ETV Bharat / sports

ಬಟ್ಲರ್​ ಸಿಡಿಲಬ್ಬರದ ಶತಕ: ಶ್ರೀಲಂಕಾಗೆ 164 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ಇಂಗ್ಲೆಂಡ್

author img

By

Published : Nov 1, 2021, 9:46 PM IST

ಜೋಸ್​ ಬಟ್ಲರ್​ 67 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು 6 ಸಿಕ್ಸರ್​ಗಳ ನೆರವಿನಿಂದ ಅಜೇಯ 101 ರನ್​ಗಳಿಸಿ ಇಂಗ್ಲೆಂಡ್​ ತಂಡ 163 ರನ್​ಗಳ ಸವಾಲಿನ ಮೊತ್ತ ದಾಖಲಿಸಲು ನೆರವಾದರು.

T20 World Cup 2021
ಇಂಗ್ಲೆಂಡ್ vs ಶ್ರೀಲಂಕಾ

ಶಾರ್ಜಾ: ಆರಂಭಿಕ ಬ್ಯಾಟರ್​ ಜೋಸ್​ ಬಟ್ಲರ್​ ಅವರ ಸಿಡಿಲಬ್ಬರದ ಶತಕದ ನೆರವಿನಿಂದ ಇಂಗ್ಲೆಂಡ್​ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 163 ರನ್​ಗಳಿಸಿದ್ದು, ಶ್ರೀಲಂಕಾ ತಂಡಕ್ಕೆ ಗೆಲ್ಲಲು 163ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್​ ಕೇವಲ 35 ರನ್​ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಯಿತು. ಆದರೆ ಬಟ್ಲರ್​ 67 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು 6 ಸಿಕ್ಸರ್​ಗಳ ನೆರವಿನಿಂದ ಅಜೇಯ 101 ರನ್​ಗಳಿಸಿ 163 ರನ್​ಗಳ ಸವಾಲಿನ ಮೊತ್ತ ದಾಖಲಿಸಲು ನೆರವಾದರು.

ಇವರಿಗೆ ಸಾಥ್ ನೀಡಿದ ನಾಯಕ ನಾಯಕ ಮಾರ್ಗನ್​ 36 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 40 ರನ್​ಗಳಿಸಿದರು. ಜೇಸನ್ ರಾಯ್ (9), ಡೇವಿಡ್ ಮಲನ್ (6) ಹಾಗೂ ಬೈರ್​ಸ್ಟೋವ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಶ್ರೀಲಂಕಾ ಪರ ವನಿಂಡು ಹಸರಂಗ 21 ರನ್​ ನೀಡಿ 3 ವಿಕೆಟ್​ ಪಡೆದರು. ತೀಕ್ಷಾನ 4 ಓವರ್​ಗಳಲ್ಲಿ ಕೇವಲ 13 ರನ್​ ನೀಡಿ ಆಂಗ್ಲರ ರನ್​ಗತಿಗೆ ಕಡಿವಾಣ ಹಾಕಿದರು. ಆದರೆ ವೇಗಿಗಳಾದ ಚಮೀರ (43ಕ್ಕೆ1), ಲಹಿರು ಕುಮಾರ (44) ದುಬಾರಿಯಾದರು.

ಇದನ್ನೂ ಓದಿ: ಕೊಹ್ಲಿ ಕುಟುಂಬಕ್ಕೆ ಬೆದರಿಕೆ ಹಾಕಿರುವ ಸುದ್ದಿ ಕೇಳಿ ತುಂಬಾ ನೋವುಂಟಾಗಿದೆ: ಇಂಜಮಾಮ್-ಉಲ್‌-ಹಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.