ETV Bharat / sports

"ನನ್ನ ಮಗ ಕ್ರೀಡೆಯಲ್ಲಿ ಇದ್ದಿದ್ದರೆ ಕೊಹ್ಲಿಯ ಬದ್ಧತೆ, ಸಮರ್ಪಣೆ ಕಲಿಸುತ್ತಿದ್ದೆ": ಬ್ರಿಯಾನ್ ಲಾರಾ - ETV Bharath Kannada news

ಕೋಲ್ಕತ್ತಾದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಬ್ರಿಯಾನ್ ಲಾರಾ ಭಾರತೀಯ ಕ್ರಿಕೆಟ್​ಗೆ ವಿರಾಟ್​ ಕೊಹ್ಲಿಯ ಬದ್ಧತೆಯನ್ನು ಮೆಚ್ಚಿದ್ದಾರೆ.

Virat Kohli
Virat Kohli
author img

By ETV Bharat Karnataka Team

Published : Dec 2, 2023, 7:09 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ನನ್ನ ಮಗ ಯಾವುದೇ ಕ್ರೀಡೆಯನ್ನು ಆಡಿದರೆ, ಅವನಿಗೆ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿಯ ಬದ್ಧತೆ ಮತ್ತು ಸಮರ್ಪಣೆಗೆ ಉದಾಹರಣೆಯಾಗಿ ತೆಗೆದುಕೊಳ್ಳುವಂತೆ ಹೇಳುತ್ತಿದ್ದೆ ಎಂದು ವೆಸ್ಟ್ ಇಂಡೀಸ್ ಲೆಜೆಂಡರಿ ಕ್ರಿಕೆಟಿಗ ಬ್ರಿಯಾನ್ ಲಾರಾ ಹೇಳಿದ್ದಾರೆ.

2023ರ ವಿಶ್ವಕಪ್​ ವಿರಾಟ್​ ಕೊಹ್ಲಿಗೆ ವಿಶೇಷ ಏಕೆಂದರೆ ಒಂದು ತವರಿನಲ್ಲಿ ನಡೆಯುತ್ತಿರುವ ಟೂರ್ನಿ ಹಾಗೇ ಇದು ಅವರ ಕೊನೆಯ ಏಕದಿನ ವಿಶ್ವಕಪ್​ ಟೂರ್ನಿಯೂ ಆಗಬಹುದು. ಭಾರತ ಈ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದರೆ, ಕೊನೆಯ ಪಂದ್ಯವನ್ನು ಗೆಲ್ಲುವಲ್ಲಿ ಎಡವಿತು. ಇದರಿಂದ ಆಸ್ಟ್ರೇಲಿಯಾ 6ನೇ ಬಾರಿಗೆ ಏಕದಿನ ವಿಶ್ವಕಪ್​ ಟ್ರೋಫಿ ಗೆದ್ದರೆ, ಭಾರತ ರನ್ನರ್​ ಅಪ್​ ಆಯಿತು.

ಭಾರತ ರನ್ನರ್​ ಅಪ್​ ಆದರೂ ವಿರಾಟ್​​ ಕೊಹ್ಲಿ ಪ್ರದರ್ಶನ ಕ್ರಿಕೆಟ್​ ಅಭಿಮಾನಿಗಳ ಮನಗೆದ್ದಿತು. ವಿರಾಟ್​ ಏಕದಿನ ಕ್ರಿಕೆಟ್​ ಮಾದರಿಯಲ್ಲಿ ಶತಕದ ಪಟ್ಟಿಯಲ್ಲಿ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದಿದ್ದಲ್ಲದೇ, ಹಲವಾರು ದಾಖಲೆಗಳನ್ನು ಮಾಡಿದರು. 50ನೇ ಏಕದಿನ ಶತಕ ದಾಖಲಿಸಿದ ವಿಶ್ವದ ಮೊದಲ ಕ್ರಿಕೆಟಿಗರಾದರು.

ವಿರಾಟ್​ ಕೊಹ್ಲಿ ಈ ಪ್ರದರ್ಶನವನ್ನು ಒಬ್ಬ ವೀಕ್ಷಕ ವಿವರಣೆಗಾರರಾಗಿ ಅಲ್ಲದೇ ಕ್ರಿಕೆಟ್​ ಪ್ರೇಮಿಯಾಗಿ ಕಂಡ ಲಾರಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ."ನನಗೆ ಒಬ್ಬ ಮಗನಿದ್ದು ಮತ್ತು ನನ್ನ ಮಗ ಯಾವುದೇ ಕ್ರೀಡೆಯನ್ನು ಆಡಬೇಕಾದರೆ ನಾನು ಕೊಹ್ಲಿಯ ಬದ್ಧತೆ ಮತ್ತು ಸಮರ್ಪಣೆಯನ್ನು ತನ್ನ ಆಟದಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡುತ್ತೇನೆ. ಆಗ ಮಾತ್ರ ಒಂದು ಕ್ರೀಡೆಯಲ್ಲಿ ನಂಬರ್ ಒನ್ ಕ್ರೀಡಾಪಟುವಾಗಲು ಸಾಧ್ಯ" ಎಂದು ಸಲಹೆ ನೀಡುತ್ತೇನೆ ಎಂದಿದ್ದಾರೆ.

