ನವದೆಹಲಿ: ಬಾರ್ಡರ್ - ಗವಾಸ್ಕರ್ ಟ್ರೋಫಿ ನಾಳೆಯಿಂದ ಆರಂಭವಾಗಲಿದೆ. ಮಹಾರಾಷ್ಟ್ರದ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಆಟಗಾರರು ಉತ್ಸುಕರಾಗಿದ್ದಾರೆ. ಅಲ್ಲದೇ, ಮೊದಲ ಪಂದ್ಯದ ಮೊದಲ ದಿನದ ಆಟ ವೀಕ್ಷಿಸಲು ಅಂದಾಜು 40 ಸಾವಿರ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ.
ನಾಲ್ಕು ಪಂದ್ಯಗಳ ಈ ಟೂರ್ನಿಯಲ್ಲಿ ಭಾರತದಲ್ಲಿ 2004ರಿಂದಲೂ ಆಸ್ಟ್ರೇಲಿಯಾ ತಂಡ ಸರಣಿಯನ್ನು ಗೆದ್ದಿಲ್ಲ. ಆದರೆ, ಆಸ್ಟ್ರೇಲಿಯಾ ನೆಲದಲ್ಲಿ ಕಳೆದ ಮೂರು ಆವೃತ್ತಿಗಳಲ್ಲಿ ಭಾರತ ಎರಡು ಬಾರಿ ಟ್ರೋಫಿಯನ್ನು ಗೆದ್ದಿದೆ. 2014-15ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಭಾರತ ತಂಡ ಸರಣಿ ಸೋತಿತ್ತು. ಆಸ್ಟ್ರೇಲಿಯಾದ ಆಟಗಾರರು ಭಾರತದ ವಿರುದ್ಧ ಸರಣಿ ಗೆಲ್ಲಲು ಎದುರು ನೋಡುತ್ತಿದ್ದಾರೆ.
-
𝐓𝐡𝐞 𝐝𝐚𝐲 𝐰𝐞 𝐡𝐚𝐯𝐞 𝐛𝐞𝐞𝐧 𝐰𝐚𝐢𝐭𝐢𝐧𝐠 𝐟𝐨𝐫 𝐚𝐧𝐝 𝐭𝐡𝐞 𝐬𝐞𝐫𝐢𝐞𝐬 𝐰𝐞 𝐡𝐚𝐯𝐞 𝐛𝐞𝐞𝐧 𝐩𝐫𝐞𝐩𝐚𝐫𝐢𝐧𝐠 𝐟𝐨𝐫!
— BCCI (@BCCI) February 8, 2023 " class="align-text-top noRightClick twitterSection" data="
The Border-Gavaskar Trophy is upon us! Let's get this rolling!#INDvAUS @mastercardindia pic.twitter.com/a8awUcQOqh
">𝐓𝐡𝐞 𝐝𝐚𝐲 𝐰𝐞 𝐡𝐚𝐯𝐞 𝐛𝐞𝐞𝐧 𝐰𝐚𝐢𝐭𝐢𝐧𝐠 𝐟𝐨𝐫 𝐚𝐧𝐝 𝐭𝐡𝐞 𝐬𝐞𝐫𝐢𝐞𝐬 𝐰𝐞 𝐡𝐚𝐯𝐞 𝐛𝐞𝐞𝐧 𝐩𝐫𝐞𝐩𝐚𝐫𝐢𝐧𝐠 𝐟𝐨𝐫!
— BCCI (@BCCI) February 8, 2023
The Border-Gavaskar Trophy is upon us! Let's get this rolling!#INDvAUS @mastercardindia pic.twitter.com/a8awUcQOqh𝐓𝐡𝐞 𝐝𝐚𝐲 𝐰𝐞 𝐡𝐚𝐯𝐞 𝐛𝐞𝐞𝐧 𝐰𝐚𝐢𝐭𝐢𝐧𝐠 𝐟𝐨𝐫 𝐚𝐧𝐝 𝐭𝐡𝐞 𝐬𝐞𝐫𝐢𝐞𝐬 𝐰𝐞 𝐡𝐚𝐯𝐞 𝐛𝐞𝐞𝐧 𝐩𝐫𝐞𝐩𝐚𝐫𝐢𝐧𝐠 𝐟𝐨𝐫!
