ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೂನ್ 12 ರಂದು ಹಾಂಗ್ ಕಾಂಗ್‌ನಲ್ಲಿ ಪ್ರಾರಂಭವಾಗಲಿರುವ ಮುಂಬರುವ ಎಸಿಸಿ ಉದಯೋನ್ಮುಖ ಮಹಿಳಾ ಏಷ್ಯಾ ಕಪ್ 2023 ಗಾಗಿ ಭಾರತ ‘ಎ’ ತಂಡವನ್ನು ಶುಕ್ರವಾರ ಪ್ರಕಟಿಸಿದೆ. ಟೂರ್ನಿಯಲ್ಲಿ ಭಾರತ ತಂಡ ಸೇರಿದಂತೆ ಎಂಟು ತಂಡಗಳು ಭಾಗವಹಿಸಲಿದ್ದು ಎ ಮತ್ತು ಬಿ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತೀಯ ವನಿತೆಯರ 'ಎ' ತಂಡ ಎ ಗುಂಪಿನಲ್ಲಿದೆ.
ಒಂದೇ ಗುಂಪಿನಲ್ಲಿ ಭಾರತ - ಪಾಕಿಸ್ತಾನ: ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತದ ವನಿತೆಯರ 'ಎ' ತಂಡವು, ಜೂನ್ 13 ರಂದು ಟಿನ್ ಕ್ವಾಂಗ್ ರೋಡ್ ರಿಕ್ರಿಯೇಷನ್ ಗ್ರೌಂಡ್‌ನಲ್ಲಿ ಹಾಂಗ್ ಕಾಂಗ್ ಅನ್ನು ಎದುರಿಸಲಿದೆ. ಜೂನ್ 15 ರಂದು ಥಾಯ್ಲೆಂಡ್ ತಂಡವನ್ನು ಎದುರಿಸಲಿರುವ ಭಾರತದ ವನಿತೆಯರು, ಜೂನ್ 17 ರಂದು ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಇದು ಗುಂಪು ಹಂತದ ನಿರ್ಣಾಯಕ ಪಂದ್ಯವಾಗಿರಲಿದೆ. ಫೈನಲ್ ಪಂದ್ಯವು ಜೂನ್ 21, 2023 ರಂದು ನಡೆಯಲಿದೆ.
-
BCCI announces India 'A' (Emerging) squad for ACC Emerging Women's Asia Cup 2023
— ANI Digital (@ani_digital) June 2, 2023 " class="align-text-top noRightClick twitterSection" data="
Read @ANI Story | https://t.co/EPPdoKNntZ#BCCI #Cricket #AsiaCup2023 pic.twitter.com/X3FlkDCPHF
">BCCI announces India 'A' (Emerging) squad for ACC Emerging Women's Asia Cup 2023
— ANI Digital (@ani_digital) June 2, 2023
Read @ANI Story | https://t.co/EPPdoKNntZ#BCCI #Cricket #AsiaCup2023 pic.twitter.com/X3FlkDCPHFBCCI announces India 'A' (Emerging) squad for ACC Emerging Women's Asia Cup 2023
— ANI Digital (@ani_digital) June 2, 2023
Read @ANI Story | https://t.co/EPPdoKNntZ#BCCI #Cricket #AsiaCup2023 pic.twitter.com/X3FlkDCPHF
ಆತಿಥೇಯ ಹಾಂಗ್‌ಕಾಂಗ್, ಭಾರತ, ಥಾಯ್ಲೆಂಡ್ ಮತ್ತು ಪಾಕಿಸ್ತಾನ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಮುಖ್ಯ ಕೋಚ್ ನೂಶಿನ್ ಅಲ್ ಖದೀರ್ ಭಾರತ ‘ಎ’ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಹೈವೋಲ್ಟೇಜ್ ಪಂದ್ಯ: ಭಾರತ ‘ಎ’ ತಂಡವು ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಆಡಲಿದೆ. ಜೂನ್ 13 ರಂದು ಹಾಂಗ್ ಕಾಂಗ್ ವಿರುದ್ಧ ಸೆಣಸಲಿದ್ದರೆ, ಜೂನ್ 15 ರಂದು ಥಾಯ್ಲೆಂಡ್ ಮತ್ತು ಜೂನ್ 17 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ಇದು ಹೈವೋಲ್ಟೇಜ್ ಪಂದ್ಯವಾಗಿರಲಿದೆ. ಭಾರತ ‘ಎ’ ತಂಡದ ವನಿತೆಯರು ಸದ್ಯ ಉತ್ತಮ ಲಯದಲ್ಲಿದೆ. ಅತ್ಯುತ್ತಮ ಫಲಿತಾಂಶಕ್ಕೆ ಇದೊಂದು ಒಳ್ಳೆಯ ವೇದಿಕೆ. ಆದರೆ, ವಿದೇಶಿ ನೆಲದಲ್ಲಿ ಹೇಗೆ ವರ್ಕೌಟ್ ಆಗಲಿದೆ ಅನ್ನೋದನ್ನು ಕಾದುನೋಡಬೇಕಿದೆ ಎನ್ನುತ್ತಾರೆ ತಂಡದ ಮುಖ್ಯಸ್ಥರು.
ಭಾರತ ‘ಎ’ (ಉದಯೋನ್ಮುಖ) ತಂಡ: ಶ್ವೇತಾ ಸೆಹ್ರಾವತ್ (ನಾಯಕಿ), ಸೌಮ್ಯ ತಿವಾರಿ (ಉಪನಾಯಕಿ), ತ್ರಿಶಾ ಗೊಂಗಡಿ, ಮುಸ್ಕಾನ್ ಮಲಿಕ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಮಮತಾ ಮಡಿವಾಳ (ವಿಕೆಟ್ ಕೀಪರ್), ಟಿಟಾ ಯಶಸ್ರಿ ಎಸ್, ಕಶ್ವೀ ಗೌತಮ್, ಪಾರ್ಶವಿ ಚೋಪ್ರಾ, ಮನ್ನತ್ ಕಶ್ಯಪ್, ಬಿ ಅನುಷಾ.
ಭಾರತ ‘ಎ’ ತಂಡದ ವೇಳಾಪಟ್ಟಿ:
ಜೂನ್ 13, 2023: ಭಾರತ ‘ಎ’ ವಿರುದ್ಧ ಹಾಂಗ್ ಕಾಂಗ್ ‘ಎ’
ಜೂನ್ 15, 2023: ಭಾರತ ‘ಎ’ ವಿರುದ್ಧ ಥಾಯ್ಲೆಂಡ್ ‘ಎ’
ಜೂನ್ 17, 2023: ಭಾರತ ‘ಎ’ ವಿರುದ್ಧ ಪಾಕಿಸ್ತಾನ ‘ಎ’
ಇದನ್ನೂ ಓದಿ: WTC Final 2023: ಭಾರತದ ಸ್ಪಿನ್ ಬೌಲರ್ಗಳು ಓವೆಲ್ ಪಿಚ್ನಲ್ಲೂ ಕಾಡುವ ಭಯ ಇದೆ - ಸ್ಟೀವ್ ಸ್ಮಿತ್