"ಮೊದಲನೆಯದಾಗಿ ಭಾರತವು ವಿಶ್ವಕಪ್ ಗೆಲ್ಲದ ಕಾರಣ ವಿರಾಟ್​ ಕೊಹ್ಲಿಯ ಪ್ರದರ್ಶನವು ಅಪ್ರಸ್ತುತವಾಗುತ್ತದೆ ಎಂದು ಬಹಳಷ್ಟು ಜನರು ಹೇಳುತ್ತಾರೆ ಅಥವಾ ಈಗಾಗಲೇ ಹೇಳಿದ್ದಾರೆ ಎಂದು ನನಗೆ ತಿಳಿದಿದೆ. ಟೀಮ್ ಸ್ಪೋರ್ಟ್ ಗೆಲ್ಲುವುದು ತಂಡದ ಆಟದಿಂದ ಮತ್ತು ನೀವು ವೈಯಕ್ತಿಕ ಆಟಗಾರನಾಗಿ ತಂಡಕ್ಕೆ ಯಾವಾಗಲೂ ನಂ.1 ಆಗಿರಲು ಮಾತ್ರ ಸಾಧ್ಯ. ವಿರಾಟ್​ ಒಬ್ಬ ಆಟಗಾರನಾಗಿ ವಿಶ್ವಕಪ್​ನ ಪ್ರತಿ ಪಂದ್ಯದಲ್ಲೂ ಅದನ್ನೇ ನೀಡುತ್ತಾ ಬಂದಿದ್ದಾರೆ. ಕೊಹ್ಲಿಯಲ್ಲಿ ನನಗೆ ಇಷ್ಟವಾಗುವ ಅಂಶ ಎಂದರೆ ಅವನು ಈ ವರೆಗೆ ಆಡಿಕೊಂಡು ಬಂದ ರೀತಿ. ಅವರು ಕ್ರಿಕೆಟ್​ನ ಮಾದರಿಯನ್ನೇ ಬದಲಾಯಿಸಿದ್ದಾನೆ. ಅಲ್ಲದೇ ಅವರು ಆಟಕ್ಕಾಗಿ ತಯಾರಾಗುವ ರೀತಿ ಇಷ್ಟವಾಗುತ್ತದೆ. ವಿರಾಟ್​ ಹೊಂದಿರುವ ಶಿಸ್ತು ಯಾವಾಗಲೂ ಎದ್ದು ಕಾಣುತ್ತದೆ" ಎಂದರು.

ವಿರಾಟ್​ ವಿಶ್ವಕಪ್​ ಪ್ರದರ್ಶನ: ವಿರಾಟ್ 2023ರ ಕ್ರಿಕೆಟ್ ವಿಶ್ವಕಪ್‌ನ ಅಗ್ರ ರನ್ ಸ್ಕೋರರ್ ಆಗಿ ಹೊರಹೊಮ್ಮಿದರು. 11 ಪಂದ್ಯಗಳಲ್ಲಿ ಅವರು ಮೂರು ಶತಕಗಳು ಮತ್ತು ಆರು ಅರ್ಧಶತಕಗಳೊಂದಿಗೆ 95.62ರ ಸರಾಸರಿಯಲ್ಲಿ 765 ರನ್ ಗಳಿಸಿದರು. ಅವರ ಅತ್ಯುತ್ತಮ ಸ್ಕೋರ್ 117 ಆಗಿದೆ. ವಿರಾಟ್ ಕ್ರಿಕೆಟ್ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆದರು. 2003ರ ವಿಶ್ವಕಪ್‌ನಲ್ಲಿ ಸಚಿನ್ ಅವರ 673 ರನ್‌ ಗಳನ್ನು ಮೀರಿಸಿದರು. ಅವರು ಒಂದೇ ವಿಶ್ವಕಪ್‌ನಲ್ಲಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳನ್ನು ದಾಖಲಿಸಿದ್ದಲ್ಲದೇ ಇದರಲ್ಲೂ ಸಚಿನ್‌ರನ್ನು ಹಿಂದಿಕ್ಕಿದರು.

ಈ ವರ್ಷ 27 ಏಕದಿನಗಳಲ್ಲಿ ಆಡಿರುವ ವಿರಾಟ್ 72.47ರ ಸರಾಸರಿಯಲ್ಲಿ 1,377 ರನ್ ಗಳಿಸಿದ್ದಾರೆ ಮತ್ತು 99ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ ಹೊಂದಿದ್ದಾರೆ. ಅವರು 24 ಇನ್ನಿಂಗ್ಸ್‌ಗಳಲ್ಲಿ ಆರು ಶತಕಗಳು ಮತ್ತು ಎಂಟು ಅರ್ಧಶತಕಗಳನ್ನು ಬಾರಿಸಿದ್ದು, ಅಜೇಯ 166 ಅವರ ಅತ್ಯುತ್ತಮ ಸ್ಕೋರ್ ಆಗಿದೆ.

ಇದನ್ನೂ ಓದಿ: ಭಾರತದ ಮೂರನೇ ಮಹಿಳಾ ಗ್ರ್ಯಾಂಡ್‌ ಮಾಸ್ಟರ್ ಪ್ರಶಸ್ತಿ ಗೆದ್ದ ವೈಶಾಲಿ ರಮೇಶ್‌ಬಾಬು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.