— BCCI (@BCCI) February 8, 2023
The Border-Gavaskar Trophy is upon us! Let's get this rolling!#INDvAUS @mastercardindia pic.twitter.com/a8awUcQOqh
ಹೀಗಾಗಿ ಬುಧವಾರ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮುಖ್ಯವಾಗಿ ಸ್ಪಿನ್ನಿಂಗ್ ಟ್ರ್ಯಾಕ್, ಡ್ರೈ ವಿಕೆಟ್ ತಮ್ಮ ತಂಡಕ್ಕೆ ಎಷ್ಟು ದೊಡ್ಡ ಸವಾಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಸುಮಾರು ಎರಡು ದಶಕಗಳಿಂದ ಭಾರತದ ನೆಲದಲ್ಲಿ ಸರಣಿಯನ್ನು ಗೆದ್ದಿಲ್ಲ. ಈ ಬಗ್ಗೆ ಹೆಚ್ಚು ಯೋಚಿಸಿ ತಂಡದ ಮೇಲೆ ಒತ್ತಡಯನ್ನು ಹಾಕುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಈಗಿರುವ ಆಸೀಸ್ ತಂಡ ಈ ಹಿಂದೆ ಆಡಿದ ಎಲ್ಲ ತಂಡಗಳಿಗಿಂತ ಭಿನ್ನವಾಗಿದೆ. ಆದ್ದರಿಂದ ಈ ಬಾರಿ ಗೆಲ್ಲುವ ಯೋಚನೆಯಲ್ಲಿದ್ದೇವೆ. ಭಾರತ ಪ್ರವಾಸವು ಕಠಿಣ ಎಂದು ನಮಗೆ ಗೊತ್ತಿಲ್ಲ. ಟೀಂ ಇಂಡಿಯಾ ನಿಜಕ್ಕೂ ಉತ್ತಮ ತಂಡ. ಅದರಲ್ಲೂ ವಿಶೇಷವಾಗಿ ತವರಿನಲ್ಲಿ ಉತ್ತಮವಾಗಿ ಆಡುತ್ತಾರೆ. ಆದರೂ, ನಾವು ಅತ್ಯುತ್ತಮ ಪ್ರರ್ದಶನ ನೀಡಲು ನಾವು ಉತ್ಸುಕರಾಗಿದ್ದೇವೆ ಎಂದು ಕಮಿನ್ಸ್ ತಿಳಿಸಿದ್ದಾರೆ.
ಇದೇ ವೇಳೆ ಭಾರತದ ನೆಲದಲ್ಲಿ ವಿದೇಶಿ ಸ್ಪಿನ್ನರ್‌ಗಳ ಪೈಕಿ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಟಾಡ್ ಮರ್ಫಿ ಸೇರಿದಂತೆ ನಾಥನ್ ಲಿಯಾನ್ ಮೇಲೆ ಆಸ್ಟ್ರೇಲಿಯಾ ತಂಡ ಭರವಸೆಯನ್ನು ಹೊಂದಿದೆ. ಗುರುವಾರದ ಟೆಸ್ಟ್‌ನಲ್ಲಿ ಪ್ರವಾಸಿ ತಂಡವು ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿಯಲಿದೆಯೋ ಅಥವಾ ಸ್ಪಿನ್ ತಂತ್ರವನ್ನು ಬಲಪಡಿಸುತ್ತದೆಯೋ ಎಂಬುದನ್ನು ಕಮಿನ್ಸ್ ಬಹಿರಂಗಪಡಿಸದಿದ್ದರೂ, ಇಡೀ ಜನರ ಆಟಗಾರರು ಇಡೀ ಪಂದ್ಯವನ್ನು ನಿರ್ಧರಿಸುತ್ತಾರೆ ಎಂದಿದ್ದಾರೆ.
ಮತ್ತೊಂದೆಡೆ, ಈ ಸರಣಿ ಗೆಲ್ಲುವುದು ಭಾರತಕ್ಕೆ ಅನಿವಾರ್ಯವಾಗಿದೆ. ತವರಿನಲ್ಲಿ ಬಾರ್ಡರ್ - ಗವಾಸ್ಕರ್ ಟ್ರೋಫಿ ದಾಖಲೆಯನ್ನು ಉಳಿಸಿಕೊಳ್ಳಲು ಮಾತ್ರವಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಟೀಂ ಇಂಡಿಯಾ ಆಟಗಾರರು ಈ ಸರಣಿಯನ್ನು ಗೆಲ್ಲುವುದು ಅವಶ್ಯಕವಾಗಲಿದೆ. ಆಸ್ಟ್ರೇಲಿಯ ಈಗಾಗಲೇ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಭಾರತ 2-0 ಅಥವಾ 3-0 ಅಂತರದಿಂದ ಗೆದ್ದು ತನ್ನ ಸ್ಥಾನವನ್ನೂ ಖಚಿತಪಡಿಸಿಕೊಳ್ಳಬೇಕಿದೆ.
ಆಲ್ರೌಂಡರ್ ರವೀಂದ್ರ ಜಡೇಜಾ ಫಿಟ್ ಆಗಿದ್ದು, ಸುದೀರ್ಘ ದಿನಗಳ ಬಳಿಕ ರವಿಚಂದ್ರನ್ ಅಶ್ವಿನ್ ಜೊತೆಗೆ ಜಡೇಜಾ ತಂಡವನ್ನು ಸೇರಿಕೊಳ್ಳಲು ಸಜ್ಜಾಗಿದ್ದಾರೆ. ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರನ್ನು ಯಾರನ್ನು ಕಣಕ್ಕಿಳಿಸಬೇಕೆಂಬ ಬಗ್ಗೆ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ.
ತಂಡಗಳು : ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್ ಹಾಗೂ ಸೂರ್ಯಕುಮಾರ್ ಯಾದವ್.
ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್ (ಉಪನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಮಿಚೆಲ್ ಸ್ವೆಪ್ಸನ್.
ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿ: ಇಶಾನ್ ಕಿಶನ್ ಅಥವಾ ಕೆಎಸ್ ಭರತ್.. ಯಾರಾಗಲಿದ್ದಾರೆ ಕೀಪರ್?