ನವದೆಹಲಿ: ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಮೂರು ಟೆಸ್ಟ್ ಪಂದ್ಯಗಳ ಸರಣಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಬಲಿಷ್ಠ 18 ಸದಸ್ಯರ ತಂಡ ಪ್ರಕಟಗೊಂಡಿದೆ. ತಂಡದಲ್ಲಿ ಕೆಲವೊಂದಿಷ್ಟು ಬದಲಾವಣೆ ಮಾಡಲಾಗಿದ್ದು, ಹನುಮ್ ವಿಹಾರಿ ಟೆಸ್ಟ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದುಕೊಂಡಿದ್ದ ವಿಕೆಟ್ ಕೀಪರ್ ಬ್ಯಾಟರ್ ಶ್ರೀಕಾರ್ ಭರತ್ಗೆ ಕೊಕ್ ನೀಡಲಾಗಿದ್ದು, ತಂಡಕ್ಕೆ ವಿಕೆಟ್ ಕೀಪರ್ ರಿಷಭ್ ಪಂತ್ ಮರಳಿದ್ದಾರೆ. ಇವರ ಜೊತೆಗೆ ಮತ್ತೋರ್ವ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾಗೆ ಇನ್ನೊಂದು ಅವಕಾಶ ನೀಡಲಾಗಿದೆ.
-
Squad: Virat Kohli (Capt),Rohit Sharma(vc), KL Rahul, Mayank Agarwal, Cheteshwar Pujara, Ajinkya Rahane, Shreyas Iyer, Hanuma Vihari, Rishabh Pant(wk), Wriddhiman Saha(wk), R Ashwin, Jayant Yadav, Ishant Sharma, Mohd. Shami, Umesh Yadav, Jasprit Bumrah, Shardul Thakur, Md. Siraj. pic.twitter.com/6xSEwn9Rxb
— BCCI (@BCCI) December 8, 2021 " class="align-text-top noRightClick twitterSection" data="
">Squad: Virat Kohli (Capt),Rohit Sharma(vc), KL Rahul, Mayank Agarwal, Cheteshwar Pujara, Ajinkya Rahane, Shreyas Iyer, Hanuma Vihari, Rishabh Pant(wk), Wriddhiman Saha(wk), R Ashwin, Jayant Yadav, Ishant Sharma, Mohd. Shami, Umesh Yadav, Jasprit Bumrah, Shardul Thakur, Md. Siraj. pic.twitter.com/6xSEwn9Rxb
— BCCI (@BCCI) December 8, 2021Squad: Virat Kohli (Capt),Rohit Sharma(vc), KL Rahul, Mayank Agarwal, Cheteshwar Pujara, Ajinkya Rahane, Shreyas Iyer, Hanuma Vihari, Rishabh Pant(wk), Wriddhiman Saha(wk), R Ashwin, Jayant Yadav, Ishant Sharma, Mohd. Shami, Umesh Yadav, Jasprit Bumrah, Shardul Thakur, Md. Siraj. pic.twitter.com/6xSEwn9Rxb
— BCCI (@BCCI) December 8, 2021
ಟೀಂ ಇಂಡಿಯಾ ಇಂತಿದೆ: ವಿರಾಟ್ ಕೊಹ್ಲಿ(ಕ್ಯಾಪ್ಟನ್), ರೋಹಿತ್ ಶರ್ಮಾ(ಉಪನಾಯಕ), ಮಯಾಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್(ವಿ.ಕೀ), ವೃದ್ಧಿಮಾನ್ ಸಹಾ(ವಿ.ಕೀ), ಆರ್.ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್
ಮೀಸಲು ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಹರ್, ಅರ್ಜನ್ ನಾಗಸ್ವಾಲ್
ಕೋಚ್ಗೆ ಮೊದಲ ವಿದೇಶಿ ಪ್ರವಾಸ: ರಾಹುಲ್ ದ್ರಾವಿಡ್ ಕೋಚ್ ಆದ ನಂತರ ಟೀಂ ಇಂಡಿಯಾದ ಮೊದಲ ವಿದೇಶಿ ಪ್ರವಾಸ ಇದಾಗಿದ್ದು, ಕಳಪೆ ಫಾರ್ಮ್ ಹೊರತಾಗಿ ಕೂಡ ಟೀಂ ಇಂಡಿಯಾ ಇಶಾಂತ್ ಶರ್ಮಾಗೆ ಅವಕಾಶ ನೀಡಿದೆ. ಇನ್ನು ತಂಡದ ಉಪನಾಯಕನಾಗಿದ್ದ ರಹಾನೆ ಬ್ಯಾಟ್ನಿಂದ ರನ್ ಹರಿದು ಬರುತ್ತಿಲ್ಲ. ಇದರ ಹೊರತಾಗಿ ಕೂಡ ಚಾನ್ಸ್ ನೀಡಲಾಗಿದ್ದು, ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಡೌಟ್ ಎನ್ನಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಟೀಂ ಇಂಡಿಯಾ ಕೇವಲ ಇಬ್ಬರು ಸ್ಪಿನ್ನರ್ಗಳೊಂದಿಗೆ ತೆರಳುತ್ತಿದ್ದು, ಇದರಲ್ಲಿ ಆರ್.ಅಶ್ವಿನ್ ಮತ್ತು ಜಯಂತ್ ಯಾದವ್ ಇದ್ದಾರೆ.
ಪ್ರಮುಖ ಪ್ಲೇಯರ್ಸ್ ಕಮ್ಬ್ಯಾಕ್: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ಕೆ.ಎಲ್ ರಾಹುಲ್, ರಿಷಭ್ ಪಂತ್, ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ತಂಡಕ್ಕೆ ಮರಳಿದ್ದು, ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ್ದ ಹನುಮ್ ವಿಹಾರಿ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಇನ್ನು ಗಾಯಗೊಂಡಿರುವ ಶುಬ್ಮನ್ ಗಿಲ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ಗೆ ತಂಡದಿಂದ ಕೈಬಿಡಲಾಗಿದ್ದು, ವಿಕೆಟ್ ಕೀಪರ್ ಭರತ್ಗೆ ಕೊಕ್ ನೂಡಲಾಗಿದೆ.