ETV Bharat / sports

ಐಪಿಎಲ್​ ಪೂರ್ಣಗೊಳಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್? ಆದ್ರೆ ಇಸಿಬಿ ಒಪ್ಪಿಗೆ ಬೇಕೇಬೇಕು!

ಭಾರತ ತಂಡದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯನ್ನು ಇಂಗ್ಲೆಂಡ್ ನೆಲದಲ್ಲೇ ಆಡಲಿದೆ. ವಿಶ್ವಕಪ್​ ಅಕ್ಟೋಬರ್ ಮಧ್ಯಂತರದಲ್ಲಿ ಆರಂಭವಾಗಲಿರುವುದರಿಂದ ಅರ್ಧಕ್ಕೆ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್​ ಅನ್ನು ಇಂಗ್ಲೆಂಡ್​ನಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ.

author img

By

Published : May 19, 2021, 5:10 PM IST

ಐಪಿಎಲ್ 2021
ಐಪಿಎಲ್ 2021

ಮುಂಬೈ: ಕೋವಿಡ್ 19 ಕಾರಣ ಅರ್ಧಕ್ಕೆ ರದ್ದಾಗಿರುವ ಇಂಡಿಯನ್​ ಪ್ರೀಮಿಯರ್ ಲೀಗ್​ನ ಮುಂದುವರಿದ ಭಾಗವನ್ನು ನಡೆಸಲು ಇಂಗ್ಲೆಂಡ್​ ಬಿಸಿಸಿಐ ಮುಂದಿರುವ ಮೊದಲ ಆಯ್ಕೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಭಾರತ ತಂಡದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯನ್ನು ಇಂಗ್ಲೆಂಡ್ ನೆಲದಲ್ಲೇ ಆಡಲಿದೆ. ವಿಶ್ವಕಪ್​ ಅಕ್ಟೋಬರ್ ಮಧ್ಯಂತರದಲ್ಲಿ ಆರಂಭವಾಗಲಿರುವುದರಿಂದ ಅರ್ಧಕ್ಕೆ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್​ ಅನ್ನು ಇಂಗ್ಲೆಂಡ್​ನಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ.

ಅದಕ್ಕಾಗಿ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿನ ಬೇಗ ಮುಗಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಜೊತೆಗೆ ಮಾತುಕತೆ ನಡೆಸುತ್ತಿದೆ. ಕೆಲವೊಂದು ಪಂದ್ಯ 9 ದಿನಗಳ ಅಂತರವಿದೆ. ಹಾಗೂ ಜುಲೈ ತಿಂಗಳಲ್ಲಿ ಭಾರತ ತಂಡ ಯಾವುದೇ ಕ್ರಿಕೆಟ್​ ಇಲ್ಲದೇ ಕೇವಲ ಇಂಟ್ರಾಸ್ಕ್ವಾಡ್ ಪಂದ್ಯಗಳನ್ನಾಡಲಿದೆ. ಆದ್ದರಿಂದ ಟೆಸ್ಟ್​ ಸರಣಿಯನ್ನು ಬೇಗ ಮುಗಿಸಲು ಕೇಳಿಕೊಳ್ಳಬಹುದು ಎಂದು ತಿಳಿದು ಬಂದಿದೆ.

ಒಂದು ವೇಳೆ ಇಸಿಬಿ ಇದಕ್ಕೆ ಒಪ್ಪಿಗೆ ಸೂಚಿಸಿದರೆ, ಐಪಿಎಲ್ ಪೂರ್ಣಗೊಳಿಸಲು ಅನುಕೂಲವಾಗಲಿದೆ. ಜೊತೆಗೆ ಕೌಂಟಿ ಕ್ಲಬ್​ಗಳು ಆದಾಯ ಕಾಣಬಹುದು ಎನ್ನಲಾಗುತ್ತಿದೆ. ಆದರೆ ಎರಡೂ ಕ್ರಿಕೆಟ್​ ಮಂಡಳಿಗಳು ಈ ವಿಚಾರದ ಬಗ್ಗೆ ಇನ್ನೂ ಬಹಿರಂಗವಾಗಿ ಯಾವುದೇ ಮಾಹಿತಿ ನೀಡಿಲ್ಲ. ಮೇ 29ರಂದು ಬಿಸಿಸಿಐ ಸಭೆ ನಡೆಯಲಿದ್ದು, ಈ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳದಿರಲು ಕಾರಣ ತಿಳಿಸಿದ ಬೌಚರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.