ETV Bharat / sports

ICC ಟೆಸ್ಟ್​​ ರ‍್ಯಾಂಕಿಂಗ್‌ : ಬೌಲಿಂಗ್​ನಲ್ಲಿ ಬುಮ್ರಾ ಅಮೋಘ ಸಾಧನೆ, 5ನೇ ಸ್ಥಾನದಲ್ಲಿ ರೋಹಿತ್​​ - ಜಸ್ಪ್ರೀತ್ ಬುಮ್ರಾ

ಆಲ್​ರೌಂಡರ್​ ವಿಭಾಗದಲ್ಲಿ ವೆಸ್ಟ್​ ಇಂಡೀಸ್​ನ ಹೋಲ್ಡರ್​​ 434 ಅಂಕಗಳೊಂದಿಗೆ ಮೊದಲ ಸ್ಥಾನ, 348 ಅಂಕ ಹೊಂದಿರುವ ಬೆನ್​ ಸ್ಟೋಕ್ಸ್​​​ 2ನೇ ಸ್ಥಾನ ಹಾಗೂ 338 ಅಂಕಗಳೊಂದಿಗೆ ಭಾರತದ ರವೀಂದ್ರ ಜಡೇಜಾ 3ನೇ ಸ್ಥಾನದಲ್ಲಿದ್ದಾರೆ..

Bumrah
Bumrah
author img

By

Published : Sep 8, 2021, 3:06 PM IST

ದುಬೈ : ಭಾರತ-ಇಂಗ್ಲೆಂಡ್​ ನಡುವಿನ 4ನೇ ಟೆಸ್ಟ್​​ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ನೂತನ ಟೆಸ್ಟ್​​​ ರ‍್ಯಾಂಕಿಂಗ್‌ ರಿಲೀಸ್​ ಮಾಡಿದೆ. ಓವಲ್​​ ಟೆಸ್ಟ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಏರಿಕೆ ಕಂಡು, 9ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

ನಾಲ್ಕನೇ ಟೆಸ್ಟ್​​​ ಪಂದ್ಯದಲ್ಲಿ 4 ವಿಕೆಟ್​ ಪಡೆದುಕೊಂಡು ಮಿಂಚಿರುವ ಬುಮ್ರಾ, ಎರಡನೇ ಇನ್ನಿಂಗ್ಸ್​​ನಲ್ಲಿ ಕ್ರಮವಾಗಿ ಒಲಿ ಪೋಪ್​ ಹಾಗೂ ಬೈರ್​​ಸ್ಟೋವ್​ ವಿಕೆಟ್​ ಕಿತ್ತು ತಂಡಕ್ಕೆ ಮೆಲುಗೈ ತಂದುಕೊಟ್ಟಿದ್ದರು.

ಬ್ಯಾಟಿಂಗ್​ ವಿಭಾಗದಲ್ಲಿ ಇಂಗ್ಲೆಂಡ್​ ಕ್ಯಾಪ್ಟನ್​​ ಜೋ ರೂಟ್​​ 903 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸನ್​​​​​ 901 ಅಂಕ 2ನೇ ಸ್ಥಾನ ಹಾಗೂ ಅಸ್ಟ್ರೇಲಿಯಾದ ಸ್ಮಿತ್​​ 891 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ರೋಹಿತ್​ ಶರ್ಮಾ 813 ಅಂಕಗಳೊಂದಿಗೆ 5ನೇ ಸ್ಥಾನ ಹಾಗೂ ವಿರಾಟ್​ ಕೊಹ್ಲಿ 783 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.

Rohit Sharm, Virat kohli
ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ

ಬೌಲಿಂಗ್​​​ ವಿಭಾಗದಲ್ಲಿ ನ್ಯೂಜಿಲ್ಯಾಂಡ್​ನ ಪ್ಯಾಟ್​ ಕಮ್ಮಿನ್ಸ್​​​ 908 ಅಂಕಗಳೊಂದಿಗೆ ಮೊದಲ ಸ್ಥಾನ, 831 ಅಂಕ ಹೊಂದಿರುವ ಆರ್​.ಅಶ್ವಿನ್​​​ 2ನೇ ಸ್ಥಾನದಲ್ಲಿದ್ದಾರೆ. 10ನೇ ಸ್ಥಾನದಲ್ಲಿದ್ದ ಬುಮ್ರಾ ಏರಿಕೆ ಕಂಡಿದ್ದು, 771 ಅಂಕಗಳೊಂದಿಗೆ 9ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

ಆಲ್​ರೌಂಡರ್​ ವಿಭಾಗದಲ್ಲಿ ವೆಸ್ಟ್​ ಇಂಡೀಸ್​ನ ಹೋಲ್ಡರ್​​ 434 ಅಂಕಗಳೊಂದಿಗೆ ಮೊದಲ ಸ್ಥಾನ, 348 ಅಂಕ ಹೊಂದಿರುವ ಬೆನ್​ ಸ್ಟೋಕ್ಸ್​​​ 2ನೇ ಸ್ಥಾನ ಹಾಗೂ 338 ಅಂಕಗಳೊಂದಿಗೆ ಭಾರತದ ರವೀಂದ್ರ ಜಡೇಜಾ 3ನೇ ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.