ETV Bharat / sports

ಪಂದ್ಯ ಮುಗಿಯುವ ಮುನ್ನವೇ ಟೆಸ್ಟ್​ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟರ್​

author img

By

Published : Jul 10, 2021, 4:26 PM IST

ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಆದರೆ, ನನಗೆ ಬೇರೆಯವರಿಂದ ಕರೆ ಬಂದಿದ್ದು, ಮಹ್ಮದುಲ್ಲಾ ಇನ್ಮುಂದೆ ಟೆಸ್ಟ್​ ಕ್ರಿಕೆಟ್​ ಆಡುವುದಿಲ್ಲ ಎಂದು ನಿರ್ಧರಿಸಿದ್ದಾರೆಂದು ನನಗೆ ತಿಳಿಸಿದ್ದಾರೆ..

ಮಹ್ಮದುಲ್ಲಾ ನಿವೃತ್ತಿ
ಮಹ್ಮದುಲ್ಲಾ ನಿವೃತ್ತಿ

ಹರಾರೆ : ಬಾಂಗ್ಲಾದೇಶದ ಆಲ್​ರೌಂಡರ್​ ಮಹ್ಮದುಲ್ಲಾ ಪ್ರಸ್ತುತ ಜಿಂಬಾಬ್ವೆ ವಿರುದ್ಧದ ಟೆಸ್ಟ್​ ಸರಣಿಯ ನಂತರ ಸುದೀರ್ಘ ಮಾದರಿಗೆ ನಿವೃತ್ತಿಯಾಗುವುದಾಗಿ ಶನಿವಾರ ಘೋಷಿಸಿಕೊಂಡಿದ್ದಾರೆ. ಟೆಸ್ಟ್​ ಪಂದ್ಯದ ಮೂರನೇ ದಿನದಾಟದ ಅಂತ್ಯದ ನಂತರ ಮಹ್ಮದುಲ್ಲಾ ನಿವೃತ್ತಿ ಹೊಂದುವ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.

ಆದರೆ, ಪಂದ್ಯ ಮುಗಿಯುವ ಮುನ್ನವೇ ಮಹ್ಮದುಲ್ಲಾ ಅವರ ಈ ದಿಢೀರ್​ ನಿರ್ಧಾರ ಬಾಂಗ್ಲಾದೇಶ ತಂಡಕ್ಕೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್​ ಹೇಳಿದ್ದಾರೆ.

ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಆದರೆ, ನನಗೆ ಬೇರೆಯವರಿಂದ ಕರೆ ಬಂದಿದ್ದು, ಮಹ್ಮದುಲ್ಲಾ ಇನ್ಮುಂದೆ ಟೆಸ್ಟ್​ ಕ್ರಿಕೆಟ್​ ಆಡುವುದಿಲ್ಲ ಎಂದು ನಿರ್ಧರಿಸಿದ್ದಾರೆಂದು ನನಗೆ ತಿಳಿಸಿದ್ದಾರೆ ಎಂದು ನಜ್ಮುಲ್ ಇಎಸ್​ಪಿಎನ್​ಗೆ ತಿಳಿಸಿದ್ದಾರೆ.

ಆದರೆ, ಆತನ ಡ್ರೆಸ್ಸಿಂಗ್​ ರೂಮಿನಲ್ಲಿ ಮೇಲಿಂದ ಮೇಲೆ ತಾವೂ ಟೆಸ್ಟ್​ ಆಡುವುದಿಲ್ಲ ಎಂದು ಹೇಳುವುದು ಅಸಮಾನ್ಯವೆಂದು ನಾನು ಭಾವಿಸುತ್ತೇನೆ. ಏಕೆಂದರೆ, ಪಂದ್ಯ ಇನ್ನು ಮುಗಿದಿಲ್ಲ. ಅವರು ಈ ನಿರ್ಧಾರ ತಂಡದ ಮೇಲೆ ಋಣಾತ್ಮಕವಾಗಿ ಪ್ರಭಾವ ಬೀರುತ್ತದೆ.

ಇದು ಸ್ವೀಕಾರಾರ್ಹವಲ್ಲ. ಯಾರಾದರೂ ಆಡುವುದಕ್ಕೆ ಬಯಸುವುದಿಲ್ಲ ಎನ್ನುವುದರಿಂದ ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಸರಣಿ ಮಧ್ಯೆ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

35 ವರ್ಷದ ಮಹ್ಮದುಲ್ಲಾ ಬಾಂಗ್ಲಾದೇಶದ ಪರ 49 ಟೆಸ್ಟ್​, 197 ಏಕದಿನ ಮತ್ತು 89 ಟಿ20 ಪಂದ್ಯಗಳನ್ನಾಡಿದ್ದಾರೆ. ಮೂರು ಮಾದರಿಯಿಂದ 8680 ರನ್​ ಮತ್ತು 150 ವಿಕೆಟ್​ ಪಡೆದಿದ್ದಾರೆ.

ಇದನ್ನು ಓದಿ: India vs Sri Lanka: ಜುಲೈ 13ರ ಬದಲು 18ರಿಂದ ODI ಸರಣಿ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.