ನವದೆಹಲಿ: 2022ರ ಮೆಗಾ ಹರಾಜಿಗೆ ಸಿದ್ಧತೆ ನಡೆಯುತ್ತಿದೆ. ಬಿಸಿಸಿಐ ಮಂಗಳವಾರವಷ್ಟೇ 590 ಆಟಗಾರರ ಆಟಗಾರರ ಪಟ್ಟಿಯನ್ನು ಮೆಗಾ ಹರಾಜಿಗೆ ಅಂತಿಮಗೊಳಿಸಿದೆ. ಇದರಲ್ಲಿ 220 ವಿದೇಶಿ ಆಟಗಾರರಿದ್ದು, ವೆಸ್ಟ್ ಇಂಡೀಸ್ನ ಹಿರಿಯ ಆಟಗಾರ ಡ್ವೇನ್ ಬ್ರಾವೋ ಕೂಡ ಹರಾಜು ಪಟ್ಟಿಯಲ್ಲಿದ್ದಾರೆ.
ಫೆಬ್ರವರಿ 11 ಮತ್ತು 12ರಂದು ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬ್ರಾವೋ ಏನಾದರೂ ಈ ಹರಾಜಿನಲ್ಲಿ ಯಾವುದಾದರೂ ತಂಡವನ್ನು ಸೇರಿಕೊಂಡರೆ ಎಲ್ಲಾ ಐಪಿಎಲ್ ಆವೃತ್ತಿಗಳನ್ನಾಡಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಡ್ವೇನ್ ಬ್ರಾವೋ 2021ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. 2018ರಲ್ಲಿ ಚಾಂಪಿಯನ್ ಆದ ತಂಡದಲ್ಲೂ ಬ್ರಾವೊ ಸಿಎಸ್ಕೆ ಪರ ಆಡಿದ್ದರು. ಇದೀಗ 15ನೇ ಆವೃತ್ತಿಯಲ್ಲಿ ಆಡಿದರೆ ಕ್ರಿಸ್ ಗೇಲ್ ಮತ್ತು ಎಬಿ ಡಿ ವಿಲಿಯರ್ಸ್ರನ್ನು ಹಿಂದಿಕ್ಕಿ ಹೆಚ್ಚು ಆವೃತ್ತಿಗಳಲ್ಲಿ ಆಡಿದ ವಿದೇಶಿ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
ಬ್ರಾವೋ ಐಪಿಎಲ್ನ ಮೊದಲ ಆವೃತ್ತಿಯಿಂದ 2010ರವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. 2011ರಿಂದ 2015ರವರೆಗೆ ಸಿಎಸ್ಕೆ ತಂಡದ ಪರ ಆಡಿದ್ದರು. ಸಿಎಸ್ಕೆ ಮತ್ತು ರಾಜಸ್ಥಾನ್ ರಾಯಲ್ಸ್ 2 ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಗುಜರಾತ್ ಲಯನ್ಸ್ ಪರ 2016 ಮತ್ತು 17ರ ಆವೃತ್ತಿಯಲ್ಲಿ ಆಡಿದ್ದರು. ಮತ್ತೆ 2018ರಲ್ಲಿ ಸಿಎಸ್ಕೆ ಕಮ್ಬ್ಯಾಕ್ ಮಾಡಿದ ನಂತರ ಸತತ 4 ಆವೃತ್ತಿಗಳ ಕಾಲ ಚೆನ್ನೈ ತಂಡದ ಭಾಗವಾಗಿದ್ದರು.
ಡ್ವೇನ್ ಬ್ರಾವೋ 151 ಪಂದ್ಯಗಳನ್ನಾಡಿದ್ದು, 167 ವಿಕೆಟ್ ಪಡೆದಿದ್ದಾರೆ. ಜೊತೆಗೆ 5 ಅರ್ಧಶತಕಗಳ ಸಹಿತ 1537 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಮ್ಯಾನೇಜ್ಮೆಂಟ್ ರಾಹುಲ್ ಯಾವ ಕ್ರಮಾಂಕದಲ್ಲಿ ಆಡಬೇಕೆಂಬುದನ್ನು ನಿರ್ಧರಿಸುವ ಅಗತ್ಯವಿದೆ: ಅಗರ್ಕರ್