ETV Bharat / sports

SRH vs CSK: ಇಂದಿನ ಪಂದ್ಯ ಗೆದ್ದು ಪ್ಲೇ ಆಫ್​ ಅಧಿಕೃತ ಪ್ರವೇಶಕ್ಕೆ ಧೋನಿ ಪಡೆ ಸಜ್ಜು

ಸಿಎಸ್​ಕೆ ತಂಡ ತಾನು ಆಡಿರುವ 10 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಅಂಕ ಮತ್ತು ರನ್​ರೇಟ್​ ಆಧಾರದಲ್ಲಿ ಈ ತಂಡಕ್ಕೆ ಪ್ಲೇ ಆಫ್​​ ಸ್ಥಾನ ಖಚಿತ ಸಾಧ್ಯತೆ ಹೆಚ್ಚಾಗಿದ್ದರೂ ಇಂದಿನ ಪಂದ್ಯ ಗೆದ್ದರೆ ಅದು ಅಧಿಕೃತವಾಗಲಿದೆ.

Chennai vs Hyderabad
ಎಸ್​ಆರ್​ಹೆಚ್​ vs ಸಿಎಸ್​ಕೆ
author img

By

Published : Sep 30, 2021, 3:50 PM IST

ಶಾರ್ಜಾ: 2021ರ ಐಪಿಎಲ್​ನಲ್ಲಿ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಮುಂಚೂಣಿ ಸ್ಥಾನದಲ್ಲಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ಇಂದು ಕೊನೆಯ ಸ್ಥಾನಿಯಾಗಿರುವ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಕಣಕ್ಕಿಳಿಯುತ್ತಿದೆ. ಇಂದಿನ ಪಂದ್ಯ ಗೆದ್ದರೆ ಸಿಎಸ್‌ಕೆ 14ನೇ ಆವೃತ್ತಿಯಲ್ಲಿ ಪ್ಲೇ ಆಫ್​ ಪ್ರವೇಶಿಸಿದ ಮೊದಲ ತಂಡವಾಗಲಿದೆ.

ಸಿಎಸ್​ಕೆ ತಾನು ಆಡಿರುವ 10 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈಗಾಗಲೇ ಅಂಕ ಮತ್ತು ರನ್​ರೇಟ್​ ಆಧಾರದಲ್ಲಿ ಸಿಎಸ್​ಕೆ ಪ್ಲೇ ಆಫ್​​ ಸ್ಥಾನ ಖಚಿತವಾಗಿದೆಯಾದರೂ ಇಂದಿನ ಪಂದ್ಯ ಗೆದ್ದರೆ ಉಳಿದ 3 ಪಂದ್ಯಗಳನ್ನು ಸೋತರೂ ಕೂಡ ಸಿಎಸ್​ಕೆ ನಷ್ಟವಾಗುವುದಿಲ್ಲ.

ಸನ್​ರೈಸರ್ಸ್ ಹೈದರಾಬಾದ್ ಪ್ಲೇ ಆಫ್​ ರೇಸ್​ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಹಾಗಾಗಿ ಇಂದಿನ ಪಂದ್ಯ ಸೇರಿದಂತೆ ಉಳಿದ 3 ಪಂದ್ಯಗಳನ್ನು ಗೆದ್ದರೂ ಅಥವಾ ಸೋತರೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ತಪ್ಪಿಸಿಕೊಳ್ಳಲು ಮಾತ್ರ ಪ್ರಯತ್ನಿಸಬೇಕಿದೆ.

ಕಳೆದ ಪಂದ್ಯದಲ್ಲಿ ವಾರ್ನರ್​, ಮನೀಶ್ ಪಾಂಡೆ, ಜಾಧವ್​ ಸೇರಿದಂತೆ ಕೆಲವು ಹಿರಿಯರನ್ನು ಹೊರಗಿಟ್ಟಿದ್ದ ಹೈದರಾಬಾದ್​ ಜೇಸನ್‌ಗೆ ಆದ್ಯತೆ ನೀಡಿತ್ತು. ಅಲ್ಲದೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿ ಸೋಲಿನ ಸರಪಳಿಯನ್ನು ಕಳಚಿಕೊಂಡಿತು. ಇದೀಗ ಅದೇ ವಿಶ್ವಾಸದಲ್ಲಿ ಸಿಎಸ್​ಕೆ ವಿರುದ್ಧವೂ ಗೆಲ್ಲುವ ತವಕದಲ್ಲಿದೆ.

ಮುಖಾಮುಖಿ:

ಉಭಯ ತಂಡಗಳು 16 ಬಾರಿ ಮುಖಾಮುಖಿಯಾಗಿವೆ. ಸಿಎಸ್​ಕೆ 12 ಮತ್ತು ಹೈದರಾಬಾದ್​ 4 ರಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: ಹರ್ಷಲ್​ ಪಟೇಲ್​ ಕೊನೆ ಓವರ್ ಕಮಾಲ್: IPLನಲ್ಲಿ ಹೊಸ ದಾಖಲೆ ಬರೆದ ಅನ್​ಕ್ಯಾಪ್ಡ್​ ಪ್ಲೇಯರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.