ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ): ಜೂನ್ 9ರಿಂದ ಟೀಂ ಇಂಡಿಯಾ ವಿರುದ್ಧ ಆರಂಭಗೊಳ್ಳಲಿರುವ ಟಿ-20 ಸರಣಿಗೋಸ್ಕರ ಕ್ರಿಕೆಟ್ ಆಫ್ರಿಕಾ ತಂಡ ಪ್ರಕಟಿಸಿದೆ. ನಾಯಕತ್ವದ ಜವಾಬ್ದಾರಿ ಟೆಂಬ ಬವುಮಾ ವಹಿಸಿಕೊಂಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್ಗೆ ಮಣೆ ಹಾಕಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿರುವ 21 ವರ್ಷದ ಟ್ರಿಸ್ಟನ್ ಸ್ಟಬ್ಸ್ಗೆ ಅವಕಾಶ ನೀಡಲಾಗಿದ್ದು, ಚೊಚ್ಚಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಆಡಲಿದ್ದಾರೆ.
ತಮ್ಮ ಪವರ್ ಹಿಟ್ಟಿಂಗ್ ಕೌಶಲ್ಯದಿಂದ ಹೆಚ್ಚು ಖ್ಯಾತಿ ಗಳಿಸಿರುವ ಸ್ಟಬ್ಸ್ ಕಳೆದ ವರ್ಷ ಕ್ರಿಕೆಟ್ ಸೌತ್ ಆಫ್ರಿಕಾ ಆಯೋಜನೆ ಮಾಡಿದ್ದ ಟಿ-20 ಚಾಲೆಂಜ್ನಲ್ಲಿ Gbets ವಾರಿಯರ್ಸ್ ಪರ ಆಡುತ್ತಿದ್ದಾಗ 7 ಇನ್ನಿಂಗ್ಸ್ಗಳಿಂದ 183ರ ಸ್ಟ್ರೈಕ್ ರೇಟ್ನಲ್ಲಿ 23 ಸಿಕ್ಸರ್ ಸೇರಿದಂತೆ 293 ರನ್ ಗಳಿಕೆ ಮಾಡಿದ್ದರು. ಉಳಿದಂತೆ ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಅರ್ನಿಚ್ ನೋರ್ಡ್ಜೆ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್ ಹಾಗೂ ವೇಯ್ನ್ ಪಾರ್ನೆಲ್ ತಂಡದಲ್ಲಿ ಚಾನ್ಸ್ ಪಡೆದು ಕೊಂಡಿದ್ದಾರೆ.
ಒಟ್ಟು 17 ಸದಸ್ಯರ ತಂಡ ಪ್ರಕಟಿಸಲಾಗಿದ್ದು,ಅನುಭವಿಗಳಾಗಿರುವ ಕ್ವಿಂಟನ್ ಡಿಕಾಕ್, ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಕಗಿಸೋ ರಬಾಡ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಇವರು ಐಪಿಎಲ್ನಲ್ಲಿ 1,000 ರನ್ ಗಳಿಸಿ, 100 ವಿಕೆಟ್ ಪಡೆದ 4ನೇ ಆಟಗಾರ!
ದಕ್ಷಿಣ ಆಫ್ರಿಕಾ ತಂಡ: ಟಿಂಬಾ ಬವುಮಾ(ಕ್ಯಾಪ್ಟನ್). ಕ್ವಿಂಟನ್ ಡಿಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆನ್ರಿಚ್ ನೋರ್ಡ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೋ ರಬಾಡ, ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೋ ಜಾನ್ಸೆನ್
-
PROTEAS SQUAD ANNOUNCEMENT ⚠️
— Cricket South Africa (@OfficialCSA) May 17, 2022 " class="align-text-top noRightClick twitterSection" data="
Tristan Stubbs receives his maiden call-up 💪
Anrich Nortje is back 👌
India, here we come 🇮🇳
Full squad 🔗 https://t.co/uEyuaqKmXf#INDvSA #BePartOfIt pic.twitter.com/iQUf21zLrB
">PROTEAS SQUAD ANNOUNCEMENT ⚠️
— Cricket South Africa (@OfficialCSA) May 17, 2022
Tristan Stubbs receives his maiden call-up 💪
Anrich Nortje is back 👌
India, here we come 🇮🇳
Full squad 🔗 https://t.co/uEyuaqKmXf#INDvSA #BePartOfIt pic.twitter.com/iQUf21zLrBPROTEAS SQUAD ANNOUNCEMENT ⚠️
— Cricket South Africa (@OfficialCSA) May 17, 2022
Tristan Stubbs receives his maiden call-up 💪
Anrich Nortje is back 👌
India, here we come 🇮🇳
Full squad 🔗 https://t.co/uEyuaqKmXf#INDvSA #BePartOfIt pic.twitter.com/iQUf21zLrB
ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಐದು ಟಿ-20 ಪಂದ್ಯಗಳ ಸರಣಿ ಜೂನ್ 9ರಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಉಳಿದಂತೆ ಕಟಕ್, ವಿಶಾಖಪಟ್ಟಣಂ, ರಾಜ್ಕೋಟ್ ಹಾಗೂ ಬೆಂಗಳೂರಿನಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ಈ ಸರಣಿಗೋಸ್ಕರ ಟೀಂ ಇಂಡಿಯಾ ಮುಂದಿನ ಕೆಲ ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಕೆಲ ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.