ETV Bharat / sports

ಭಾರತೀಯ ಆಟಗಾರರು ತೆರಳಬೇಕಿದ್ದ ಬಸ್​​ನಲ್ಲಿ 2 ಬುಲೆಟ್​ ಶೆಲ್​ ಪತ್ತೆ!

author img

By

Published : Feb 27, 2022, 4:41 PM IST

ಪ್ರಸ್ತುತ ಸಿಕ್ಕಿರುವ ಮಾಹಿತಿ ಪ್ರಕಾರ ಚಂಡೀಗಢದ ಐಟಿ ಪಾರ್ಕ್‌ನಲ್ಲಿರುವ ಲಲಿತ್ ಹೋಟೆಲ್‌ನಲ್ಲಿ ಭಾರತ ಕ್ರಿಕೆಟ್ ತಂಡ ತಂಗಿದೆ. ಅಲ್ಲಿಂದ ತಂಡವು ಮೊಹಾಲಿಯ ಪಿಸಿಎ ಸ್ಟೇಡಿಯಂಗೆ ಬಸ್‌ನಲ್ಲಿ ಅಭ್ಯಾಸಕ್ಕೆ ಹೋಗಬೇಕಿತ್ತು. ಭದ್ರತಾ ಸಿಬ್ಬಂದಿ ಬಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದರು. ತನಿಖೆಯ ವೇಳೆ ಬಸ್‌ನ ಲಗೇಜ್ ಬಾಕ್ಸ್‌ನಲ್ಲಿ ಎರಡು ಗುಂಡಿನ ಶೆಲ್​ಗಳ ಪತ್ತೆಯಾಗಿದ್ದವು..

Bullet shells Found from bus of Indian cricket team mohali
ಭಾರತ ಆಟಗಾರರಿದ್ದ ಬಸ್​ನಲ್ಲಿ ಬುಲೆಟ್ ಶೆಲ್ ಪತ್ತೆ

ಚಂಡೀಗಢ : ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯಕ್ಕಾಗಿ ಎರಡೂ ತಂಡಗಳು ಹೋಟೆಲ್​ನಿಂದ ಮೊಹಾಲಿಯ ಪಿಸಿಎ ಸ್ಟೇಡಿಯಂಗೆ ಕರೆದೊಯ್ಯಬೇಕಿದ್ದ ಬಸ್​ನಲ್ಲಿ ಎರಡು ಬುಲೆಟ್​ ಶೆಲ್​ಗಳು ಪತ್ತೆಯಾಗಿದ್ದು, ಭದ್ರತಾ ಅಧಿಕಾರಿಗಳಲ್ಲಿ ಕೋಲಾಹಲ ಉಂಟಾಗಲು ಕಾರಣವಾಗಿದೆ.

ಮಾರ್ಚ್ 4ರಿಂದ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಟೆಸ್ಟ್​ ಪಂದ್ಯ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳ ಕೆಲವು ಸದಸ್ಯರು ಶನಿವಾರವೇ ಚಂಡೀಗಢ ತಲುಪಿದ್ದಾರೆ. ಎರಡೂ ತಂಡಗಳಿಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಆದರೂ ಟೀಂ ಇಂಡಿಯಾ ಆಟಗಾರರು ಮೊಹಾಲಿಗೆ ಅಭ್ಯಾಸಕ್ಕೆ ತೆರಳಬೇಕಿದ್ದ ಬಸ್‌ನಲ್ಲಿ ಎರಡು ಗುಂಡಿನ ಶೆಲ್​ಗಳು ಪತ್ತೆಯಾಗಿದ್ದು, ಹಲವು ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಪ್ರಸ್ತುತ ಸಿಕ್ಕಿರುವ ಮಾಹಿತಿ ಪ್ರಕಾರ ಚಂಡೀಗಢದ ಐಟಿ ಪಾರ್ಕ್‌ನಲ್ಲಿರುವ ಲಲಿತ್ ಹೋಟೆಲ್‌ನಲ್ಲಿ ಭಾರತ ಕ್ರಿಕೆಟ್ ತಂಡ ತಂಗಿದೆ. ಅಲ್ಲಿಂದ ತಂಡವು ಮೊಹಾಲಿಯ ಪಿಸಿಎ ಸ್ಟೇಡಿಯಂಗೆ ಬಸ್‌ನಲ್ಲಿ ಅಭ್ಯಾಸಕ್ಕೆ ಹೋಗಬೇಕಿತ್ತು. ಭದ್ರತಾ ಸಿಬ್ಬಂದಿ ಬಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದರು. ತನಿಖೆಯ ವೇಳೆ ಬಸ್‌ನ ಲಗೇಜ್ ಬಾಕ್ಸ್‌ನಲ್ಲಿ ಎರಡು ಗುಂಡಿನ ಶೆಲ್​ಗಳ ಪತ್ತೆಯಾಗಿದ್ದವು.

ವಶಪಡಿಸಿಕೊಂಡ ಎರಡೂ ಶೆಲ್‌ಗಳನ್ನು ಸಿಎಫ್‌ಎಸ್‌ಎಲ್ ತಂಡವು ವಶಪಡಿಸಿಕೊಂಡು ತನಿಖೆ ನಡೆಸುತ್ತಿದೆ. ಇನ್ನೂ ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಬಾಂಬ್ ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಸ್‌ನಲ್ಲಿ ಕಾರ್ಟ್ರಿಡ್ಜ್ ಶೆಲ್ ಪತ್ತೆಯಾದ ನಂತರ, ಭದ್ರತಾ ಸಿಬ್ಬಂದಿ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾರತೀಯ ಆಟಗಾರರನ್ನು ಕರೆದೊಯ್ಯಲು ಬಂದಿದ್ದ ತಾರಾ ಟ್ರಾವೆಲ್ಸ್​ನ ಬಸ್​ ಜಲಂಧರ್‌ನಿಂದ ಮದುವೆ ಸಮಾರಂಭವನ್ನು ಮುಗಿಸಿ ಬಂದಿತ್ತು ಎಂದು ಬಸ್ ಮಾಲೀಕರು ತಿಳಿಸಿದ್ದಾರೆ. ವಿವಾಹ ಸಂದರ್ಭದಲ್ಲಿ ಯಾರೋ ಗುಂಡನ್ನು ಸಿಡಿಸಿದ ನಂತರ ಈ ಖಾಲಿ ಶೆಲ್​ಗಳನ್ನು ಬಸ್​ನಲ್ಲಿ ಇಟ್ಟಿರಬಹುದು ಎನ್ನಲಾಗಿದೆ. ಸದ್ಯ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಆರ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶುಭಮನ್ ಗಿಲ್,ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ಜಯಂತ್ ಯಾದವ್, ಸೌರಭ್ ಕುಮಾರ್ ಮತ್ತು ಕೆಎಸ್ ಭರತ್ ಸೇರಿದಂತೆ ತಂಡದ ಸಂಪೂರ್ಣ ಸಿಬ್ಬಂದಿ ಹೋಟೆಲ್ ಲಲಿತ್‌ನಲ್ಲಿ ಉಳಿದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಜಮ್ಮು-ಕಾಶ್ಮೀರ್ ವಿರುದ್ಧ ಕರ್ನಾಟಕಕ್ಕೆ 117 ರನ್​ಗಳ ಭರ್ಜರಿ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.