ETV Bharat / sports

IND vs SA: 'ಅತ್ಯುತ್ತಮ ಪ್ರದರ್ಶನ ಇನ್ನೂ ಬರಬೇಕಿದೆ'... 7 ವಿಕೆಟ್ ಪಡೆದು​ ದಾಖಲೆ ಬರೆದ ಠಾಕೂರ್​ ಪ್ರತಿಕ್ರಿಯೆ

ಪಂದ್ಯದ ಸದ್ಯದ ಸ್ಥಿತಿ, ನೋಡಿದರೆ ಯಾರು ಗೆಲ್ಲುತ್ತಾರೆ ಎಂದು ಹೇಳಲಾಗದು. ದೊಡ್ಡ ಗುರಿ ನೀಡುತ್ತ ನಾವು ಯತ್ನಿಸುತ್ತೇವೆ. ಕೊನೆಯ ಎರಡು ದಿನಗಳಲ್ಲಿ ಈ ಪಿಚ್​ನಲ್ಲಿ ಬ್ಯಾಟಿಂಗ್​ ಮಾಡುವುದು ಸುಲಭವಲ್ಲ. ಬೃಹತ್​ ಗುರಿ ನೀಡಲು ಸಾಕಷ್ಟು ಸಮಯಾವಕಾಶವಿದೆ ಎಂದು ಶಾರ್ದುಲ್ ಠಾಕೂರ್​ ತಿಳಿಸಿದರು.

shardul thakur
ಶಾರ್ದುಲ್​ ಠಾಕೂರ್​ ಪ್ರತಿಕ್ರಿಯೆ
author img

By

Published : Jan 5, 2022, 10:35 AM IST

ಜೋಹಾನ್ಸ್‌ಬರ್ಗ್: 'ಅತ್ಯುತ್ತಮ ಪ್ರದರ್ಶನ ಇನ್ನೂ ಬರಬೇಕಿದೆ' ಎಂಂದು ಭಾರತ ತಂಡದ ವೇಗದ ಬೌಲರ್​​ ಶಾರ್ದುಲ್​ ಠಾಕೂರ್​ ಪ್ರತಿಕ್ರಿಯೆ ನೀಡಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ 2ನೇ ದಿನ 7 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾ ಇನ್ನಿಂಗ್ಸ್​ಗೆ ಮಾರಕವಾದ ಅವರು ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದರು.

ಠಾಕೂರ್ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್( 61ಕ್ಕೆ 7 ವಿಕೆಟ್​​) ಪ್ರದರ್ಶನದ ಬಲದಿಂದ ಭಾರತವು ಎರಡನೇ ಟೆಸ್ಟ್‌ನಲ್ಲಿ ಕಮ್​ಬ್ಯಾಕ್​ ಮಾಡಲು ಸಾಧ್ಯವಾಗಿದೆ. ಅಲ್ಲದೆ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತೀಯ ಬೌಲರ್​ವೊಬ್ಬರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಇದಾಗಿದೆ. ದ. ಆಫ್ರಿಕಾ ನೆಲದಲ್ಲಿ 7 ವಿಕೆಟ್ ಪಡೆದ ಏಷ್ಯಾದ ಮೊದಲ ವೇಗದ​ ಬೌಲರ್ ಕೂಡ​ ಅವರಾಗಿದ್ದಾರೆ.

