ನವದೆಹಲಿ: ಕೇವಲ 28 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿರುವ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ಗೆ ಭಾರತದ ಸ್ಟಾರ್ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಲು ತಮಗೆ ದೊಡ್ಡ ಸವಾಲಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವೃತ್ತಿ ಜೀವನದಲ್ಲಿ ಹಲವಾರು ಸ್ಮರಣೀಯ ಸ್ಪೆಲ್ಗಳನ್ನು ಅಮೀರ್ ಮಾಡಿದ್ದಾರೆ. ಅದರಲ್ಲೂ 2017ರ ಚಾಂಪಿಯನ್ ಟ್ರೋಫಿ ಫೈನಲ್ ಸ್ಪೆಲ್ ಎಂದಿಗೂ ಮರೆಯುವಂತಿಲ್ಲ. ಪ್ರಶಸ್ತಿ ಸುತ್ತಿನಲ್ಲಿ 339 ರನ್ಗಳನ್ನು ಬೆನ್ನತ್ತಿದ್ದ ಭಾರತ ತಂಡ ಕೇವಲ 33ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು.ಅಮೀರ್ 6 ಓವರ್ಗಳಲ್ಲಿ ಕೇವಲ 16 ರನ್ಗಳಿಸಿ ರೋಹಿತ್, ಕೊಹ್ಲಿ ಮತ್ತು ಧವನ್ ವಿಕೆಟ್ ಪಡೆದಿದ್ದರು.
ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅವರು ಇಂಗ್ಲೆಂಡ್‌ನಲ್ಲಿ ಪತ್ನಿಯ ತವರೂರು ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ತಮ್ಮ ವಿರಾಟ್ ಜೊತೆಗಿನ ಪೈಪೋಟಿ ಹೇಗಿರುತ್ತದೆ ಎಂದು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ನಾನು ಒತ್ತಡದ ಸಂದರ್ಶನದಲ್ಲಿ ಬೌಲಿಂಗ್ ಮಾಡಲು ಆನಂದಿಸುತ್ತೇನೆ. ಅದೇ ರೀತಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳ ವಿರುದ್ಧ ಬೌಲಿಂಗ್ ಮಾಡುವುದಕ್ಕೆ ನಾನು ಹೊಂದಿಕೊಳ್ಳುತ್ತೇನೆ. ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಎನ್ನುವುದು ಅದರ ದಾಖಲೆಗಳಿಂದಲೇ ತಿಳಿಯುತ್ತದೆ. ಹಾಗಾಗಿ ಅವರಿಗೆ ಬೌಲಿಂಗ್ ಮಾಡುವುದಕ್ಕೆ ನಾನು ಇಷ್ಟಪಡುತ್ತೇನೆ ಎಂದಿದ್ದಾರೆ.
ಆದರೆ ನಿಮಗೆ ರೋಹಿತ್ ಅಥವಾ ಕೊಹ್ಲಿಗೆ ಬೌಲಿಂಗ್ ಮಾಡುವುದು ಹೇಗಿರುತ್ತದೆ ಎಂದು ಕೇಳಿದ್ದಕ್ಕೆ , ನನಗೆ ಅವರಿಬ್ಬರಿಗೆ ಬೌಲಿಂಗ್ ಮಾಡುವುದು ಕಠಿಣ ಎಂದು ಭಾವಿಸುವುದಿಲ್ಲ. ಅದರಲ್ಲೂ ರೋಹಿತ್ಗೆ ಬೌಲಿಂಗ್ ಮಾಡುವುದು ತುಂಬಾ ಸುಲಭ. ನಾನು ಅವರನ್ನು ಎರಡೂ ರೀತಿಯಲ್ಲಿ ಔಟ್ ಮಾಡಬಲ್ಲೆ, ಅವರು ಎಡಗೈ ಇನ್ಸಿಂಗ್ ಆಡುವುದಕ್ಕೆ ತುಂಬಾ ಪರದಾಡುತ್ತಾರೆ ಎಂದಿದ್ದಾರೆ.
ಆದರೆ ವಿರಾಟ್ಗೆ ಬೌಲಿಂಗ್ ಮಾಡುವುದಕ್ಕೆ ಸ್ವಲ್ಪ ಕಠಿಣ, ಏಕೆಂದರೆ ಅವರು ಒತ್ತಡದ ಸಂದರ್ಭದಲ್ಲಿ ಅತ್ಯುತ್ತಮವಾಗಿ ಆಡುತ್ತಾರೆ. ಆದರೆ ಈ ಇಬ್ಬರಿಗೆ ಬೌಲಿಂಗ್ ಮಾಡುವುದ ನನಗೆ ದೊಡ್ಡ ಸವಾಲು ಎನಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಅಮೀರ್ ವಿರುದ್ಧ ಅತಿದೊಡ್ಡ ಆರೋಪ ಮಾಡಿದ ಕನೇರಿಯಾ.. ಪಾಕ್ ಕ್ರಿಕೆಟ್ನಲ್ಲಿ ಸುಂಟರಗಾಳಿ?