ಪಾಕಿಸ್ತಾನದ ವೇಗಿಗಳು ಏಷ್ಯಾಕಪ್ನಲ್ಲಿ ತಮ್ಮ ಮಾರಕ ದಾಳಿಯ ಮೂಲಕ ವಿಶ್ವಕಪ್ಗೂ ಮುನ್ನ ತಮ್ಮ ತಂಡದ ಬಗ್ಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಏಷ್ಯಾಕಪ್ನಲ್ಲಿ ಪಾಕಿಸ್ತಾನ ಆಡಿರುವ ಮೂರು ಪಂದ್ಯದಲ್ಲಿ ತಂಡದ ಮೂವರ ವೇಗಿಗಳು ಗರಿಷ್ಠ ವಿಕೆಟ್ಗಳನ್ನು ಕಬಳಿಸಿದ್ದಾರೆ. ಜತೆಗೆ 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿರುವ ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್ ಎದುರಾಳಿಗಳನ್ನು ಕಾಡುತ್ತಿದ್ದಾರೆ.
ಸದ್ಯ ಪಾಕಿಸ್ತಾನ ತಂಡ ಏಷ್ಯಾಕಪ್ನಲ್ಲಿ ಆಡಿದ ಮೂರು ಪಂದ್ಯದಲ್ಲಿ ಎದುರಳಿ ತಂಡವನ್ನು ಆಲ್ಔಟ್ ಮಾಡಿರುವುದು ವಿಶೇಷ. ಯಾವುದೇ ತಂಡಕ್ಕೂ ಸಂಪೂರ್ಣ 50 ಓವರ್ ಆಡಲು ಅವಕಾಶ ಮಾಡಿಕೊಟ್ಟಿಲ್ಲ. ನೇಪಾಳದ ವಿರುದ್ಧದ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶುಗಳನ್ನು 23.4 ಓವರ್ಗೆ 104 ರನ್ಗೆ ಆಲ್ಔಟ್ ಮಾಡಿತ್ತು. ಭಾರತ ವಿರುದ್ಧದ ಪಂದ್ಯದಲ್ಲಿ 48.5 ಓವರ್ಗೆ 266 ರನ್ಗೆ 10 ವಿಕೆಟ್ ಉರುಳಿಸಿತ್ತು. ಈ ಪಂದ್ಯದಲ್ಲಿ ಎಲ್ಲ 10 ವಿಕೆಟ್ಗಳನ್ನು ವೇಗಿಗಳೇ ಪಡೆದಿದ್ದರು. ಇನ್ನು ನಿನ್ನೆಯ ಬಾಂಗ್ಲಾ ವಿರುದ್ಧದ ಸೂಪರ್ ಫೋರ್ ಮೊದಲ ಪಂದ್ಯದದಲ್ಲೂ 38.4 ಓವರ್ಗಳಲ್ಲಿ 193 ರನ್ಗೆ ಬಾಂಗ್ಲಾವನ್ನು ಸರ್ವಪತನಗೊಳಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ. ಈ ಪಂದ್ಯದಲ್ಲೂ ಪಾಕಿಸ್ತಾನದ ವೇಗಿಗಳು 8 ವಿಕೆಟ್ಗಳ ಪಡೆದು ಮಿಂಚಿದ್ದರು.
ಏಷ್ಯಾಕಪ್ನಲ್ಲಿ ಪಾಕ್ 30 ವಿಕೆಟ್ಗಳು ಉರುಳಿಸಿದೆ. ಇದರಲ್ಲಿ ಬಹು ಪಾಲು ವಿಕೆಟ್ಗಳನ್ನು ಶಾಹೀನ್ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ಪಡೆದಿದ್ದು, ಈ ಮೂರು ಜೋಡಿ ಸರಣಿಯಲ್ಲಿ 23 ವಿಕೆಟ್ಗಳನ್ನು ಉರುಳಿಸಿವೆ. ನಿನ್ನೆಯ ಪಂದ್ಯದಲ್ಲಿ ಫಹೀಮ್ ಅಶ್ರಫ್ 1 ವಿಕೆಟ್ ಪಡೆದಿದ್ದಾರೆ. ಫಹೀಮ್ ಅಶ್ರಫ್ ಪಾಕ್ನ ಮಧ್ಯಮ ವೇಗದ ಬೌಲರ್ ಆಗಿದ್ದಾರೆ. ಉಳಿದಂತೆ ನೇಪಾಳದ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ಶಾದಾಬ್ ಖಾನ್ 4 ವಿಕೆಟ್ ಪಡೆದು ಕಮಾಲ್ ಮಾಡಿದ್ದರು.
