ಆಕ್ಲಂಡ್(ನ್ಯೂಜಿಲ್ಯಾಂಡ್): ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕೆಲ ಅಸಾಮಾನ್ಯ ಘಟನೆಗಳು ನಡೆದವು. ವಿಕೆಟ್ ಬೇಲ್ಸ್ ಬೆಳಗದೇ, ಕೆಳಕ್ಕೂ ಬೀಳದೇ ಕಿರಿಕ್ ಮಾಡಿದರೆ, ಆತಿಥೇಯ ಲಂಕಾ ತಂಡ 198 ರನ್‌ಗಳ ಹೀನಾಯ ಸೋಲು ಕಂಡಿತು. ಇದು ತಂಡದ ಎರಡನೇ ಅತ್ಯಧಿಕ ಅಂತರದ ಸೋಲಾಗಿದೆ.
ಶನಿವಾರ ನಡೆದ ಪಂದ್ಯದಲ್ಲಿ ಬ್ಯಾಟರ್ಗಳ ಸಂಪೂರ್ಣ ವೈಫಲ್ಯದಿಂದ ಲಂಕಾ ದಯನೀಯವಾಗಿ ಸೋಲೊಪ್ಪಿಕೊಂಡಿತು. 8 ಬ್ಯಾಟರ್ಗಳು ಒಂದಕಿಂಗೆ ವಿಕೆಟ್ ನೀಡಿದರೆ, ಇಬ್ಬರು ಮಾತ್ರ ಎರಡಂಕಿ ಮುಟ್ಟಿದರು. ಸವಾಲಿನ ಪಿಚ್ನಲ್ಲಿ ಕಿವೀಸ್ ಕೂಡ ಎಲ್ಲ ವಿಕೆಟ್ ಕಳೆದುಕೊಂಡು 274 ರನ್‌ಗಳ ಸವಾಲು ನೀಡಿ ಆಲೌಟ್ ಆಯಿತು.
ವಿಕೆಟ್ ಬೇಲ್ಸ್ಗಳ ಕಿರಿಕ್: ಪಂದ್ಯ ಈ ಎಲ್ಲದಕ್ಕಿಂತಲೂ ವಿಕೆಟ್ಗಳಿಂದಲೇ ಹೆಚ್ಚು ಗಮನ ಸೆಳೆಯಿತು. ಉಭಯ ತಂಡಗಳಿಗೂ ವಿಕೆಟ್ ವರದಾನವಾಯಿತು. ಲಂಕಾದ ಕಸುನ್ ರಜಿತಾ ಎಸೆದ 4 ನೇ ಓವರ್ನಲ್ಲಿ ಕಿವೀಸ್ ಆರಂಭಿಕ ಆಟಗಾರ ಫಿನ್ ಅಲೆನ್ ಕಣ್ತಪ್ಪಿಸಿ ಚೆಂಡು ವಿಕೆಟ್ಗೆ ಬಡಿಯಿತು. ಆದರೆ, ಅದರ ಬೇಲ್ಸ್ ಮಾತ್ರ ಉರುಳಿಬೀಳಲಿಲ್ಲ. ವಿಕೆಟ್ ಅಂಚಿಗೆ ತಾಗಿದ ಕಾರಣ ಬೇಲ್ಸ್ ಬೆಳಗದೆ, ಬೀಳಲೂ ಇಲ್ಲ. ಇದು ಅಲ್ಲಿದ್ದ ಎಲ್ಲರನ್ನೂ ಅಚ್ಚರಿಗೆ ದೂಡಿತು. ವಿಕೆಟ್ ಬೀಳದ ಕಾರಣ ಫಿನ್ ಅಲೆನ್ ಔಟಾಗುವ ಪ್ರಮೇಯ ಬರಲಿಲ್ಲ.
-
Crazy! The bails didn't come off
— Spark Sport (@sparknzsport) March 25, 2023 " class="align-text-top noRightClick twitterSection" data="
Watch BLACKCAPS v Sri Lanka live and on-demand on Spark Sport#SparkSport #NZvSL pic.twitter.com/JMHodjHjJl
">Crazy! The bails didn't come off
— Spark Sport (@sparknzsport) March 25, 2023
Watch BLACKCAPS v Sri Lanka live and on-demand on Spark Sport#SparkSport #NZvSL pic.twitter.com/JMHodjHjJlCrazy! The bails didn't come off
— Spark Sport (@sparknzsport) March 25, 2023
Watch BLACKCAPS v Sri Lanka live and on-demand on Spark Sport#SparkSport #NZvSL pic.twitter.com/JMHodjHjJl
ವಿಕೆಟ್ಗೆ ಚೆಂಡು ಬಡಿದರೂ ಅದೃಷ್ಟ ಎಂಬಂತೆ ಬೇಲ್ಸ್ ಬೀಳದ ಕಾರಣ ಫಿನ್ ಅಲೆನ್ ಆಟ ಮುಂದುವರಿಸಿದರು. ಭರ್ಜರಿ ಬ್ಯಾಟ್ ಬೀಸಿ ಅರ್ಧಶತಕ ಗಳಿಸಿದರು. ವಿಕೆಟ್ಗೆ ಚೆಂಡು ಬಡಿದಿದ್ದನ್ನು ಲಂಕಾ ನಾಯಕ, ಆಟಗಾರರು ಅಂಪೈರ್ಗೆ ಮನವಿ ಮಾಡಿದರು. ಆದರೆ, ಬೇಲ್ಸ್ ಉರುಳಿ ಬೀಳದೇ ಔಟ್ ಸಿಗಲಿಲ್ಲ.
