ETV Bharat / sports

ಐಪಿಎಲ್​-ಟಿ20 ವಿಶ್ವಕಪ್​ ನಡುವೆ ವಿಶ್ರಾಂತಿ ಬೇಕಿತ್ತು: ಬಯೋಬಬಲ್ ಲೈಫ್ ತುಂಬಾ ಕಷ್ಟ ಎಂದ ಬುಮ್ರಾ - ಟಿ20 ವಿಶ್ವಕಪ್​ 2021

ವಾಸ್ತವವಾಗಿ ನಾವು ಜೀವಿಸುತ್ತಿರುವ ಬಯೋಬಬಲ್ ವ್ಯವಸ್ಥೆ ತುಂಬಾ ಕಠಿಣವಾದದ್ದು, ಕೋವಿಡ್ 19 ಸಾಂಕ್ರಾಮಿಕ ಮತ್ತು ಬಯೋಬಬಲ್​​ಗಳನ್ನ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೂ ಬಯೋಬಬಲ್ ಆಯಾಸ ಮತ್ತು ಮಾನಸಿಕ ಆಯಾಸವೂ ಇದ್ದೇ ಇರುತ್ತದೆ. ಪದೇಪದೆ ನೀವು ಅದೇ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದರೆ, ಮಾನಸಿಕವಾಗಿ ನಿಮ್ಮನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ..

Bumrah lends perspective to India's poor T20 WC campaign
ಜಸ್ಪ್ರೀತ್ ಬುಮ್ರಾ
author img

By

Published : Nov 1, 2021, 4:51 PM IST

ದುಬೈ : ಟಿ20 ವಿಶ್ವಕಪ್​ನಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ತೋರುವುದರಲ್ಲಿ ವಿಫಲರಾಗುತ್ತಿರುವುದಕ್ಕೆ ಬಯೋಬಬಲ್​ ಆಯಾಸವೇ ಕಾರಣ ಎಂದು ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ.

ಭಾನುವಾರ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್​ಗಳಿಂದ ಸೋಲುಂಡು ಇನ್ನೂ ಮೂರು ಪಂದ್ಯಗಳಿರುವಂತೆಯೇ ಟೂರ್ನಿಯಿಂದ ಹೊರ ಬಿದ್ದಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಐಪಿಎಲ್‌ನ ಎರಡನೇ ಹಂತ ಮತ್ತು ಟಿ20 ವಿಶ್ವಕಪ್ ನಡುವಿನ ಸಣ್ಣ ಅಂತರವಿರುವ ಬಗ್ಗೆ ಕೇಳಿದಾಗ "ಸಂಪೂರ್ಣವಾಗಿ, ನಿಮಗೆ ಹೆಚ್ಚು ವಿಶ್ರಾಂತಿ ಬೇಕಿತ್ತು" ಎಂದು ಬುಮ್ರಾ ಹೇಳಿದ್ದಾರೆ.

"ವಾಸ್ತವವಾಗಿ ನಾವು ಜೀವಿಸುತ್ತಿರುವ ಬಯೋಬಬಲ್ ವ್ಯವಸ್ಥೆ ತುಂಬಾ ಕಠಿಣವಾದದ್ದು, ಕೋವಿಡ್ 19 ಸಾಂಕ್ರಾಮಿಕ ಮತ್ತು ಬಯೋಬಬಲ್​​ಗಳನ್ನ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ.

ಆದರೂ ಬಯೋಬಬಲ್ ಆಯಾಸ ಮತ್ತು ಮಾನಸಿಕ ಆಯಾಸವೂ ಇದ್ದೇ ಇರುತ್ತದೆ. ಪದೇಪದೆ ನೀವು ಅದೇ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದರೆ, ಮಾನಸಿಕವಾಗಿ ನಿಮ್ಮನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಬುಮ್ರಾ ಹೇಳಿದ್ದಾರೆ.

ಭಾರತ ತಂಡ ಐಪಿಎಲ್​ ಮುಗಿಸಿದ ಮೂರೇ ದಿನಗಳಲ್ಲಿ ವಿಶ್ವಕಪ್​ ಅಭಿಯಾನ ಆರಂಭಿಸಿತ್ತು. ಅದಕ್ಕೂ ಮುನ್ನ ಇಂಗ್ಲೆಂಡ್​ನಲ್ಲಿ ಮೂರು ತಿಂಗಳ ಕಾಲ ಭಾರತ ತಂಡ ಬಯೋಬಬಲ್​ನಲ್ಲೇ ಕಳೆದಿತ್ತು.

ಇದನ್ನು ಓದಿ:ಹೆಚ್ಚು ಧೈರ್ಯದಿಂದ ನಾವು ಮೈದಾನಕ್ಕಿಳಿದೆವು ಎಂದು ಭಾವಿಸುವುದಿಲ್ಲ: ಸೋಲಿನ ಬಳಿಕ ಕೊಹ್ಲಿ ಮಾತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.