ಒಟ್ಟಾರೆ ನೋಡುವುದಾದರೆ ಶಾಹೀನ್ ಅಫ್ರಿದಿ 41 ಏಕದಿನ ಪಂದ್ಯದಲ್ಲಿ 40 ಇನ್ನಿಂಗ್ಸ್ಗಳನ್ನು ಆಡಿದ್ದು, 1,836 ರನ್ ನೀಡಿ 82 ವಿಕೆಟ್ ಪಡೆದುಕೊಂಡಿದ್ದಾರೆ. 5.37 ಅವರ ಎಕಾನಮಿ ಆಗಿದೆ. 35 ರನ್ ಕೊಟ್ಟು 6 ವಿಕೆಟ್ ಪಡೆದಿರುವುದು ಆಗಿದೆ. ಯುವ ಆಟಗಾರ ನಸೀಮ್ ಶಾ 12 ಏಕದಿನ ಪಂದ್ಯದಲ್ಲಿ 456 ರನ್ ಕೊಟ್ಟು 29 ವಿಕೆಟ್ ಕಬಳಿಸಿದ್ದಾರೆ
ಕಡಿಮೆ ಇನ್ನಿಂಗ್ಸ್ನಲ್ಲಿ 50 ವಿಕೆಟ್ ಪಡೆದ ಬೌಲರ್: ಪಾಕಿಸ್ತಾನದ ಹ್ಯಾರಿಸ್ ರೌಫ್ ಏಕದಿನ ಪಂದ್ಯದಲ್ಲಿ ವೇಗವಾಗಿ 50 ವಿಕೆಟ್ ಪಡೆದ ಪಾಕಿಸ್ತಾನದ 4ನೇ ಬೌಲರ್ ಆದರು. ರೌಫ್ 27 ಇನ್ನಿಂಗ್ಸ್ನಿಂದ 50 ವಿಕೆಟ್ ಪಡೆದಿದ್ದಾರೆ. ಹಸನ್ ಅಲಿ 24, ಶಹೀನ್ ಅಫ್ರಿದಿ 25 ಮತ್ತು ವಕಾರ್ ಯೂನಿಸ್ 27 ಪಂದ್ಯದಿಂದ 50 ವಿಕೆಟ್ ಸಾಧನೆ ಮಾಡಿದ ಅಗ್ರ ಮೂವರಾಗಿದ್ದಾರೆ.
ಏಷ್ಯಾಕಪ್ನಲ್ಲಿ ಹೆಚ್ಚಿನ ವಿಕೆಟ್ ಪಡೆದ ಬೌಲರ್
- ಹ್ಯಾರಿಸ್ ರೌಫ್ 3 ಪಂದ್ಯಗಳಲ್ಲಿ 20 ಓವರ್ ಬೌಲಿಂಗ್ ಮಾಡಿ 9 ವಿಕೆಟ್ಗಳನ್ನು ಪಡೆದಿದ್ದಾರೆ.
- ನಸೀಮ್ ಶಾ 3 ಪಂದ್ಯ, 19.1 ಓವರ್, 7 ವಿಕೆಟ್
- ಶಾಹೀನ್ ಶಾ ಆಫ್ರಿದಿ, 22 ಓವರ್, 7 ವಿಕೆಟ್
- ಬಾಂಗ್ಲಾದ ಟಸ್ಕಿನ್ ಅಹ್ಮದ್ 3 ಪಂದ್ಯ, 15.3 ಓವರ್, 5 ವಿಕೆಟ್
- ಶ್ರೀಲಂಕಾದ ಮತೀಶ್ ಪಥಿರಾಣ 2 ಪಂದ್ಯ, 17.4 ಓವರ್, 5 ವಿಕೆಟ್
ಇದನ್ನೂ ಓದಿ: 'ಗಬ್ಬರ್ಸಿಂಗ್' ಶಿಖರ್ ಧವನ್ ಭಾವನಾತ್ಮಕ ಸಂದೇಶ: ವಿಶ್ವಕಪ್ ಗೆದ್ದು ಬನ್ನಿ ಎಂದು ತಂಡಕ್ಕೆ ಶುಭ ಹಾರೈಕೆ