ETV Bharat / sports

ಭಾರತ - ಐರ್ಲೆಂಡ್​ ಪಂದ್ಯಕ್ಕೆ ಮಳೆರಾಯನ ಅಡ್ಡಿ.. ಡೆಕ್ವರ್ತ್​ ಲೂಯಿಸ್​ ಪ್ರಕಾರ ಭಾರತಕ್ಕೆ 2 ರನ್​ಗಳ ರೋಚಕ ಗೆಲುವು

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಎರಡನೇ ಹಂತದ ತಂಡದೊಂದಿಗೆ ಕಣಕ್ಕಿಳಿದಿದ್ದ ಭಾರತ ತಂಡ ಮೊದಲ ಟಿ20ಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

Bumrah led India beat Ireland in rain  curtailed T20I match  India lead series 1  ಭಾರತ ಐರ್ಲೆಂಡ್​ ಪಂದ್ಯಕ್ಕೆ ಮಳೆರಾಯನ ಅಡ್ಡಿ  ಭಾರತಕ್ಕೆ 2 ರನ್​ಗಳ ರೋಚಕ ಗೆಲುವು  ಭಾರತ ತಂಡ ಮೊದಲ ಟಿ20ಯಲ್ಲಿ ಭರ್ಜರಿ ಗೆಲುವು  ಐರ್ಲೆಂಡ್ ವಿರುದ್ಧದ ಟಿ20 ಸರಣಿ  ವಿಲೇಜ್​ ಮೈದಾನದಲ್ಲಿ ನಡೆದ ಸರಣಿಯ ಮೊದಲ ಟಿ20 ಪಂದ್ಯ  ಐರ್ಲೆಂಡ್​ ವಿರುದ್ಧ ಭಾರತ ತಂಡ 2 ರನ್​ಗಳ ರೋಚಕ ಜಯ
ಭಾರತ-ಐರ್ಲೆಂಡ್​ ಪಂದ್ಯಕ್ಕೆ ಮಳೆರಾಯನ ಅಡ್ಡಿ
author img

By

Published : Aug 19, 2023, 6:52 AM IST

ಡಬ್ಲಿನ್​, ಐರ್ಲೆಂಡ್​: ಇಲ್ಲಿನ ವಿಲೇಜ್​ ಮೈದಾನದಲ್ಲಿ ನಡೆದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಭಾರತ ತಂಡ 2 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಸರಣಿಯ ನಾಯಕರೂ ಆಗಿರುವ ಬುಮ್ರಾ ಸುಮಾರು 11 ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ಮರಳಿದ್ದು, ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಐರ್ಲೆಂಡ್​ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತ್ತು. ಐರ್ಲೆಂಡ್​ ಪರ ಬ್ಯಾರಿ ಮೆಕಾರ್ಥಿ ಅರ್ಧಶತಕ ಗಳಿಸಿ ಗರಿಷ್ಠ ಸ್ಕೋರರ್​ ಆದರು. ಭಾರತದ ಪರ ಬುಮ್ರಾ, ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ನೋಯಿ ತಲಾ 2 ವಿಕೆಟ್ ಪಡೆದು ಮಿಂಚಿದರು.

140 ರನ್‌ಗಳ ಗುರಿಯೊಂದಿಗೆ ಕಣ ಇಳಿದ ಟೀಂ ಇಂಡಿಯಾ 47/2 ಎಂಬ ಹಂತದಲ್ಲಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ಆಗ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದಡಿ ಎರಡು ರನ್​ಗಳ ಲೀಡ್​ ಪಡೆದಿತ್ತು. ಮಳೆ ಕಡಿಮೆಯಾಗುತ್ತಿದ್ದಂತೆ ಅಂಪೈರ್‌ಗಳು ಡ‌ಕ್ವರ್ತ್ ಲೂಯಿಸ್ ವಿಧಾನದಲ್ಲಿ ಭಾರತವನ್ನು ವಿಜಯಿ ಎಂದು ಘೋಷಿಸಿದರು.

