ನವದೆಹಲಿ: ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವುಳ್ಳ ಯುವ ಕ್ರಿಕೆಟ್ ತಾರೆಗಳನ್ನು ಗುರುತಿಸಲು ಬಿಸಿಸಿಐ ಉತ್ಸುಕವಾಗಿದೆ. ಈ ಸಂಬಂಧ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಆಯ್ದ 20 ಆಲ್ರೌಂಡರ್ಗಳಿಗೆ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ. ಆಗಸ್ಟ್ನಲ್ಲಿ ಪ್ರಾರಂಭವಾಗಿ ಮೂರು ವಾರಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಆಯ್ದ ಸುಮಾರು 20 ಆಲ್ರೌಂಡರ್ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿರುವ ತರಬೇತಿ ಶಿಬಿರದಲ್ಲಿ ಖ್ಯಾತ ಕ್ರಿಕೆಟ್ ತಾರೆ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಇರಲಿದ್ದಾರೆ. ಅರ್ಜುನ್ ತೆಂಡೂಲ್ಕರ್ ಗೋವಾ ಪರ ಕ್ರಿಕೆಟ್ ಆಡುತ್ತಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದರು.
ಈ ಆಟಗಾರರ ಪಟ್ಟಿಯಲ್ಲಿ ಸೌರಾಷ್ಟ್ರ ತಂಡದ ಆಲ್ರೌಂಡರ್ ಚೇತನ್ ಸಕಾರಿಯಾ ಇದ್ದಾರೆ. ಇವರು ಈಗಾಗಲೇ 2021ರಲ್ಲಿ ಭಾರತದ ಪರ ಆಡಿದ್ದಾರೆ. ಅಲ್ಲದೇ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಪಂಜಾಬ್ ಎಡಗೈ ಬ್ಯಾಟರ್ ಮತ್ತು ಸ್ಪಿನ್ ಬೌಲರ್ ಅಭಿಷೇಕ್ ಶರ್ಮ ಕೂಡ ಇದ್ದು, ಇವರು ಸನ್ರೈಸರ್ಸ್ ಪರ ಆಡಿದ್ದರು. ಗೋವಾದ ಆಟಗಾರ ಮೋಹಿತ್ ರೆಡ್ಕರ್, ರಾಜಸ್ಥಾನದ ಮನವ್ ಸುತಾರ್, ಜೊತೆಗೆ ದೆಹಲಿಯ ವೇಗಿ ಹರ್ಷಿತ್ ರಾಣಾ, ಮಧ್ಯಮ ವೇಗಿ ದಿವಿಜ್ ಮೇಹ್ರಾ ಕೂಡ ಕ್ಯಾಂಪ್ನಲ್ಲಿರಲಿದ್ದಾರೆ.
ಇದನ್ನೂ ಓದಿ : ಭಾರತದ ಟೆಸ್ಟ್ ಕ್ರಿಕೆಟ್ ತಂಡ ಬದಲಾಗುತ್ತಾ? ಪ್ರಥಮ ದರ್ಜೆ ಪಂದ್ಯಗಳಲ್ಲಿ ಗಮನ ಸೆಳೆದ ಪ್ರತಿಭೆಗಳಿಗೆ ಸಿಗುವುದೇ ಅವಕಾಶ?
ವರ್ಷದ ಕೊನೆಯಲ್ಲಿ 23 ವರ್ಷದೊಳಗಿನ (U-23) ಏಷ್ಯಾ ಕಪ್ ಪಂದ್ಯಾಟ ಪ್ರಾರಂಭವಾಗಲಿದೆ. ಈ ಸಂಬಂಧ ಎಲ್ಲ ರೀತಿಯಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲ ಪ್ರತಿಭೆಗಳಿಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ. ಈ ಮೂಲಕ ಉತ್ತಮ ಪ್ರದರ್ಶನ ನೀಡಬಲ್ಲ ಕ್ರಿಕೆಟ್ ಯುವ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಲು ಬಿಸಿಸಿಐ ಮುಂದಾಗಿದೆ.
ಆಲ್-ರೌಂಡರ್ಸ್ ಶಿಬಿರ ಎನ್‌ಸಿಎ ಮುಖ್ಯಸ್ಥ ವಿವಿಯಸ್ ಲಕ್ಷ್ಮಣ್ ಅವರ ಕಲ್ಪನೆಯಾಗಿದ್ದು, ಈ ಶಿಬಿರವು ಎಲ್ಲ ಕ್ರಿಕೆಟ್ ಮಾದರಿಯಲ್ಲಿ ಉತ್ತಮ ಕೌಶಲ್ಯಗಳನ್ನು ಹೊಂದಿರುವ ಆಟಗಾರರನ್ನು ರೂಪಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಶಿಬಿರಕ್ಕೆ ಶಿವಸುಂದರ್ ದಾಸ್ ನೇತೃತ್ವದ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯು ಪ್ರದರ್ಶನ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಿದೆ.
ಕ್ಯಾಂಪ್ಗೆ ಆಯ್ಕೆಯಾಗಿರುವ ಆಟಗಾರರೆಲ್ಲರೂ ಉತ್ತಮ ಆಲ್ರೌಂಡರ್ಗಳಲ್ಲ. ಕೆಲವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರೆ, ಮತ್ತೆ ಕೆಲವರು ಉತ್ತಮ ಬೌಲಿಂಗ್ ಪ್ರದರ್ಶನ ಮಾಡುವವರಾಗಿದ್ದಾರೆ. ಕ್ಯಾಂಪ್ ಮೂಲಕ ಈ ಆಟಗಾರರನ್ನು ಉನ್ನತ ಮಟ್ಟದ ಪ್ರದರ್ಶನ, ಮತ್ತು ಆಟಗಾರರ ಕೌಶಲ್ಯಗಳನ್ನು ಹೆಚ್ಚು ಮಾಡುವುದು ಉದ್ದೇಶ ಎಂದು ಬಿಸಿಸಿಐ ಹೇಳಿದೆ.
ಇದನ್ನೂ ಓದಿ : ICC World Cup 2023: ನ್ಯೂಜಿಲೆಂಡ್ ತಂಡಕ್ಕೆ ಎರಡನೇ ಆಘಾತ.. ವಿಶ್ವಕಪ್ನಿಂದ ಮೈಕೆಲ್ ಬ್ರೇಸ್‌ವೆಲ್ ಔಟ್