ETV Bharat / sports

ಅಹಮದಾಬಾದ್​ನಲ್ಲಿ ಐಪಿಎಲ್ ಫೈನಲ್... ಪುಣೆಯಲ್ಲಿ ವುಮೆನ್ಸ್ ಟಿ-20 ಚಾಲೆಂಜ್​ - ಇಂಡಿಯನ್ ಪ್ರೀಮಿಯರ್ ಲೀಗ್

ಐಪಿಎಲ್ ಕ್ವಾಲಿಫೈಯರ್​ 1 ಮತ್ತು ಎಲಿಮಿನೇಟರ್​ ಪಂದ್ಯಗಳು ಕೋಲ್ಕತ್ತಾದಲ್ಲಿ ಕ್ರಮವಾಗಿ ಮೇ 24 ಮತ್ತು ಮೇ 25ರಂದು ನಡೆಯಲಿವೆ. ಕ್ವಾಲಿಫೈಯರ್ 2 ಮತ್ತು ಫೈನಲ್​ ಪಂದ್ಯಕ್ಕೆ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದ್ದು, ಮೇ 27 ಮತ್ತು 29ರಂದು ಈ ಪಂದ್ಯಗಳು ಪ್ರೇಕ್ಷಕರ ಮುಂದೆ ನಡೆಯಲಿದೆ ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.

BCCI announces IPL playoff venues
BCCI announces IPL playoff venues
author img

By

Published : May 3, 2022, 8:15 PM IST

ಮುಂಬೈ: ಮೇ 29ರಂದು ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯ ನಡೆಯಲಿದೆ. ವುಮೆನ್ಸ್ ಟಿ-20 ಚಾಲೆಂಜ್ ಮೇ 23ರಿಂದ 28ರವರೆಗೆ ಪುಣೆಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮಂಗಳವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಐಪಿಎಲ್ ಕ್ವಾಲಿಫೈಯರ್​ 1 ಮತ್ತು ಎಲಿಮಿನೇಟರ್​ ಪಂದ್ಯಗಳು ಕೋಲ್ಕತ್ತಾದಲ್ಲಿ ಕ್ರಮವಾಗಿ ಮೇ 24 ಮತ್ತು ಮೇ 25ರಂದು ನಡೆಯಲಿವೆ. ಕ್ವಾಲಿಫೈಯರ್ 2 ಮತ್ತು ಫೈನಲ್​ ಪಂದ್ಯಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದ್ದು, ಮೇ 27 ಮತ್ತು 29ರಂದು ಈ ಪಂದ್ಯಗಳು ಪ್ರೇಕ್ಷಕರ ಮುಂದೆ ನಡೆಯಲಿದೆ ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.

ಕಳೆದ ತಿಂಗಳು ನಡೆದಿದ್ದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ವುಮೆನ್ಸ್ ಟಿ-20 ಚಾಲೆಂಜ್​ ಲಖನೌ ದಲ್ಲಿ ನಡೆಯಲಿದೆ ಎಂದು ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದರು. ಆದರೆ, ಇದೀಗ ಪುಣೆಗೆ ಸ್ಥಳಾಂತರಗೊಂಡಿದೆ.

ಈ ಕಿರು ಟೂರ್ನಿಯಲ್ಲಿ ಮೂರು ಲೀಗ್ ಪಂದ್ಯಗಳು ಮತ್ತು ಫೈನಲ್ ಪಂದ್ಯ ನಡೆಯಲಿದೆ. ಈ ಟೂರ್ನಿ ಮುಂದಿನ ವರ್ಷದಿಂದ ನಡೆಯುವುದಿಲ್ಲ. ಏಕೆಂದರೆ 2023 ರಿಂದ 5 ಅಥವಾ 6 ತಂಡಗಳ ಮಹಿಳಾ ಐಪಿಎಲ್ ಆಯೋಜಿಸಲು ಬಿಸಿಸಿಐ ಯೋಜನೆ ಮಾಡುತ್ತಿದೆ.

ಇದನ್ನೂ ಓದಿ:ಕಾಟ್ರೆಲ್​ಗೆ ಸಿಡಿಸಿದ ಆ ಸಿಕ್ಸರ್​ಗಳು ತೆವಾಟಿಯಾ ಆತ್ಮವಿಶ್ವಾಸ ಹೆಚ್ಚಳಕ್ಕೆ ಕಾರಣ: ಗವಾಸ್ಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.