ಬೇಲ್ಸ್ ದೀಪ ಉರಿಯದೇ ರನೌಟ್ ಮಿಸ್: ಪಂದ್ಯದಲ್ಲಿ ಮತ್ತೊಂದು ವಿಚಿತ್ರ ಪ್ರಸಂಗ ಕೂಡ ನಡೆಯಿತು. ರನೌಟ್ ಆಗಿದ್ದರೂ ವಿಕೆಟ್ ದೀಪ ಹೊತ್ತಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಅಂಪೈರ್ಗಳು ಔಟ್ ನಿರಾಕರಿಸಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ. 18 ನೇ ಓವರ್ನಲ್ಲಿ ಈ ಘಟನೆ ಸಂಭವಿಸಿತು. ಲಂಕಾದ ಕರುಣರತ್ನೆ ರನ್ ಓಡುತ್ತಿದ್ದಾಗ ಕಿವೀಸ್ನ ಟಿಕ್ನರ್ ಚೆಂಡನ್ನು ಪಡೆದು ವಿಕೆಟ್ಗೆ ತಗುಲಿಸಿದರು. ಆದರೆ, ವಿಕೆಟ್ ದೀಪ ಉರಿಯಲಿಲ್ಲ. ಪರಿಶೀಲಿಸಿದಾಗ ಬ್ಯಾಟರಿ ಸಮಸ್ಯೆಯಿಂದಾಗಿ ಈ ರೀತಿ ನಡೆದಿರುವುದು ಗೊತ್ತಾಯಿತು.
ಕಿವೀಸ್ ಆಟಗಾರರ ಮನವಿಯ ಮೇರೆಗೆ ವಿಡಿಯೋ ರಿಪ್ಲೈ ನೋಡಿದ ಮೂರನೇ ಅಂಪೈರ್ ಚೆಂಡು ವಿಕೆಟ್ಗೆ ತಾಗಿಸಿದ್ದರೂ ದೀಪ ಹೊತ್ತಿಕೊಳ್ಳದ ಕಾರಣ ನೌಟೌಟ್ ಎಂದು ತೀರ್ಪು ನೀಡಿದರು. ವಿಕೆಟ್ ಬೀಳುವ ಹೊತ್ತಿಗೆ ಕರುಣರತ್ನೆ ಕ್ರೀಸ್ ತಲುಪಿದ್ದರು. ಈ ನಿರ್ಣಯ ವಿವಾದಕ್ಕೆ ಕಾರಣವಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೂ ಗುರಿಯಾಗಿದೆ.
ಎರಡನೇ ಅತಿದೊಡ್ಡ ಸೋಲು: ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 274 ರನ್‌ಗಳ ಗುರಿ ನೀಡಿತು. 275 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಬ್ಯಾಟಿಂಗ್ ವೈಫಲ್ಯ ಮತ್ತು ಹೆನ್ರಿ ಶಿಪ್ಲಿ ವೇಗಕ್ಕೆ ಕುಸಿದು 76 ರನ್‌ಗಳಿಗೆ ಆಲೌಟ್ ಆಯಿತು. ಶಿಪ್ಲಿ 5 ವಿಕೆಟ್ಗಳ ಗೊಂಚಲು ಪಡೆದರು. ನ್ಯೂಜಿಲೆಂಡ್ ವಿರುದ್ಧ ಇದು ಅತ್ಯಧಿಕ ರನ್‌ಗಳ ಸೋಲಾದರೆ, ಐದನೇ ಐದನೇ ಬಾರಿಗೆ ಕಡಿಮೆ ರನ್ಗೆ ಲಂಕಾ ಔಟ್ ಆಯಿತು. ಇದಕ್ಕೂ ಮೊದಲು ತಿರುವನಂತಪುರಂನಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ವಿಶ್ವದಾಖಲೆಯ 317 ರನ್‌ಗಳ ಸೋಲು ಕಂಡಿದೆ.
ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಐತಿಹಾಸಿಕ ಚಿನ್ನದ ಪದಕ ಗೆದ್ದ ನಿತು - ಸ್ವೀಟಿ ಬೂರಾ