ಐರ್ಲೆಂಡ್​ಗೆ ಆರಂಭಿಕ ಆಘಾತ: ಐರ್ಲೆಂಡ್ ತಂಡ ಮೊದಲಿನಿಂದಲೂ ಕಳಪೆ ಆರಂಭ ಪಡೆಯಿತು. ಐರ್ಲೆಂಡ್​ ತಂಡ 31 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತ್ತು. 11 ತಿಂಗಳ ನಂತರ ಕ್ರಿಕೆಟ್‌ಗೆ ಮರಳಿದ ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲೇ ಐರ್ಲೆಂಡ್​ನ ಎರಡು ವಿಕೆಟ್​ಗಳನ್ನು ಪಡೆದು ಮಿಂಚಿದರು.

ಐದನೇ ಓವರ್‌ನಲ್ಲಿ, ಪ್ರಸಿದ್ಧ ಕೃಷ್ಣ ಕೂಡ ಹ್ಯಾರಿ ಟೆಕ್ಟರ್ ವಿಕೆಟ್​ ಪಡೆದರು. ರವಿ ಬಿಷ್ಣೋಯ್ ನಾಯಕ ಪಾಲ್ ಸ್ಟಿರ್ಲಿಂಗ್ (11) ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಏಳನೇ ಓವರ್‌ನಲ್ಲಿ ಡಾಕ್ರೆಲ್ (1) ವಿಕೆಟ್​ ಪಡೆಯುವ ಮೂಲಕ ಪ್ರಸಿದ್ದ ಕೃಷ್ಣ ಐರ್ಲೆಂಡ್‌ಗೆ ಐದನೇ ಹೊಡೆತ ನೀಡಿದರು. ಇದಾದ ಬಳಿಕ ಮಾರ್ಕ್ 16 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಕ್ಯಾಂಪರ್ ಮತ್ತು ಬ್ಯಾರಿ ಏಳನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿದರು.

ಮಳೆಯಲ್ಲಿ ಭಾರತ ತಂಡ ಉತ್ತಮ ಪ್ರರ್ಶನ: ಯಶಸ್ವಿ ಜೈಸ್ವಾಲ್ 24 ರನ್ ಮತ್ತು ರುತುರಾಜ್ ಔಟಾಗದೇ 19 ರನ್​ ಕಲೆ ಹಾಕುವ ಮೂಲಕ ಭಾರತ ತಂಡ ಮೊದಲ ವಿಕೆಟ್‌ಗೆ 46 ರನ್ ಗಳಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ದೊರೆಯಿತು. ಆದರೆ, ಯಂಗ್ ಸತತ ಎಸೆತಗಳಲ್ಲಿ ಯಶಸ್ವಿ ಮತ್ತು ತಿಲಕ್ ವರ್ಮಾ (0 ರನ್​) ಅವರನ್ನು ಔಟ್ ಮಾಡಿ ಭಾರತಕ್ಕೆ ಪೆಟ್ಟು ನೀಡಿದರು.

ಧಾರಾಕಾರ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಆಗ ಭಾರತ ತಂಡ 6.5 ಓವರ್‌ಗಳಲ್ಲಿ 47/2 ಆಗಿತ್ತು. D/L ವಿಧಾನದಲ್ಲಿ ಭಾರತ 2 ರನ್‌ಗಳಿಂದ ಮುನ್ನಡೆಯಲ್ಲಿದ್ದ ಕಾರಣ ಅಂಪೈರ್‌ಗಳು ಭಾರತವನ್ನು ವಿಜೇತರೆಂದು ಘೋಷಿಸಿದರು. ಎರಡನೇ ಟಿ20 ಭಾನುವಾರ ನಡೆಯಲಿದೆ. ಪ್ರಸಮೂರ್ ಮತ್ತು ರಿಂಕು ಸಿಂಗ್ ಈ ಪಂದ್ಯದ ಮೂಲಕ ತಮ್ಮ ಚೊಚ್ಚಲ T20 ಪಂದ್ಯಕ್ಕೆ ಪದಾರ್ಪಣೆ ಮಾಡಿದರು.

ಓದಿ: ಭಾರತ-ಐರ್ಲೆಂಡ್‌ ಮೊದಲ ಟಿ-20 ಪಂದ್ಯಕ್ಕೆ ಮಳೆ ಅಡ್ಡಿ: ಭಾರತಕ್ಕೆ 139 ರನ್​ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.