂಡವು 50 ರನ್ ಬಾರಿಸಿ 184 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ಅಲ್ಲದೆ, ರವಿಚಂದ್ರನ್ ಅಶ್ವಿನ್ ಅದ್ಭುತ ಬೌಲಿಂಗ್, ಸರಣಿ ಉದ್ದಕ್ಕೂ ಅಕ್ಷರ್ ಪಟೇಲ್ ಸ್ಥಿರ ಪ್ರದರ್ಶನ ಹಾಗೂ ಯುಜುವೇಂದ್ರ ಚಹಲ್ ಕಮ್ಬ್ಯಾಕ್ ಕೂಡ ನಮಗೆ ಪ್ರಮುಖವಾಗಿದೆ.
ಯಾವಾಗಲೂ ಸುಧಾರಣೆ ಕಂಡುಕೊಳ್ಳುವಂತ ಗಮನ ಹರಿಸುತ್ತೇವೆ. ಇಂದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕಕ್ಕೂ ಹೆಚ್ಚಿನ ಅವಕಾಶ ಸಿಕ್ಕಿತ್ತು. ನಮಗೆ ಸಾಮರ್ಥ್ಯ ಇದ್ದರೆ, ಅದಕ್ಕೆ ತಕ್ಕಂತೆ ಆಡಲು ಪ್ರಯತ್ನಿಸಬೇಕು. ಶಾರ್ಟ್ ಪಿಚ್ ಎಸೆತಗಳನ್ನು ದಂಡಿಸುವುದು ನನ್ನ ಸಾಮರ್ಥ್ಯಗಳಲ್ಲೊಂದಾಗಿದೆ. ನಾನು ಅಂತಹ ಎಸೆತಗಳಲ್ಲಿನ ಹೆಚ್ಚಿನ ರನ್ ಗಳಿಸಲು ಸದಾ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಿವೀಸ್ ವಿರುದ್ಧದ ಈ ಕ್ಲೀನ್ ಸ್ವೀಪ್ನೊಂದಿಗೆ ಭಾರತಕ್ಕೆ ದ್ವಿಪಕ್ಷೀಯ ಸರಣಿಯಲ್ಲಿ ನಿನ್ನೆಯದು ಸತತ 8ನೇ ಗೆಲುವಾಗಿದೆ. ಅಲ್ಲದೆ ಟೀಂ ಇಂಡಿಯಾವು 6ನೇ ಬಾರಿಗೆ ಟಿ-20 ಸರಣಿ ಕ್ಲೀನ್ ಸ್ವೀಪ್ ಮಾಡಿದೆ.
ಸರಣಿಯಲ್ಲಿ 53.00 ಸರಾಸರಿ ಹಾಗೂ 154.36 ಸ್ಟ್ರೈಕ್ ರೇಟ್‌ನೊಂದಿಗೆ 159 ರನ್ ಬಾರಿಸಿದ ನಾಯಕ ರೋಹಿತ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ನ್ಯೂಜಿಲ್ಯಾಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ನ.25ರಂದು ಕಾನ್ಪುರದಲ್ಲಿ ಆರಂಭವಾಗಲಿದೆ.
ಇದನ್ನೂ ಓದಿ: NZ VS IND T-2o: ರೋಹಿತ್ ಶರ್ಮಾ, ಅಕ್ಸರ್ ಪಟೇಲ್ ಕಮಾಲ್.. ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್