ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸ್ಥಳ ಬದಲಾವಣೆಯನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದ್ದು, ಸರಣಿಯ ಮೂರನೇ ಪಂದ್ಯ ಮಾರ್ಚ್ 1 ರಂದ 5ರ ವರೆಗೆ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯಲಿದೆ.
-
NEWS - Venue for third Test of the @mastercardindia Australia tour of India for Border-Gavaskar Trophy shifted to Indore from Dharamsala. #INDvAUS
— BCCI (@BCCI) February 13, 2023 " class="align-text-top noRightClick twitterSection" data="
More details here - https://t.co/qyx2H6N4vT pic.twitter.com/N3W00ukvYJ
">NEWS - Venue for third Test of the @mastercardindia Australia tour of India for Border-Gavaskar Trophy shifted to Indore from Dharamsala. #INDvAUS
— BCCI (@BCCI) February 13, 2023
More details here - https://t.co/qyx2H6N4vT pic.twitter.com/N3W00ukvYJNEWS - Venue for third Test of the @mastercardindia Australia tour of India for Border-Gavaskar Trophy shifted to Indore from Dharamsala. #INDvAUS
— BCCI (@BCCI) February 13, 2023
More details here - https://t.co/qyx2H6N4vT pic.twitter.com/N3W00ukvYJ
ಕಳಪೆ ಔಟ್‌ಫೀಲ್ಡ್ ಪರಿಸ್ಥಿತಿಯಿಂದಾಗಿ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಟ್ವಿಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಬಿಸಿಸಿಐ ಕ್ಯುರೇಟರ್ ತಪೋಶ್ ಚಟರ್ಜಿ ಅವರ ವರದಿಯು ಔಟ್‌ಫೀಲ್ಡ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅನರ್ಹವೆಂದು ಪರಿಗಣಿಸಿದ ಹಿನ್ನೆಲೆ ಪಂದ್ಯವನ್ನು ಇಂದೋರ್ನಲ್ಲಿ ಮಾಡಲು ನಿರ್ಧರಿಸಲಾಗಿದೆ.
"ಮಾಸ್ಟರ್ ಕಾರ್ಡ್ ಪ್ರಯೋಜಕತ್ವದ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯವನ್ನು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆಡಲು ನಿರ್ಧರಿಸಲಾಗಿತ್ತು. ಆದರೆ, ಔಟ್‌ಫೀಲ್ಡ್ ಸಾಕಷ್ಟು ಹುಲ್ಲಿನ ಸಾಂದ್ರತೆಯನ್ನು ಹೊಂದಿಲ್ಲ ಮತ್ತು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲು ಹೆಚ್ಚಿನ ದಿನ ಬೇಕಾದ್ದರಿಂದ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ " ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
2017 ರಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಆಯೋಜಿಸಲಾಗಿತ್ತು. ಅಂದೂ ಕೂಡ ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ನಡೆದಿತ್ತು. ಉಭಯ ದೇಶಗಳ ನಡುವಿನ 2016/17 ಸರಣಿಯ ಅಂತಿಮ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಆ ಗೆಲುವಿನೊಂದಿಗೆ ಭಾರತ 2-1 ಅಂತರದಲ್ಲಿ ಸರಣಿಯನ್ನು ಗೆದ್ದು ಮತ್ತೆ ಬಾರ್ಡರ್ ಗವಾಸ್ಕರ್ ಟ್ರೋಫಿ ತೆಕ್ಕೆಗೆ ತೆಗೆದುಕೊಂಡಿತ್ತು.
ಮೊದಲ ಪಂದ್ಯದಲ್ಲಿ ಗೆದ್ದ ಭಾರತ: 2023ರ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಸ್ಪಿನ್ನರ್ಗಳ ಪ್ರಾಬಲ್ಯದಿಂದ ಭಾರತ ಗೆದ್ದು ಕೊಂಡಿದೆ. ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. ವಿದರ್ಭ ಕ್ರೀಡಾಂಗಣದಲ್ಲಿ ರವೀಂದ್ರ ಜಡೇಜ ಮತ್ತು ಆರ್ ಅಶ್ವಿನ್ ಅವರು ಆಸ್ಟ್ರೇಲಿಯಾ ಬ್ಯಾಟರ್ಗಳನ್ನು ಕಾಡಿದ್ದು ಮೂರೇ ದಿನದಲ್ಲಿ ಪಂದ್ಯ ಮುಕ್ತಾಯವಾಗಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾವನ್ನು ಜಡೇಜಾ ಕಾಡಿದರು. ಮೊದಲ ಇನ್ನಿಂಗ್ಸ್ನಲ್ಲಿ ಆಸಿಸ್ 177ಕ್ಕೆ ಅಲ್ ಔಟ್ ಆಯಿತು. ಜಡೇಜಾ ಐದು ವಿಕೆಟ್ಗಳ ಗುಚ್ಚವನ್ನು ತೆಗೆದುಕೊಂಡರು. ಅಶ್ವಿನ್ ಮೂರು ವಿಕೆಟ್ಗಳನ್ನು ಉರುಳಿಸಿದರು. ಕಾಂಗರೂ ಪಡೆ ಪರ ಲಬುಶೇನೆ 49 ರನ್ ಗೆಳಿಸಿದ್ದೇ ಹೆಚ್ಚಿನ ರನ್ ಗಳಿಕೆಯಾಗಿತ್ತು.
ಭಾರತದ ಮೊದಲ ಇನ್ನಿಂಗ್ಸ್ನಲ್ಲಿ ಪ್ರಮುಖ ಬ್ಯಾಟರ್ಗಳು ವಿಫಲರಾದರು. ನಾಯಕ ರೋಹಿತ್ ಶರ್ಮಾ 120 ರನ್ ಗಳಿಸಿದರು. ನಂತರ ಬೌಲಿಂಗ್ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ 70 ರನ್ ಮತ್ತು ಅಕ್ಷರ್ ಪಟೇಲ್ ಗಳಿಸಿದ 84 ರನ್ನಿಂದ ಭಾರತ 400 ರನ್ ಕಲೆ ಹಾಕಿ 223 ರನ್ನ ಮುನ್ನಡೆ ಸಾಧಿಸಿತು.
ಎರಡನೇ ಇನ್ನಿಂಗ್ಸ್ನಲ್ಲಿ ಕಾಡಿದ ಆರ್ ಅಶ್ವಿನ್ ಕಾಂಗರೂ ಪಡೆಯ ಪ್ರಮುಖ 5 ವಿಕೆಟ್ಗಳನ್ನು ಕಿತ್ತರು. ಇದರಿಂದ ಆಸ್ಟ್ರೇಲಿಯಾ ತಂಡ 91 ರನ್ಗೆ ಆಲ್ ಔಟ್ ಆಯಿತು. ಭಾರತ ಇನ್ನಿಂಗ್ಸ್ ಜೊತೆಗೆ 132 ರನ್ಗಳ ಗೆಲುವು ದಾಖಲಿಸಿತು. ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ಫೆಬ್ರವರಿ 17ರಿಂದ ಆರಂಭವಾಗಲಿದೆ.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸನಿಹಕ್ಕೆ ಭಾರತ: ಫೈನಲ್ ಲೆಕ್ಕಾಚಾರವೇನು?