ಚೆನ್ನೈ: ಕೋವಿಡ್ ಮಾರಕ ಸಾಂಕ್ರಾಮಿಕದ ನಡುವೆಯೂ ಬಿಸಿಸಿಐ ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಸುತ್ತಿದೆ. ಆದರೆ, ಆಯೋಜನೆ ಯಶಸ್ವಿಯಾದರೂ, ಲೀಗ್ಗಾಗಿ ಸಿದ್ಧಪಡಿಸಿರುವ ಪಿಚ್ಗಳ ಬಗ್ಗೆ ತುಂಬಾ ಟೀಕೆಗಳು ಕೇಳಿಬರುತ್ತಿವೆ.
ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ಕಠಿಣವಾಗಿದ್ದ ಚೆಪಾಕ್ ಕ್ರೀಡಾಂಗಣ ಇದೀಗ ಟಿ-20ಗೂ ಕಠಿಣವಾಗಿದೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವೇ ಈ ಸ್ಟೇಡಿಯಂನಲ್ಲಿ ರನ್ಗಳಿಸಲು ಪರದಾಡುತ್ತಿದೆ. ಚೇಸಿಂಗ್ ಮಾಡುವ ತಂಡಗಳು ಕೂಡ ತಿಣುಕಾಡುತ್ತಿವೆ. ಇಲ್ಲಿನ ಪಿಚ್ ಪರಿಸ್ಥಿತಿಯನ್ನು ನೋಡಿ ಕೆಲವು ಮಾಜಿ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ಮತ್ತು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಐಪಿಎಲ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
Hope the wickets don’t get worse as the @IPL gets deeper into the tournament..160/170 minimum not scraping to 130/140 cause the wickets are trash..
— Ben Stokes (@benstokes38) April 23, 2021 " class="align-text-top noRightClick twitterSection" data="
">Hope the wickets don’t get worse as the @IPL gets deeper into the tournament..160/170 minimum not scraping to 130/140 cause the wickets are trash..
— Ben Stokes (@benstokes38) April 23, 2021Hope the wickets don’t get worse as the @IPL gets deeper into the tournament..160/170 minimum not scraping to 130/140 cause the wickets are trash..
— Ben Stokes (@benstokes38) April 23, 2021
" ಐಪಿಎಲ್ ಇನ್ನು ಆಳವಾಗಿ ಮುಂದುವರಿದಂತೆ ಇಂತಹ ಕೆಟ್ ವಿಕೆಟ್ಗಳು ಇರುವುದಿಲ್ಲ ಎಂದು ಭಾವಿಸುತ್ತೇನೆ. ಟಿ-20 ಯಲ್ಲಿ ತಂಡವೊಂದು ಕನಿಷ್ಠ 160 ರಿಂದ 170 ರನ್ ಗಳಿಸಬೇಕೇ ಹೊರತು, 130-140 ರನ್‌ಗಳಿಗೆ ಬಹುತೇಕ ವಿಕೆಟ್ ಕಳೆದುಕೊಳ್ಳುವಂತಿರಬಾರದು" ಎಂದು ಬೆನ್ ಸ್ಟೋಕ್ಸ್ ಟ್ವೀಟ್ ಮಾಡಿದ್ದಾರೆ.
" ಇದೊಂದು ಆಘಾತಕಾರಿ ಕ್ರಿಕೆಟ್ ವಿಕೆಟ್ (ಪಿಚ್), ನಿಜ ಹೇಳಬೇಕೆಂದರೆ ಇಲ್ಲಿ ಬ್ಯಾಟ್ಸ್ಮನ್ಗಳು ಯಾವುದೇ ರೀತಿ ಲಯ ಕಂಡುಕೊಳ್ಳುವುದು ಕಷ್ಟ, ಇದು ಬೌಲರ್ಗಳಿಗೂ ಕಠಿಣವಾದ ವಿಕೆಟ್, ಇಲ್ಲಿ ಸ್ವಿಂಗ್ ಕೂಡ ಆಗುವುದಿಲ್ಲ. ಹಾಗಾಗಿ ಇದು ಒಳ್ಳೆಯ ವಿಕೆಟ್ ಎಂದು ನಾನು ಭಾವಿಸುವುದಿಲ್ಲ. ಆದರೂ ನಾವು ರಾಹುಲ್ ಮತ್ತು ಪಂಜಾಬ್ ಕಿಂಗ್ಸ್ಗೆ ಕ್ರೆಡಿಟ್ ನೀಡಬೇಕು" ಎಂದು ತಿಳಿಸಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ತಂಡ ಕೇವಲ 131 ರನ್ಗಳಿಸಿತ್ತು. ಇದನ್ನು ಬೆನ್ನತ್ತಿದ ಪಂಜಾಬ್ ತಂಡ 17.4 ಓವರ್ಗಳಲ್ಲಿ 132 ರನ್ಗಳಿಸಿ ಗುರಿ ತಲುಪಿತು.
ಇದನ್ನು ಓದಿ: ಹ್ಯಾಟ್ರಿಕ್ ಸೋಲಿನ ಬಳಿಕ ಹಳಿಗೆ ಮರಳಿದ ಪಂಜಾಬ್; ಮುಂಬೈ ವಿರುದ್ಧ 9 ವಿಕೆಟ್‌ಗಳ ಗೆಲುವು