ಅಂಕಿ - ಅಂಶಗಳ ಪ್ರಕಾರ ಇದು ನನ್ನ ಅತ್ಯುತ್ತಮ ಪ್ರದರ್ಶನವಾಗಿದೆ. ಆದರೆ, ಅತ್ಯುತ್ತಮ ಪ್ರದರ್ಶನ ಇನ್ನೂ ಬರಬೇಕಿದೆ ಎಂದು ನಾನು ನಂಬುತ್ತೇನೆ ಎಂದು ಪಂದ್ಯದ ನಂತರದ ಮಾಧ್ಯಮಗೋಷ್ಠಿಯಲ್ಲಿ ಠಾಕೂರ್ ಹೇಳಿದರು. ನಾನು ಬೌಲಿಂಗ್ ಮಾಡಲು ಪ್ರಾರಂಭಿಸುವ ವೇಳೆಗೆ, ಪಿಚ್​​ನ 22 ಅಡಿ ಭಾಗದಲ್ಲಿ ಚೆಂಡು ಪುಟಿದೇಳುವುದು ಹಾಗೂ ಕೆಳಹಂತದಲ್ಲಿ ಬ್ಯಾಟರ್​ಗಳತ್ತ ಮುನ್ನುಗ್ಗುತ್ತಿರುವುದು ಕಂಡುಬಂತು. ಹೀಗಾಗಿ ನಾನು ಆ ಸಂದರ್ಭದಲ್ಲಿ ನಿರೀಕ್ಷಿತ ಏರಿಯಾ ಹಾಗೂ ಪಿಚ್​ನಲ್ಲಿನ ಬಿರುಕುಗಳ ಸದ್ಬಳಕೆಗೆ ಯತ್ನಿಸಿದೆ ಎಂದರು.

ಇದನ್ನೂ ಓದಿ: ಹರಿಣಗಳ ನಾಡಿನಲ್ಲಿ 7 ವಿಕೆಟ್​ ಪಡೆದ ಏಷ್ಯಾದ ಮೊದಲ ವೇಗಿ ಶಾರ್ದೂಲ್​ ಠಾಕೂರ್​

ಎರಡೂ ಮೈದಾನಗಳನ್ನು ನೋಡಿದರೆ ಸೆಂಚುರಿಯನ್‌ನಂತೆ ವಾಂಡರರ್ಸ್‌ನಲ್ಲೂ ಸಹ ಪಿಚ್‌ ಬೌಲಿಂಗ್​ಗೆ​ ನೆರವಾಗುತ್ತಿದೆ. ನಿಖರವಾಗಿ ದಾಳಿ ನಡೆಸಿದರೆ, ಬ್ಯಾಟರ್​ಗಳಿಗೆ ಎದುರಿಸುವುದು ಕಷ್ಟವಾಗುತ್ತದೆ. ನಾನು ಕೂಡ ಅದನ್ನೇ ಪ್ರಯತ್ನಿಸಿದೆ ಎಂದು ಅವರು ಹೇಳಿದರು.

ಪಂದ್ಯದ ಸದ್ಯದ ಸ್ಥಿತಿ ನೋಡಿದರೆ ಯಾರು ಗೆಲ್ಲುತ್ತಾರೆಂದು ಹೇಳಲಾಗದು. ದೊಡ್ಡ ಗೆಲುವಿನ ಗುರಿ ನೀಡುವತ್ತ ನಾವು ಯತ್ನಿಸುತ್ತೇವೆ. ಕೊನೆಯ ಎರಡು ದಿನಗಳಲ್ಲಿ ಈ ಪಿಚ್​ನಲ್ಲಿ ಬ್ಯಾಟಿಂಗ್​ ಮಾಡುವುದು ಸುಲಭವಲ್ಲ. ಬೃಹತ್​ ಗುರಿ ನೀಡಲು ಸಾಕಷ್ಟು ನಮ್ಮ ಬಳಿ ಸಮಯಾವಕಾಶವಿದೆ ಎಂದು ಠಾಕೂರ್​ ತಿಳಿಸಿದರು.

ಇದನ್ನೂ ಓದಿ: ತವರಿನಲ್ಲೇ ನ್ಯೂಜಿಲ್ಯಾಂಡ್​ಗೆ ಮರ್ಮಾಘಾತ: ಕಿವೀಸ್​ ನೆಲದಲ್ಲಿ ಐತಿಹಾಸಿಕ ಟೆಸ್ಟ್​ ಗೆದ್ದ ಬಾಂಗ್ಲಾದೇಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.