ETV Bharat / sports

Bumrah vs Boult : ಉತ್ತಮ ಬೌಲರ್​ ಯಾರೆಂಬ ಪ್ರಶ್ನೆಗೆ ವಿಭಿನ್ನ ಉತ್ತರ ಕೊಟ್ಟ ವಾನ್ - ಐಸಿಸಿ ಟೆಸ್ಟ್​ ಚಾಂಪಿಯನ್ ಶಿಪ್

ಕೊಹ್ಲಿ ಮತ್ತು ಕೇನ್​ ವಿಲಿಯಮ್ಸನ್​ರಲ್ಲಿ ಉತ್ತಮ ಬ್ಯಾಟ್ಸ್​ಮನ್ ಕಿವೀಸ್ ಬ್ಯಾಟ್ಸ್​ಮನ್​ ಎಂದು ಹೇಳಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ವಾನ್​ ಬುಮ್ರಾ ವಿಚಾರದಲ್ಲಿ ಜಾಣ್ಮೆಯ ಉತ್ತರ ತೋರಿ ಟೀಕೆಗೆ ಅವಕಾಶ ನೀಡದೆ ಎಚ್ಚರಿಕೆ ವಹಿಸಿದ್ದಾರೆ..

Bumrah vs Boult
ಜಸ್ಪ್ರೀತ್ ಬುಮ್ರಾ vs ಟ್ರೆಂಟ್ ಬೌಲ್ಟ್​
author img

By

Published : May 30, 2021, 9:01 PM IST

ಹೈದರಾಬಾದ್(ಡೆಸ್ಕ್​): ಕ್ರಿಕೆಟ್​ ಜಗತ್ತಿನಲ್ಲಿ ಆಟಗಾರರ ನಡುವೆ ಹೋಲಿಕೆ ಮಾಡುವುದು ಸರ್ವೆ ಸಾಮಾನ್ಯ. ಕೆಲವು ಮಾಜಿ-ಹಾಲಿ ಕ್ರಿಕೆಟಿಗರ ಮಧ್ಯೆ, ಮತ್ತೆ ಕೆಲವರು ಹಾಲಿ ಕ್ರಿಕೆಟಗರ ಮಧ್ಯೆ ಹೋಲಿಕೆ ಮಾಡುತ್ತಲೇ ಇರುತ್ತಾರೆ. ಅದು ಭಾರತೀಯ ಕ್ರಿಕೆಟಿಗರ ವಿಚಾರದಲ್ಲಿ ಹೆಚ್ಚು ನಡೆಯುತ್ತಿದೆ. ಕೊಹ್ಲಿ ಹಾಗೂ ಬುಮ್ರಾ ವಿಚಾರದಲ್ಲಿ ಈ ಚರ್ಚೆ ಹೆಚ್ಚಾಗಿದೆ.

ಕೊಹ್ಲಿ ಮತ್ತು ಕೇನ್​ ವಿಲಿಯಮ್ಸನ್​ರಲ್ಲಿ ಉತ್ತಮ ಬ್ಯಾಟ್ಸ್​ಮನ್ ಕಿವೀಸ್ ಬ್ಯಾಟ್ಸ್​ಮನ್​ ಎಂದು ಹೇಳಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ವಾನ್,​ ಬುಮ್ರಾ ವಿಚಾರದಲ್ಲಿ ಜಾಣ್ಮೆಯ ಉತ್ತರ ತೋರಿ ಟೀಕೆಗೆ ಅವಕಾಶ ನೀಡದೆ ಎಚ್ಚರಿಕೆ ವಹಿಸಿದ್ದಾರೆ.

ಈ ಬಾರಿ ವಿಶ್ವದ ಟಾಪ್ ವೇಗಿಗಳಲ್ಲಿ ಒಬ್ಬರಾಗಿರುವ ಜಸ್ಪ್ರೀತ್ ಬುಮ್ರಾ ಮತ್ತು ಏಕದಿನ ಕ್ರಿಕೆಟ್​ನ ನಂಬರ್ 1 ಬೌಲರ್​ ಟ್ರೆಂಟ್​ ಬೌಲ್ಟ್​, ಇಬ್ಬರಲ್ಲಿ ಯಾರು ಉತ್ತಮ ವೇಗಿ ಎಂದು ಸ್ಪಾರ್ಟ್​ ಸ್ಪೋರ್ಟ್​ಗೆ ಉತ್ತರಿಸಿರುವ ವಾನ್ " ನನ್ನಿಂದ ಪ್ರಶ್ನೆಗೆ ಉತ್ತರಿಸಲು ಆಗುವುದಿಲ್ಲ" ಎಂದಿದ್ದಾರೆ.

" ಬುಮ್ರಾ ಅಥವಾ ಬೌಲ್ಟ್​, ನನ್ನಿಂದ ತೀರ್ಮಾನಿಸಲಾಗುವುದಿಲ್ಲ. ನನ್ನ ಜೀವನದಲ್ಲೇ ಇದೇ ಮೊದಲ ಬಾರಿಗೆ ತಟಸ್ಥವಾಗಿ ಕೂರಲು ಬಯಸುತ್ತೇನೆ. ಆದ್ರೆ ಹೆಚ್ಚು ಸಮಯದಿಂದ ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿರುವ ಕಾರಣಕ್ಕೆ ಮಾತ್ರ ಬೌಲ್ಟ್​ ಹೆಸರಿಸಬಹುದು. ಆದರೆ ಬುಮ್ರಾ ನಂಬಲಾಸಾಧ್ಯವಾದ ಮತ್ತ ಅಸಾಧಾರಣ ಬೌಲಿಂಗ್ ಕೌಶಲ್ಯ ಹೊಂದಿರುವ ಬೌಲರ್, ಅವರು ಒಂದೆರಡು ವರ್ಷಗಳ ಹಿಂದೆ ಇಂಗ್ಲೆಂಡ್​ನಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ನನ್ನ ಪ್ರಕಾರ ಇಬ್ಬರು ತುಂಬಾ ಸಮೀಪವಿದ್ದಾರೆ" ಎಂದು ಹೇಳಿದ್ದಾರೆ.

ಇದನ್ನು ಓದಿ:ಭಾರತ ವಿರುದ್ಧದ WTC ಫೈನಲ್ ನನಗೆ ವಿಶ್ವಕಪ್ ಫೈನಲ್​ ಇದ್ದಂತೆ : ನೀಲ್ ವ್ಯಾಗ್ನರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.